ಶುಕ್ರವಾರ ರಾತ್ರಿ ಈ ಕೆಲಸ ಮಾಡಿದರೆ ಜಾತಕದಲ್ಲಿ ಭದ್ರವಾಗುವುದು ಶುಕ್ರನ ಸ್ಥಾನ ! ಮನೆಯೊಳಗೆ ಪ್ರವೇಶಿಸುವಳು ಸಂಪತ್ತಿನ ಅಧಿದೇವತೆ

ಶುಕ್ರವಾರ ರಾತ್ರಿ ಮಲಗುವಾಗ ಈ ವಸ್ತುವನ್ನು ದಿಂಬಿನ ಅಡಿಯಲ್ಲಿ ಇಟ್ಟು ಮಲಗಿಕೊಳ್ಳಿ. ಬೆಳಗ್ಗೆ ಎದ್ದು ಇದನ್ನು ದೇವಸ್ಥಾನದಲ್ಲಿ ಇಟ್ಟು ಬಿಡಿ. 

Written by - Ranjitha R K | Last Updated : Sep 20, 2024, 10:28 AM IST
  • ಗ್ರಹ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಬಲ್ಲ ಪರಿಹಾರ ಶಾಸ್ತ್ರಗಳಲ್ಲಿ ಉಲ್ಲೇಖ
  • ಶುಕ್ರ ಗ್ರಹವು ಉತ್ತಮ ಸ್ಥಾನದಲ್ಲಿ ಇದ್ದಾಗ ವ್ಯಕ್ತಿಯ ಆರ್ಥಿಕ ಸ್ಥಿತಿ ಕೂಡಾ ಸದೃಢ
  • ಶುಕ್ರ ಮತ್ತು ಲಕ್ಷ್ಮೀಯ ಆಶೀರ್ವಾದ ವ್ಯಕ್ತಿಯ ಜೀವನದಲ್ಲಿ ಬಹಳ ಮುಖ್ಯ
ಶುಕ್ರವಾರ ರಾತ್ರಿ ಈ ಕೆಲಸ ಮಾಡಿದರೆ ಜಾತಕದಲ್ಲಿ ಭದ್ರವಾಗುವುದು ಶುಕ್ರನ ಸ್ಥಾನ !  ಮನೆಯೊಳಗೆ ಪ್ರವೇಶಿಸುವಳು ಸಂಪತ್ತಿನ ಅಧಿದೇವತೆ  title=

ಬೆಂಗಳೂರು : ಗ್ರಹ ಸಂಬಂಧಿ ಸಮಸ್ಯೆಗಳನ್ನು ಬಹಳ ಸುಲಭವಾಗಿ ನಿವಾರಿಸಬಲ್ಲ ಕೆಲವು ಪರಿಹಾರಗಳನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.ವ್ಯಕ್ತಿಯ ಜಾತಕದಲ್ಲಿ ಶುಕ್ರ ಗ್ರಹವು ಉತ್ತಮ ಸ್ಥಾನದಲ್ಲಿ ಇದ್ದಾಗ ಆತನ ಆರ್ಥಿಕ ಸ್ಥಿತಿ ಕೂಡಾ ಸದೃಢವಾಗಿ ಇರುತ್ತದೆ.ಶುಕ್ರನನ್ನು ಸಂಪತ್ತಿನ ದೇವತೆ, ಭೌತಿಕ ಸೌಕರ್ಯಗಳು ಮತ್ತು ಸೌಕರ್ಯಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ.ಶುಕ್ರ ಮತ್ತು ಲಕ್ಷ್ಮೀಯ ಆಶೀರ್ವಾದ ವ್ಯಕ್ತಿಯ ಜೀವನದಲ್ಲಿ ಇದ್ದು ಬಿಟ್ಟರೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.  

ಒಂದು ವೇಳೆ, ವ್ಯಕ್ತಿಯ ಜಾತಕದಲ್ಲಿ ಶುಕ್ರನು ದುರ್ಬಲನಾಗಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಹಾಗಾಗಿ ಜಾತಕದಲ್ಲಿ ಶುಕ್ರನ ಸ್ಥಾನವನ್ನು ಬಲಪಡಿಸಲು ಕೆಲವು ಪರಿಹಾರ ಕಾರ್ಯಗಳನ್ನು ಸೂಚಿಸಲಾಗಿದೆ.ಹೀಗೆ ಮಾಡಿದರೆ ಮಲಗಿರುವ ಅದೃಷ್ಟ ಕೂಡಾ ಎದ್ದು ಕೂರುತ್ತದೆ, ಮುಚ್ಚಿರುವ ಅದೃಷ್ಟದ ಬಾಗಿಲು  ಒಮ್ಮೆಲೇ ತೆರೆದುಕೊಳ್ಳುತ್ತದೆಯಂತೆ. 

