ಯಾರು ಗೊತ್ತಾ ಕುಲದೀಪ್ ಯಾದವ್ ಪ್ರೇಯಸಿ..!? ಮದುವೆಯ ಬಗ್ಗೆ ಬಿಗ್ ಅಪಡೇಟ್‌ ಕೊಟ್ಟ ಸ್ಟಾರ್‌ ಬೌಲರ್!

kuldeep yadav Marriage: ಟೀಂ ಇಂಡಿಯಾ ಸ್ಟಾರ್‌ ಬೌಲರ್‌ ಟಿ 20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.. ಇವರು ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಪಡೆಯುವ ಮೂಲಕ ಹಲವು ಬಾರಿ ಪಂದ್ಯವನ್ನು ಭಾರತದ ಪರವಾಗಿ ತಿರುಗಿಸಿದರು.. ಇದೀಗ ಇವರ ಮದುವೆ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. 

1 /5

 ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಬಳಿಕ ಕುಲದೀಪ್ ಯಾದವ್ ಅವರನ್ನು ಅವರ ರಾಜ್ಯ ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.. ಇದಲ್ಲದೇ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮದುವೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಮಾತನಾಡಿದ್ದಾರೆ..   

2 /5

 ಸಂದರ್ಶನದಲ್ಲಿ ಮಾತಮಾಡಿದ ಕುಲದೀಪ್ ಯಾದವ್ ತಮ್ಮ ಪತ್ನಿ ಆಗುವವರು ಹೇಗಿರಬೇಕೆಂದು ಹೇಳಿಕೊಂಡಿದ್ದಾರೆ... ನೀವು ಯಾವಾಗ ಮದುವೆಯಾಗುತ್ತೀರಿ ಎಂದು ಕೇಳಿದಾಗ ಈ ಪ್ರಶ್ನೆಗೆ ಉತ್ತರಿಸಿದ ಕುಲದೀಪ್ ಯಾದವ್, ಶೀಘ್ರದಲ್ಲೇ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ.. ಎಂದಿದ್ದಾರೆ..  

3 /5

ಹೌದು ಕುಲದೀಪ್ ಯಾದವ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬುದು ಇದರ ಅರ್ಥವಾಗಿದೆ.. ಅಲ್ಲದೇ ಬಾಲಿವುಡ್ ನಟಿಯನ್ನು ಮದುವೆಯಾಗುತ್ತೀರಾ? ಎಂದು ಕೇಳಲಾಯಿತು.. ಅದಕ್ಕೆ ಉತ್ತರಿಸಿದ ಅವರು ಇಲ್ಲ, ನನ್ನ ಜೀವನ ಸಂಗಾತಿ ಬಾಲಿವುಡ್ ನಟಿಯಾಗಿರುವುದಿಲ್ಲ.. ನನ್ನನ್ನು ಮತ್ತು ನನ್ನ ಕುಟುಂಬವನ್ನು ನೋಡಿಕೊಳ್ಳುವ ಜೀವನ ಸಂಗಾತಿಯನ್ನು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ..  

4 /5

ಮತ್ತೊಂದು ಅವರ ಮಾತಿಂದ ಇಲ್ಲಿ ಸ್ಪಷ್ಟವಾಗಿದ್ದು ಎಂದರೇ  ಕುಲದೀಪ್ ಯಾವುದೇ ಬಾಲಿವುಡ್ ನಟಿಯನ್ನ ಮದುವೆಯಾಗುವುದಿಲ್ಲ ಎನ್ನುವುದು..  

5 /5

ಇನ್ನು  ಕಳೆದ ಎರಡು ವರ್ಷಗಳಿಂದ ಕುಲದೀಪ್ ಯಾದವ್ ಟೀಂ ಇಂಡಿಯಾಗಾಗಿ ನಿರಂತರವಾಗಿ ಅದ್ಭುತ ಬೌಲಿಂಗ್ ಮಾಡುತ್ತಿದ್ದಾರೆ.  2023ರಲ್ಲಿ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್‌ನಲ್ಲಿ ಬೌಲಿಂಗ್‌ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದ ಇವರು ಇದಕ್ಕೂ ಮುನ್ನ ಬಹಳ ದಿನಗಳ ಕಾಲ ಫಾರ್ಮ್‌ನಿಂದ ಹೊರಗುಳಿದಿದ್ದರು.. ಇದೇ ಕಾರಣದಿಂದ ಇವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲ.