Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ತೃತೀಯ ಪೂರ್ಣ ತಿಥಿ ಸೋಮವಾರದ ಈ ದಿನ ಆಶ್ಲೇಷ ನಕ್ಷತ್ರ, ವಜ್ರ ಯೋಗ ಇರಲಿದೆ. ಈ ದಿನ ಮೇಷದಿಂದ ಮೀನ ರಾಶಿಯವರೆಗೆ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ಬೇರೆಯವರೊಂದಿಗೆ ಅಹಂಕಾರದಿಂದ ವರ್ತಿಸುವುದನ್ನು ತಪ್ಪಿಸಿ. ಕಚೇರಿ ಕೆಲಸಕ್ಕೆ ಸಂಬಂಧಿಸಿದಂತೆ ಸೋಮಾರಿತನವು ನಿಮಗೆ ಭಾರೀ ನಷ್ಟವನ್ನು ಉಂಟುಮಾಡಬಹುದು. ಸರ್ಕಾರಿ ಅಧಿಕಾರಿಗಳೊಂದಿಗೆ ವಿವಾದಗಳಿರಬಹುದು.
ವೃಷಭ ರಾಶಿಯವರ ಭವಿಷ್ಯ (Taurus Horoscope):
ನಿಮ್ಮ ಜೊತೆಗಿರುವವರೇ ಬೆನ್ನಿಗೆ ಚೂರಿ ಹಾಕುವ ಸಂಭವವಿದೆ. ಈ ಬಗ್ಗೆ ತುಂಬಾ ಜಾಗರೂಕರಗಿರಿ. ಕೆಲಸಗಳು ನಿರೀಕ್ಷೆಯಂತೆ ಪೂರ್ಣಗೊಂಡಾಗ ಮನಸ್ಸು ಉಲ್ಲಾಸಗೊಳ್ಳುತ್ತದೆ. ವ್ಯಾಪಾರದಲ್ಲಿ ಹೊಸ ಪ್ರಯೋಗಗಳು ಲಾಭದಾಯಕವಾಗುತ್ತವೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಕಛೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ತಿಳಿಸಲಾದ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿ. ವ್ಯಾಪಾರದಲ್ಲಿ ಆಸಕ್ತಿ ಇರುವ ಮಹಿಳೆಯರು ಈ ಸಂಬಂಧ ಆನ್ಲೈನ್ ಶಿಕ್ಷಣವನ್ನು ತೆಗೆದುಕೊಳ್ಳಬೇಕು. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯವಹಿಸುವುದನ್ನು ತಪ್ಪಿಸಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಉದ್ಯೋಗಸ್ಥರಿಗೆ ಬಾಸ್ ನಿಮ್ಮೊಂದಿಗೆ ಕೋಪಿಸಿಕೊಳ್ಳಬಹುದು. ಇದನ್ನು ತಪ್ಪಿಸಲು ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಿ. ವ್ಯಾಪಾರಸ್ಥರು ಗ್ರಾಹಕರೊಂದಿಗೆ ವಿವಾದವನ್ನು ತಪ್ಪಿಸಿ. ಖರೀದಿಗೆ ಸಂಬಂಧಿಸಿದಂತೆ ಬಾಕಿ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ.
ಇದನ್ನೂ ಓದಿ- ನಾಲ್ಕು ದಿನಗಳಲ್ಲಿ ವೃಷಭ ರಾಶಿಗೆ ಮಂಗಳನ ಪ್ರವೇಶ, ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಹೆಚ್ಚಾಗಲಿದೆ ಸಮಸ್ಯೆ
ಸಿಂಹ ರಾಶಿಯವರ ಭವಿಷ್ಯ (Leo Horoscope):
ದೀರ್ಘಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳುವುವು. ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಸ್ಥರಿಗೆ ಕೆಲಸದ ಒತ್ತಡ ಹೆಚ್ಚಿರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಸರಿಯಾದ ಸಮನ್ವಯ ಕಾಪಾಡಿಕೊಳ್ಳಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಸಹೋದ್ಯೋಗಿಗಳೊಂದಿಗಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ವರ್ಕ್ ಫ್ರಮ್ ಹೋಂ ಮಾಡುವ ಉದ್ಯೋಗಸ್ಥರಿಗೆ ಸಮನ್ವಯದ ಕೊರತೆ ಕಾಡಬಹುದು. ವ್ಯವಹಾರದಲ್ಲಿ ಹಣಕಾಸಿನ ಅಡಚಣೆಗಳು ನಿಮ್ಮನ್ನು ಬಾಧಿಸಬಹುದು.
