Shukraditya Yoga 2024: ಸೂರ್ಯ ಗ್ರಹವು ಆಗಸ್ಟ್ 16ರ ಸಂಜೆ 7.32ಕ್ಕೆ ಸಿಂಹರಾಶಿಗೆ ಚಲಿಸಲಿದೆ. ಸಿಂಹ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರನ ಸಂಯೋಗದಿಂದ ಸುಕ್ರಾದಿತ್ಯ ಯೋಗ ರೂಪಗೊಳ್ಳಲಿದೆ. ಸೂರ್ಯನು ತನ್ನದೇ ರಾಶಿಯನ್ನು ಪ್ರವೇಶಿಸಿದಾಗ ಅದರ ಪ್ರಭಾವ ಹೆಚ್ಚಾಗಿರುತ್ತದೆ. ಸೆಪ್ಟೆಂಬರ್ 16ರವರೆಗೆ ಸೂರ್ಯನು ಸಿಂಹರಾಶಿಯಲ್ಲಿರುತ್ತದೆ.
Shukraditya Yoga 2024: ಜ್ಯೋತಿಷ್ಯದಲ್ಲಿ ಗ್ರಹಗಳ ರಾಶಿ ಬದಲಾವಣೆಗೆ ವಿಶೇಷ ಮಹತ್ವ ನೀಡಲಾಗಿದೆ. ಕಾಲಕಾಲಕ್ಕೆ ಗ್ರಹಗಳು ರಾಶಿಗಳನ್ನು ಬದಲಾಯಿಸುತ್ತಿರುತ್ತವೆ. ಕೆಲವು ಬಾರಿ ಒಂದೇ ರಾಶಿಯಲ್ಲಿ ಹಲವಾರು ಗ್ರಹಗಳು ಸಂಚಾರ ಮಾಡುವುದರಿಂದ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ. ಶುಕ್ರನನ್ನು ಪ್ರೀತಿ, ಸೌಂದರ್ಯ, ಆಕರ್ಷಣೆ ಮತ್ತು ಐಷಾರಾಮಿ ಗ್ರಹವೆಂದು ಕರೆಯಲಾಗುತ್ತದೆ. ಶುಕ್ರ ಗುರು ಅಥವಾ ಶನಿಯಂತೆ ಸಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ರಾಶಿ ಬದಲಾಯಿಸಲು 1 ತಿಂಗಳು ಅಥವಾ 28 ದಿನಗಳನ್ನು ತೆಗೆದುಕೊಳ್ಳುತ್ತದೆ. 2024ರ ಜುಲೈ 31ರಂದು ಶುಕ್ರವು ಒಂದು ವರ್ಷದ ನಂತರ ಸಿಂಹ ರಾಶಿಯನ್ನು ಪ್ರವೇಶಿಸಿದೆ.
ಜುಲೈ 19ರಂದು ಬುಧ ಸಹ ಸಿಂಹರಾಶಿಯಲ್ಲಿ ಸಾಗುತ್ತಿದೆ. ಆದ್ದರಿಂದ ಜುಲೈ 31ರಂದು ಸಿಂಹದಲ್ಲಿ ಬುಧ ಮತ್ತು ಶುಕ್ರನ ಸಂಯೋಗವಾಗಿದೆ. ಇದಲ್ಲದೆ ಸೂರ್ಯ ಗ್ರಹವು ಆಗಸ್ಟ್ 16ರ ಸಂಜೆ 7.32ಕ್ಕೆ ಸಿಂಹರಾಶಿಗೆ ಚಲಿಸಲಿದೆ. ಸಿಂಹ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರನ ಸಂಯೋಗದಿಂದ ಸುಕ್ರಾದಿತ್ಯ ಯೋಗ ರೂಪಗೊಳ್ಳಲಿದೆ. ಸೂರ್ಯನು ಸಿಂಹ ರಾಶಿಗೆ ಸೇರಿದವನು. ಆದ್ದರಿಂದ ಸೂರ್ಯನು ತನ್ನದೇ ರಾಶಿಯನ್ನು ಪ್ರವೇಶಿಸಿದಾಗ ಅದರ ಪ್ರಭಾವ ಹೆಚ್ಚಾಗಿರುತ್ತದೆ. ಸೆಪ್ಟೆಂಬರ್ 16ರವರೆಗೆ ಸೂರ್ಯನು ಸಿಂಹರಾಶಿಯಲ್ಲಿರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಶುಕ್ರ ಸಂಯೋಗದಲ್ಲಿ ಸೂರ್ಯ ಮತ್ತು ಶುಕ್ರನ ಉಪಸ್ಥಿತಿಯು ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಿಸುತ್ತದೆ. ಸುಕ್ರಾದಿತ್ಯ ಯೋಗದಿಂದ ಕೆಲವು ರಾಶಿಯವರಿಗೆ ಭರ್ಜರಿ ಜಾಕ್ಪಾಟ್ ಹೊಡೆಲಿದೆ. ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ ಹಾಗೂ ಅದೃಷ್ಟದ ಬೆಂಬಲದಿಂದ ಎಲ್ಲಾ ಸಮಸ್ಯೆಗಳಿಂದಲೂ ಮುಕ್ತಿ ದೊರೆಯುತ್ತದೆ. ಸಿಂಹರಾಶಿಗೆ ಸೂರ್ಯ ಮತ್ತು ಶುಕ್ರ ಪ್ರವೇಶ ಮಾಡುವುದರಿಂದ ಯಾವ ರಾಶಿಯವರಿಗೆ ರಾಜಯೋಗ ದೊರೆಯಲಿದೆ ಅನ್ನೋದರ ಬಗ್ಗೆ ತಿಳಿಯಿರಿ.
