Delhi women Naked in metro: ವಿದೇಶದಲ್ಲಿ ಯಾರು ಹೇಗೇ ಇರಲಿ, ನಮ್ಮ ದೇಶದಲ್ಲಿ ಅಂತೂ ಡ್ರೆಸ್ಸಿಂಗ್ ವಿಷಯದಲ್ಲಿ ಜನ ಕೆಲವು ನಿಯಮಗಳನ್ನು ಪಾಲಿಸುತ್ತಾರೆ. ಅದರಲ್ಲೂ ಪಬ್ಲಿಕ್‌ನಲ್ಲಿ ಹೊರಗೆ ಹೋಗುತ್ತಿದ್ದಾರೆ ಅಂದ್ರೆ ಸ್ವಲ್ಪ ಡೀಸೆಂಟ್ ಬಟ್ಟೇನೆ ಹಾಕುತ್ತಾರೆ. ಆದ್ದರಿಂದಲೇ ನಮ್ಮ ದೇಶವನ್ನು ವಿಶ್ವವೇ ಗೌರವಿಸುತ್ತದೆ. ಆದರೆ, ಬಟ್ಟೆಗಳು ದೇಹವನ್ನು ಮುಚ್ಚಲು ಅಥವಾ ಅದನ್ನು ತೋರಿಸಲು ಅಲ್ಲ, ಆದರೆ ಕೆಲವರು ಆ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂಬ ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ದೆಹಲಿ ಮೆಟ್ರೋದಲ್ಲಿ ಯುವತಿಯೊಬ್ಬಳು ಬಿಕಿನಿ ಧರಿಸಿ ಸಂಚರಿಸಿ ಸಂಚಲನ ಸೃಷ್ಟಿಸಿದ್ದಾರೆ. ಡ್ರೆಸ್ ಹಾಕಿಕೊಂಡು ಧೈರ್ಯಾವಾಗಿ ಮೆಟ್ರೋ ಹತ್ತಿದ್ದ ಯುವತಿ ಸ್ವಲ್ಪ ಸಮಯ ಕಳೆಯುತ್ತಿದ್ದಂತೆಯೇ ಮುಜುಗರಕ್ಕೀಡಾಗಿದ್ದಳು. ತನ್ನ ಬ್ಯಾಗ್ ಬಳಸಿ ತನ್ನ ಮೈ ಮುಚ್ಚಲು ಪ್ರಯತ್ನಿಸಿದ್ದಳು. ಇದನ್ನು ನೋಡಿ ಸಹ ಪ್ರಾಯಾಣಿಕರು. ಯಾಕೆ ಇಂತಹ ಡ್ರೆಸ್ ಹಾಕಬೇಕು.. ಯಾಕೆ ಹೀಗೆ ತಲೆ ಕೆಡಿಸಿಕೊಳ್ಳಬೇಕು ಎಂದು ಪ್ರಸ್ನಿಸಲು ಆರಂಭಿಸಿದರು.
'ಇದು ಮಹಿಳಾ ಸಬಲೀಕರಣದ ಉದಾಹರಣೆಯಾದರೆ... ನಮ್ಮ ಯುವ ಪೀಳಿಗೆಯ ಹೆಣ್ಣುಮಕ್ಕಳು... ಇದಕ್ಕೆ ಬಲಿಯಾಗುತ್ತಿದ್ದಾರೆ. ನಾಚಿಕೆಯಿಲ್ಲದ ಸ್ತ್ರೀವಾದಿಗಳಿಗೆ ಬೇಕಾಗಿರುವುದು ಇದೇನಾ? ನಾನು ಇದನ್ನು ಸಾಂಸ್ಕೃತಿಕ ನಿಂದನೆ ಎಂದು ಕರೆಯುತ್ತೇನೆ, ”ಎಂದು ನೆಟಿಜನ್ ಒಬ್ಬರು ತಮ್ಮ ಟ್ವಿಟರ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಜನ್‌ಗಳು ವಿಭಿನ್ನ ರೀತಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ನೆಟ್ಟಿಗರ ಕೆಂಗಣ್ಣಿಗೆ ಈಕೆ ಗುರಿಯಾಗಿದ್ದು, ಈಕೆಯ ವಿರುದ್ಧ ಕಾಮೆಂಟ್ ಸೆಕ್ಷನ್‌ನಲ್ಲಿ ವಿಭಿನ್ನ ರೀತಿಯ ಕಾಮೆಂಟ್‌ಗಳು ಕೇಳಿ ಬರುತ್ತಿದೆ.
ಈ ವಿಡಿಯೋಗೆ ನೆಟಿಜನ್‌ಗಳು " ಆ ಹುಡುಗಿ ಮೆಟ್ರೋ ನಿಲ್ದಾಣದ ಭದ್ರತಾ ಸಬ್ಬಂದಿಯನ್ನು ದಾಟಿ ಹೇಗೆ ಒಳಗೆ ಹೋದಳು" ಎಂದರೆ ಇನ್ನೊಬ್ಬ ಬಳಕೆದಾರರು " ಇಂತಹ ಪ್ರಯಾಣಿಕರಿಗೆ ಭದ್ರತಾ ಸಿಬ್ಬಂದಿ ಹೇಗೆ ಒಳ ಬರಲು ಅವಕಾಶ ಮಾಡಿಕೊಡುತ್ತದೆ" ಎಂದು ಬರೆದಿದ್ದಾರೆ.
"ಇದು ಸಾರ್ವಜನಿಕ ಸಾರಿಗೆಯಾಗಿದೆ. ಬೀಚ್ ಅಲ್ಲ. ಸ್ವಾತಂತ್ರ್ಯದ ಹೆಸರಿನಲ್ಲಿ ಎಲ್ಲರೂ ಏನು ಬೇಕಾದರೂ ಮಾಡಬಹುದು ಎಂದು ತಿಳಿದು ಈ ರೀತಿ ಮಾಡಿದರೆ ತುಂಬಾ ತಪ್ಪು.ಇಂದು ಅವಳನ್ನು ನೋಡಿ ಮತ್ತು ನಾಳೆ ಹೆಚ್ಚು ಜನರು ಅವಳಂತೆ ಆಗುತ್ತಾರೆ. ಅಂತಹವರ ವಿರುದ್ಧ ಯಾವುದೇ ತಾರತಮ್ಯವಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ". ಹೇಗೆ ಸದ್ಯ ಈ ಹುಡುಗಿಯ ಪರ ಪರ ವಿರೋಧ ವಾದಗಳು ಕೇಳಿ ಬರುತ್ತಿದ್ದು, ವಿಡಿಯೋ ಅಂತೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
Another video of Delhi Metro.
If this is an example of WOMEN EMPOWERMENT, then alas our young generation GIRLS can be victim of such EMPOWERMENT 🤦♂️
And this is exactly what SHAMELESS FEMINISTS want.
I would call it CULTURAL GEN*CIDE.#delhimetro @OfficialDMRC pic.twitter.com/BrmjBQ3u32— Barkha Trehan 🇮🇳 / बरखा त्रेहन (@barkhatrehan16) March 31, 2023
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.