ತುಲಾ ರಾಶಿಯವರ ಭವಿಷ್ಯ (Libra Horoscope):
ಇತರರೊಂದಿಗೆ ನಿಮ್ಮ ವಿನಮ್ರ ಸ್ವಭಾವವು ಸಂಬಂಧಗಳನ್ನು ಬಲಪಡಿಸುತ್ತದೆ. ವ್ಯವಹಾರದಲ್ಲಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಾಗ ಶಾಂತ ಮನಸ್ಥಿತಿಯಿಂದ ಯೋಚಿಸಿ. ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂದು ಕೊಂಚ ಪರಿಹಾರ ದೊರೆಯುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಬಾಸ್ ಜೊತೆಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಿ. ಸಾರ್ವಜನಿಕ ಸಂಬಂಧಗಳು ಸುಧಾರಿಸಿ ಗೌರವ ಪ್ರಾಪ್ತಿಯಾಗಲಿದೆ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆರೋಗ್ಯ ಸುಧಾರಿಸಲಿದೆ.
ಇದನ್ನೂ ಓದಿ- ಗುರುವಿನ ಹಿಮ್ಮುಖ ಸಂಚಾರದಿಂದ ಒಂದೇ ವರ್ಷದಲ್ಲಿ ಈ 3 ರಾಶಿಯವರಿಗೆ ರಾಜಯೋಗ ಸಿಗಲಿದೆ!
ಧನು ರಾಶಿಯವರ ಭವಿಷ್ಯ (Sagittarius Horoscope):
ಭಕ್ತಿಯಿಂದ ನಿಮ್ಮ ಆರಾಧ್ಯ ದೈವವನ್ನು ಪೂಜಿಸುವುದರಿಂದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಕಚೇರಿ ಕೆಲಸಗಳಲ್ಲಿ ಆಸಕ್ತಿ ಕೊರತೆ ಎದ್ದು ಕಾಣಬಹುದು. ಹೊಸ ವ್ಯವಹಾರಕ್ಕೆ ಕೈ ಹಾಕುವಾಗ ತುಂಬಾ ಜಾಗರೂಕರಾಗಿರಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ನಿಮ್ಮ ನೆಟ್ವರ್ಕ್ ಅನ್ನು ವಿಸ್ತರಿಸಲು ಎಲ್ಲಾ ಶಕ್ತಿಯನ್ನು ಬಳಸಿ. ಕಛೇರಿಯಲ್ಲಿನ ಕೆಲಸದಲ್ಲಿ ಎಷ್ಟೇ ಸವಾಲುಗಳು ಎದುರಾದರೂ ಎಲ್ಲವನ್ನೂ ಮೆಟ್ಟಿ ನಿಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ. ನಿಮ್ಮ ದೈನಂದಿನ ವ್ಯವಹಾರದಲ್ಲಿ ನೀವು ತೃಪ್ತರಾಗುತ್ತೀರಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಜ್ಞಾನವನ್ನು ಪಡೆಯಲು ದಿನವು ಮಂಗಳಕರವಾಗಿದೆ. ಕಚೇರಿಯಲ್ಲಿನ ಕೆಲಸದ ಹೊರೆ ಹೆಚ್ಚಾಗಬಹುದು. ಇದಕ್ಕಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧರಾಗಿರಿ. ವಿದ್ಯಾರ್ಥಿಗಳು ಇಂದಿನಿಂದ ಕಠಿಣ ಪರಿಶ್ರಮ ಪಡಬೇಕಾಗುತ್ತದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಸೌಮ್ಯವಾಗಿ ಮಾತುಕತೆ ನಡೆಸುವುದರಿಂದ ಹಲವು ಸಮಸ್ಯೆಗಳು ಬಗೆಹರಿಯುತ್ತವೆ. ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದಲೂ ದಿನ ಅಷ್ಟು ಉತ್ತಮವಾಗಿಲ್ಲ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.