ಇದನ್ನೂ ಓದಿ : Samudra Shastra: ಇಂತಹ ಕುತ್ತಿಗೆಯನ್ನು ಹೊಂದಿರುವ ಮಹಿಳೆಯರು ಬಹಳ ಕುತಂತ್ರಿಗಳಂತೆ..! ಸಮುದ್ರಶಾಸ್ತ್ರದ ಆ ಶ್ಲೋಕಗಳಲ್ಲಿ ಇನ್ನೇನಿದೆ ಗೊತ್ತಾ? 

ಶುಕ್ರನನ್ನು ಬಲಪಡಿಸಲು ಹೀಗೆ ಮಾಡಿ : 
ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿಯನ್ನು ಸತತ 21 ಶುಕ್ರವಾರಗಳ ಕಾಲ ಪೂಜಿಸಬೇಕು. ಅವರಿಗೆ ಪ್ರಸಾದವಾಗಿ ಕೇಸರಿ ಹಾಕಿರುವ ಪಾಯಸ ಅಥವಾ ಸಿಹಿ ತಿಂಡಿಯನ್ನು ಮನೆಯಲ್ಲಿಯೇ ತಯಾರಿಸಿ ಅರ್ಪಿಸಬೇಕು.ಪೂಜೆ ಮುಗಿದ ನಂತರ,9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ ಈ ಪ್ರಸಾದವನ್ನು ವಿತರಿಸಬೇಕು. ನಂತರ ಈ ಪ್ರಸಾದವನ್ನು ಮನೆಯಲ್ಲಿರುವ ಹಿರಿಯ ಮಹಿಳೆಗೆ ಮೊದಲು ನೀಡಬೇಕು. ನಂತರ ಕುಟುಂಬದ ಪ್ರತಿಯೊಬ್ಬ ಸದಸ್ಯರು ಈ ಪ್ರಸಾದವನ್ನು ಸ್ವೀಕರಿಸಬೇಕು.ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುವುದಲ್ಲದೆ, ಹಣದ ಆಗಮನದ ಎಲ್ಲಾ ಮಾರ್ಗಗಳು ತೆರೆದುಕೊಳ್ಳುತ್ತವೆ. 

ಹಣಕ್ಕೆ ಸಂಬಂಧಿಸಿದ ಎಲ್ಲಾ ತೊಂದರೆಗಳು ದೂರವಾಗುತ್ತವೆ :
ಶುಕ್ರವಾರ  ಪೂಜೆ ಮಾಡುವ ಮುನ್ನ ಇಡೀ ಮನೆಯನ್ನು ಸ್ವಚ್ಚಗೊಳಿಸಬೇಕು. ಅಲ್ಲದೆ ಪೂಜೆ ಮಾಡುವ ಮಹಿಳೆ ಉಪವಾಸ ಮಾಡಬೇಕಾಗುತ್ತದೆ.ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು.ದೇವಸ್ಥಾನಕ್ಕೆ ಹೋಗಿ 11 ಕಮಲದ ಹೂವುಗಳನ್ನು ಅರ್ಪಿಸಿ ಮತ್ತು ಒಂಬತ್ತು ಬತ್ತಿಯ ತುಪ್ಪದ ದೀಪವನ್ನು ಬೆಳಗಿಸಿ.ಈ ದಿನ ಬಿಳಿ ಬಟ್ಟೆಗಳನ್ನು ದಾನ ಮಾಡಬಹುದು.ಹೀಗೆ ಮಾಡುವುದರಿಂದ ಜೀವನದ ಎಲ್ಲಾ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು  ದೂರವಾಗುವುದು. 

ಇದನ್ನೂ ಓದಿ :ಲಕ್ಷ್ಮೀ ನಾರಾಯಣ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುರಿ ಮಳೆ!ಪ್ರತಿ ಕಾರ್ಯದಲ್ಲೂ ಸ್ವಯಂ ಲಕ್ಷ್ಮಿಯೇ ಜೊತೆಯಾಗುತ್ತಾಳೆ

ವೃತ್ತಿ ಪ್ರಗತಿಗಾಗಿ :
ಶುಕ್ರವಾರ ಸ್ಟೀಲ್ ಬೀಗವನ್ನು ಖರೀದಿಸಿ.ರಾತ್ರಿ ಮಲಗುವ ಮುನ್ನ ಅದನ್ನು ನಿಮ್ಮ ಪಕ್ಕದಲ್ಲಿ ಇಟ್ಟುಕೊಳ್ಳಿ.ಮರುದಿನ ಅಂದರೆ ಶನಿವಾರ,ಆ ಬೀಗವನ್ನು ದೇವಸ್ಥಾನದಲ್ಲಿ ಇಟ್ಟು ಬನ್ನಿ.  ಯಾರಾದರೂ ಈ ಬೀಗವನ್ನು ತೆರೆದಾಗ ನಿಮ್ಮ ಅದೃಷ್ಟದ ಬೀಗವೂ ತೆರೆದುಕೊಳ್ಳುತ್ತದೆ. ಈ ಬೀಗವನ್ನು ನೀವು ಮಾತ್ರ ಯಾವುದೇ ಕಾರಣಕ್ಕೂ ತೆರೆಯಬಾರದು ಎನ್ನುವುದು ನೆನಪಿಡಿ.  

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News