Nagendran's Honeymoons Movie : ಪ್ರೇಮುಲು, ಮಂಜುಮ್ಮಲ್ ಬಾಯ್ಸ್, ಭ್ರಮಯುಗಂ, ಆವೇಶಂ, ಆಡು ಜೀವನ ಮುಂತಾದ ಚಿತ್ರಗಳು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಕಂಡವು. ಈ ಎಲ್ಲಾ ಚಿತ್ರಗಳು ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ರೀ-ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಇದೀಗ ಮತ್ತೊಂದು ಕುತೂಹಲಕಾರಿ ವೆಬ್ ಸಿರೀಸ್ ಪ್ರೇಕ್ಷಕರ ಎದಿರು ಬರುತ್ತಿದೆ. ಅದೇ ʼನಾಗೇಂದ್ರನ ಹನಿಮೂನ್ʼ..
ಇತ್ತೀಚೆಗೆ ಮಲಯಾಳಂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗುತ್ತಿವೆ. ಸ್ಟಾರ್ ಹೀರೋಯಿನ್ ಗಳು, ಬಿಗ್ ಬಜೆಟ್ ಸಿನಿಮಾಗಳ ಹೊರತಾಗಿ ವಿಭಿನ್ನ ಕಂಟೆಂಟ್ ಸ್ಟೋರಿಗಳನ್ನು ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ತಯಾರಾದ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿವೆ.
ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ಆಕಸ್ಮಿಕ ಘಟನೆ, ದರ್ಶನ್ ಒಳ್ಳೆ ವ್ಯಕ್ತಿ : ಬಿಸಿ ಪಾಟೀಲ್
ನಾಗೇಂದ್ರನ್ ಹನಿಮೂನ್ ಮಲಯಾಳಂ ವೆಬ್ ಸೀರೀಸ್, ಇದರಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಸುರಾಜ್ ವೆಂಜರಮೂಡ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಒನ್ ಲೈಫ್ ಫೈವ್ ವೈವ್ಸ್ ಎಂಬ ಉಪಶೀರ್ಷಿಕೆ ಹೊತ್ತ ಈ ಸಿನಿಮಾದ ಟೈಟಲ್ ಕ್ಯೂರಿಯಾಸಿಟಿ ಮೂಡಿಸಿದೆ.. ಇದರ ಬೆನ್ನಲ್ಲೆ, ಈ ವೆಬ್ ಸರಣಿಯ ಸ್ಟ್ರೀಮಿಂಗ್ ದಿನಾಂಕ ರಿವೀಲ್ ಆಗಿದೆ...
കഥകളും പൊട്ടിച്ചിരികളുമായി #NagendransHoneymoons ട്രെയിലർ നാളെ വൈകുന്നേരം 6 മണിക്ക്!#HotstarSpecials #NagendransHoneymoons #NagendransHoneymoonsOnHotstar #DisneyPlusHotstar #ComingSoon pic.twitter.com/CU5PJvEumG
— DisneyPlus Hotstar Malayalam (@DisneyplusHSMal) July 5, 2024
ಜನಪ್ರಿಯ OTT ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ಆಗಸ್ಟ್ 17 ರಿಂದ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತಿದೆ. ಮಲಯಾಳಂ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಇತರ ಭಾಷೆಗಳಲ್ಲೂ ಬಿಡುಗಡೆಯಾಗಲಿದೆಯಂತೆ. ಗ್ರೇಸ್ ಆಂಟೋನಿ, ಕನಿ ಕುಶ್ರುತಿ, ಶ್ವೇತಾ ಮೆನನ್, ಅಲ್ಪಿ ಪಂಜಿಕರನ್, ನಿರಂಜನ್ ಅನುಪ್ ಈ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಿರ್ದೇಶಕ ರೆಂಜಿ ಫಣಿಕ್ಕರ್ ನಿರ್ದೇಶನದ ಈ ಕಾಮಿಡಿ ವೆಬ್ ಸೀರೀಸ್ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews