Yamuna Srinidhi: ಬಿಗ್‌ಬಾಸ್ 11 ಸ್ಪರ್ಧಿ ಯಮುನಾ ಶ್ರೀನಿಧಿ ಕುರಿತು ಹಲವರಿಗೆ ಗೊತ್ತಿಲ್ಲ, ಈಕೆ ಒಬ್ಬ ಭರತನಾಟ್ಯ ನೃತ್ಯಗಾರ್ತಿಯಾಗಿದ್ದು, ನಟಿಯೂ ಕೂಡ ಹೌದು.
1/8Yamuna Srinidhi: ಬಿಗ್‌ಬಾಸ್ 11 ಸ್ಪರ್ಧಿ ಯಮುನಾ ಶ್ರೀನಿಧಿ ಕುರಿತು ಹಲವರಿಗೆ ಗೊತ್ತಿಲ್ಲ, ಈಕೆ ಒಬ್ಬ ಭರತನಾಟ್ಯ ನೃತ್ಯಗಾರ್ತಿಯಾಗಿದ್ದು, ನಟಿಯೂ ಕೂಡ ಹೌದು.
2/8ನಟಿ ಹಾಗೂ ನೃತ್ಯಗಾರ್ತಿ ಯಮುನಾ ಶ್ರೀನಿಧಿ ಅವರು ಆರನೇ ವಯಸ್ಸಿನವರಿದ್ದಾಗ ಅವರಿಗೆ ಭರತನಾಟ್ಯದ ಮೇಲೆ ಒಲವು ಶುರುವಾಯಿತು. ಅಂದಿನಿಂದ ಅವರು ಭರತನಾಟ್ಯ ನೃತ್ಯವನ್ನು ಆಡುವುದಕ್ಕೆ ಆರಂಭಿಸಿದರು.
3/81997ರಲ್ಲಿ ಅಮೇರಿಕಾಕ್ಕೆ ಹೋಗಿದ್ದ ಯಮುನಾ ಶ್ರೀನಿಧಿ ಅವರು 2012ರಲ್ಲಿ ಅಲ್ಲಿಂದ ವಾಪಸ್ ಆದರು.
4/8ಅಮೆರಿಕಾದಲ್ಲಿರುವಾಗಲೇ ನಟಿಗೆ ಅವರ ಪತಿ ಪರಿಚಯವಾಗಿದ್ದರು, ಅವರ ಪತಿ ಹಾಗೂ ಯಮುನಾ ಅವರ ಪರಿಚಯ ಅಮೇರಿಕಾದಲ್ಲಿಯೇ ಆಗಿತ್ತು, ನಂತರ ಈ ಜೋಡಿ ಮೈಸೂರಿಗೆ ವಾಪಸ್ ಆಗಿ ಮದುವೆಯಗಿದ್ದರು.
5/8ಭಾರತದಿಂದ ಅಮೆರಿಕಾಕ್ಕೆ ಹೋಗಿದ್ದ ಯಮುನಾ ಅವರಿಗೆ ಅಮೇರಿಕಾಕ್ಕೆ ಹೋದಾಗ 23 ವಯಸ್ಸು. ವಿದೇಶಕ್ಕೆ ಹೋಗಿದ್ದ ಈಕೆ ಅಲ್ಲಿ ಕನ್ನಡ ಸಂಘದ ಅಧ್ಯಕ್ಷರಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
6/8ಅಮೆರಿಕಾಕ್ಕೆ ಹೋಗಿದ್ದ ಯಮುನಾ ಅವರು ಅಲ್ಲಿ ನೃತ್ಯ ಶಾಲೆ ನಡೆಸುತ್ತಿದ್ದರು, ಅಲ್ಲಿ ಅವರ ಬಳಿ ನೃತ್ಯ ಕಲಿಯಲು ಬರುತ್ತಿದ್ದವರು ಇಲ್ಲಿಯೇ ಇರಿ ನಮಗೆ ನೃತ್ಯ ಕಲಿಸಿ ಎಂದು ಬಲವಂತ ಮಾಡಿದ ಕಾರಣಕ್ಕೆ ಭಾರತಕ್ಕೆ ಬರಲು ತಡವಾಯಿತು ಎಂದು ಯಮುನಾ ಈ ಹಿಂದೆ ಹೇಳಿಕೊಂಡಿದ್ದಾರೆ.
7/8ಎನ್‌ಸಿಸಿ ಅಭ್ಯರ್ಥಿಗಳಿಗೆ ಯಮುನಾ ಅವರು ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ತಮ್ಮ ಕೈಯಲ್ಲಾದ ಸಹಾಯ ಮಾಡುತ್ತಿದ್ದಾರೆ.
8/8ಈವರೆಗೂ ಯಮುನಾ ಅವರು 6000ಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳಿಗೆ ಹಾಗೂ 10000 ಎನ್‌ಸಿಸಿ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.