Anchor Anushree: ಅಬ್ಬಬ್ಬಾ.. ಯಾವ ಸ್ಟಾರ್ ನಟಿಗೂ ಕಮ್ಮಿಯಿಲ್ಲ ಅನುಶ್ರೀ.. ಖ್ಯಾತ ನಿರೂಪಕಿ ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

 Anchor Anushree Remuneration for one Episode: ಪಟಾಕಿಯ ಹಾಗೇ ಚಟಪಟ ಮಾತಿನ ಮೂಲಕವೇ ಪ್ರೇಕ್ಷಕರನ್ನು ರಂಜಿಸುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ.. ಶುದ್ಧ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನೆಮಗಳಾದ ಈ ಚೆಲುವೆಯ ನಿರೂಪಣೆಗೆ ಮಾರುಹೋಗದವರೇ ಇಲ್ಲ.. 
 

1 /8

ಜೀ ಕನ್ನಡದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಇವರ ಆಂಕರಿಂಗ್ ಇರಲೇಬೇಕು ಎನ್ನುವ ಮಟ್ಟಿಗೆ ಜನಮನ ತಲುಪಿದ್ದಾರೆ ಅನುಶ್ರೀ.. ಇದರೊಂದಿಗೆ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಸೆಲೆಬ್ರಿಟಿಗಳ ಇಂಟರ್‌ವ್ಯೂವ್‌ ಕೂಡ ಮಾಡುತ್ತಾರೆ..     

2 /8

ಅತೀ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡ ಮಂಗಳೂರು ಚೆಲುವೆ ಅನುಶ್ರೀ ಒಂದು ಕಾರ್ಯಕ್ರಮದ ಒಂದು ಎಪಿಸೋಡ್‌ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವುದನ್ನು ತಿಳಿಯುವುದು ಹಲವರ ಕುತೂಹಲ.. ಈ ಬಗೆಗಿನ ಸಣ್ಣ ಮಾಹಿತಿಯೊಂದು ಇಲ್ಲಿದೆ..     

3 /8

ಕನ್ನಡ ಸಿನಿರಂಗ ಹಾಗೂ ಕಿರುತೆರೆಯ ಯಾವುದೇ ಪ್ರೋಗ್ರಾಮ್‌ಗಳಾದರೂ ಅನುಶ್ರೀ ಅವರ ಆಂಕರಿಂಗ್‌ ಇಲ್ಲವಾದರೇ ಆ ಕಾರ್ಯಕ್ರಮವೇ ಅಪೂರ್ಣವೆನ್ನಿಸುತ್ತದೆ ಎನ್ನುವುಷ್ಟು ಕ್ರೇಜ್‌ ಗಿಟ್ಟಿಸಿಕೊಂಡಿರುವ ಅನುಶ್ರೀ ಅವರಿಗೆ ನಟ-ನಟಿಯರಷ್ಟೇ ಅಭಿಮಾನಿ ಬಳಗವಿದೆ..    

4 /8

ಕಾರ್ಯಕ್ರಮು ಮುಗಿಯುವವರೆಗೂ ಬೇಸರವಾಗದೇ ಅದೇ ಎನರ್ಜಿಯಿಂದ ಎಲ್ಲರನ್ನು ರಂಜಿಸುವ ಚೆಲುವೆ ಅನುಶ್ರೀ ತಮ್ಮ ಆರಂಭಿದ ದಿನಗಳಲ್ಲಿ 250ರೂಗೆ ಕೆಲಸಮಾಡಿದ್ದಾರೆ..   

5 /8

ಇದೀಗ ನಟಿ, ನಿರೂಪಕಿ ಒಂದು ಎಪಿಸೋಡ್‌ಗೆ ಒಂದು ಲಕ್ಷ ಹಣವನ್ನು ತೆಗೆದುಕೊಳ್ಳುತ್ತಾರೆ ಎನ್ನಲಾಗಿತ್ತು.. ವರದಿಯ ಪ್ರಕಾರ ಅವರ ಕ್ರೇಜ್‌ ಮತ್ತಷ್ಟು ಹೆಚ್ಚಾಗಿದ್ದು ಅದರಂತೆ ತಮ್ಮ ಸಂಭಾವನೆಯನ್ನು ಅವರು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ..     

6 /8

ನಟ-ನಟಿಯರಷ್ಟೇ ಕ್ರೇಜ್‌ ಗಳಿಸಿಕೊಂಡ ಕನ್ನಡ ಚೆಲುವೆ ಅನುಶ್ರೀ ತಮ್ಮ ಆರಂಂಭಿಕ ದಿನಗಳಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡು ಸದ್ಯ ಖ್ಯಾತ ನಿರೂಪಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.. ಅಲ್ಲದೇ ಯಾರಿಗಾದರೂ ಕನ್ನಡ ಫೇವರೆಟ್‌ ಆಂಕರ್‌ ಯಾರು ಎಂದು ಕೇಳಿದರೆ ಎಲ್ಲರೂ ಹೇಳುವುದು ಅನುಶ್ರೀ ಅವರ ಹೆಸರು...     

7 /8

ಇನ್ನು ಅನುಶ್ರೀ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ.. ಆಗ್ಗಾಗೆ ಸಖತ್‌ ಪೋಟೋಗಳನ್ನು ಶೇರ್‌ ಮಾಡುತ್ತಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ..   

8 /8

ಆದ್ರೆ ಇವರ ಅಭಿಮಾನಿಗಳದ್ದು ಒಂದೇ ಪ್ರಶ್ನೆ ಅನುಶ್ರೀ ಮದುವೆ ಯಾವಾಗ ಅನ್ನೋದು.. ಆದ್ರೆ ನಿರೂಪಕಿ ಇದ್ಯಾವುದಕ್ಕೂ ಅಧಿಕೃತವಾಗಿ ಉತ್ತರ ನೀಡಿಲ್ಲ.. ಗೊಂದಲಮಯವಾಗಿಯೇ ಉತ್ತರಿಸಿ ಫ್ಯಾನ್ಸ್‌ ತಲೆಯಲ್ಲಿ ಹುಳಬಿಡುತ್ತಾರೆ..