Abhishek Bachchan and Karisma Kapoor: ಒಂದು ಕಾಲದಲ್ಲಿ, ಬಾಲಿವುಡ್ ನಟಿ ಕರಿಷ್ಮಾ ಕಪೂರ್ ನಟ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಲು ಹೊರಟಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಿ.. ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು.. ಆದರೆ 4 ತಿಂಗಳ ಬಳಿಕ ಅವರ ಸಂಬಂಧ ಮುರಿದು ಬಿತ್ತು..
ಹಲವು ವೈಯಕ್ತಿಕ ಕಾರಣಗಳಿಂದ ಕರಿಷ್ಮಾ ಕಪೂರ್ ಅಭಿಷೇಕ್ ಬಚ್ಚನ್ನಿಂದ ಬೇರ್ಪಟ್ಟಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಕರಿಷ್ಮಾ ಕಪೂರ್ ಅವರ ತಾಯಿ ಬಬಿತಾ ಬಚ್ಚನ್ ಕುಟುಂಬದೊಂದಿಗಿನ ಸಂಬಂಧದಿಂದ ಸಂತೋಷವಾಗಿರಲಿಲ್ಲ ಎಂದು ಅನೇಕ ವರದಿಗಳಲ್ಲಿ ಹೇಳಲಾಗಿದೆ.
ಆದರೆ ಕರಿಷ್ಮಾ ಮತ್ತು ಅಭಿಷೇಕ್ ನಿಶ್ಚಿತಾರ್ಥ ಮುರಿದುಬಿದ್ದ ನಂತರವೂ ಅವರ ನಡುವೆ ಉತ್ತಮ ಭಾಂದವ್ಯವಿದೆ ಎಂದು ನಿಮಗೆ ತಿಳಿದಿದೆಯೇ?
ಕಪೂರ್ ಕುಟುಂಬದೊಂದಿಗೆ ಅಗಸ್ತ್ಯ ನಂದಾ ಸಂಬಂಧ: ಅಭಿಷೇಕ್ ಬಚ್ಚನ್ ಅವರ ಸೋದರಳಿಯ ಅಗಸ್ತ್ಯ ನಂದಾ ಕಪೂರ್ ಕುಟುಂಬದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದಾರೆ.
ವಾಸ್ತವವಾಗಿ, ಕರಿಷ್ಮಾ ಕಪೂರ್ ಅಗಸ್ತ್ಯ ಅವರ ಚಿಕ್ಕಮ್ಮ... ಏಕೆಂದರೇ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಪುತ್ರಿ ಮತ್ತು ಅಭಿಷೇಕ್ ಬಚ್ಚನ್ ಅವರ ಸಹೋದರಿ ಶ್ವೇತಾ ಬಚ್ಚನ್ ಅವರು ಕರಿಷ್ಮಾ ಕಪೂರ್ ಅವರ ಚಿಕ್ಕಮ್ಮ ರಿತು ಕಪೂರ್ ನಂದಾ ಅವರ ಮಗ ನಿಖಿಲ್ ನಂದಾ ಅವರನ್ನು ವಿವಾಹವಾಗಿದ್ದಾರೆ. ಅದಕ್ಕಾಗಿಯೇ ಕರಿಷ್ಮಾ ಅವರನ್ನು ಅಗಸ್ತ್ಯ ಮತ್ತು ನವ್ಯ ಅತ್ಯಾ ಎಂದು ಕರೆಯುತ್ತಾರೆ ಎಂದು ವರದಿಯಾಗಿದೆ..
ಇನ್ನು ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ ಮೊದಲ ಬಾರಿಗೆ ಶ್ವೇತಾ ಬಚ್ಚನ್ ಅವರ ಮದುವೆಯಲ್ಲಿ ಭೇಟಿಯಾದರು ಎಂದು ಹೇಳಲಾಗುತ್ತದೆ.. ಕರಿಷ್ಮಾ ಕಪೂರ್ ಮತ್ತು ಅಭಿಷೇಕ್ ಬಚ್ಚನ್ ಅವರ ಸಂಬಂಧವು ಇದ್ದಕ್ಕಿದ್ದಂತೆ ಮುರಿದುಹೋಯಿತು.
ವರದಿಯ ಪ್ರಕಾರ ಮದುವೆಯ ನಂತರ ಕರಿಷ್ಮಾ ಕಪೂರ್ ಸಿನಿಮಾಗಳಲ್ಲಿ ನಟಿಸಬಾರದು ಎಂದು ಜಯಾ ಬಚ್ಚನ್ ಹೇಳಿದ್ದರಂತೆ.. ಕರಿಷ್ಮಾ ಕಪೂರ್ ತಾಯಿ ಈ ವಿಷಯಗಳನ್ನು ಒಪ್ಪಲಿಲ್ಲ ಹೀಗಾಗಿ ಅವರ ಸಂಬಂಧ ಮುರಿದು ಬಿತ್ತು ಎನ್ನಲಾಗಿದೆ..
ಬಳಿಕ ಕರಿಷ್ಮಾ ಕಪೂರ್ ದೆಹಲಿಯ ಪ್ರಸಿದ್ಧ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಕೆಲವು ವರ್ಷಗಳ ಹಿಂದೆ ಕರಿಷ್ಮಾ ಕಪೂರ್ ತನ್ನ ಪತಿಗೆ ವಿಚ್ಛೇದನ ನೀಡಿದ್ದರು. ಕರಿಷ್ಮಾ ಕಪೂರ್ಗೆ ಒಬ್ಬ ಮಗ ಮತ್ತು ಮಗಳಿದ್ದು, ಅವರೇ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.