ಮೇಷ ರಾಶಿಯ ೫ನೇ ಮನೆಯಲ್ಲಿ ಶುಕ್ರ ಸಂಚಾರ ನಡೆಯಲಿದೆ. ಈ ಅವಧಿಯಲ್ಲಿ ಮೇಷ ರಾಶಿಯವರ ಜೀವನು ಸುಖ-ಶಾಂತಿ ಮತ್ತು ಸಂತೋಷದಿಂದ ತುಂಬಿರುತ್ತದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಹೆಚ್ಚಾಗಲಿದೆ. ಈ ರಾಶಿಯವರು ಕೆಲಸದ ಸ್ಥಳದಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ವ್ಯಾಪಾರದಲ್ಲಿರುವವರು ಹೆಚ್ಚಿನ ಹಣ ಗಳಿಸುವ ಅವಕಾಶ ಪಡೆಯುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ದೊಡ್ಡ ಲಾಭ ಗಳಿಸುತ್ತಾರೆ. ಈ ಅವಧಿಯಲ್ಲಿ ಮೇಷ ರಾಶಿಯವರ ಆರೋಗ್ಯವು ಉತ್ತಮವಾಗಿರುತ್ತದೆ.
ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹವಾಗಿದೆ. ವೃಷಭ ರಾಶಿಯ ೪ನೇ ಮನೆಗೆ ಶುಕ್ರ ಪ್ರವೇಶಿಸಲಿದೆ. ಇದರಿಂದ ಅದೃಷ್ಟದ ಸಮಯ ನಿಮ್ಮ ದಾರಿಯಲ್ಲಿ ಬರಲಿದೆ. ವ್ಯಾಪಾರಿಗಳು ಹೊಸ ವ್ಯವಹಾರಗಳು ಅಥವಾ ಯೋಜನೆಗಳನ್ನು ಪಡೆಯಬಹುದು. ಅದ್ದರಿಂದ ನೀವು ಹೆಚ್ಚಿನ ಲಾಭವನ್ನು ಗಳಿಸಬಹುದು. ನೀವು ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ವೃಷಭ ರಾಶಿಯವರ ಆರೋಗ್ಯ ಚೆನ್ನಾಗಿರುತ್ತದೆ. ನೀವು ಕುಟುಂಬ ಸದಸ್ಯರೊಂದಿಗೆ ಗುಣಮಟ್ಟದ ಸಮಯ ಕಳೆಯುವ ಅವಕಾಶ ಪಡೆಯುತ್ತೀರಿ. ಈ ಅವಧಿಯು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಶುಕ್ರ ಮಿಥುನ ರಾಶಿಯವರ ೩ನೇ ಮನೆಗೆ ಪ್ರವೇಶಿಸುವುದರಿಂದ ಕೆಲಸದಲ್ಲಿ ಬಡ್ತಿ ದೊರೆಯುವ ಸಾಧ್ಯತೆಯಿದೆ. ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಪ್ರಗತಿ ನಿರೀಕ್ಷಿಸಬಹುದು. ನೀವು ಹೆಚ್ಚಿನ ಲಾಭ ಪಡೆಯಬಹುದು. ಈ ರಾಶಿಯವರು ತಮ್ಮ ತಾತ್ಕಾಲಿಕ ಹೂಡಿಕೆಗಳಿಂದ ಉತ್ತಮ ಆದಾಯ ಪಡೆಯುವರು. ಒಂದಕ್ಕಿಂತ ಹೆಚ್ಚು ಆದಾಯದ ಮೂಲಗಳನ್ನು ಪಡೆಯುವ ಸಾಧ್ಯತೆಯಿದೆ. ಮಿಥುನ ರಾಶಿಯ ಸ್ಥಳೀಯರು ಷೇರು ಮಾರುಕಟ್ಟೆಯಲ್ಲಿ ಲಾಭ ನಿರೀಕ್ಷಿಸಬಹುದು. ನಿಮ್ಮ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ತುಲಾ ರಾಶಿಯ ಆಡಳಿತ ಗ್ರಹ ಶುಕ್ರವಾಗಿದೆ. ಹೀಗಾಗಿ ತುಲಾ ರಾಶಿಯವರು ತಮ್ಮ ಕೆಲಸದ ಸ್ಥಳದಲ್ಲಿ ಬಡ್ತಿ ಪಡೆಯಬಹುದು. ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಅವಕಾಶ ಸಿಗಲಿದೆ. ಉದ್ಯಮಿಗಳ ಆದಾಯವು ಸುಧಾರಿಸುತ್ತದೆ. ಈ ರಾಶಿಯವರು ಬಹಳಷ್ಟು ಹಣವನ್ನು ಗಳಿಸಬಹುದು. ಈ ಅವಧಿಯಲ್ಲಿ ನಿಮ್ಮ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀರಿ. ನಿಮ್ಮ ದೀರ್ಘಕಾಲದವರೆಗೆ ಅನಾರೋಗ್ಯವು ಈಗ ಸುಧಾರಿಸಲಿದೆ. ಅವಿವಾಹಿತರು ಸೂಕ್ತ ಸಂಗಾತಿಯನ್ನು ಕಂಡುಕೊಳ್ಳಬಹುದು. ಅದೃಷ್ಟದ ಬೆಂಬಲದಿಂದ ನೀವು ಸಾಕಷ್ಟು ಹಣವನ್ನು ಗಳಿಸುತ್ತೀರಿ.