Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿಯ ಈ ದಿನ ಶುಕ್ರವಾರ ಪುಷ್ಯ ನಕ್ಷತ್ರ, ಶಿವ ಯೋಗ ಎಲ್ಲಾ 12 ರಾಶಿಯ ಜನರಿಗೆ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಈ ರಾಶಿಯವರಿಗೆ ಇಂದು ಕೀರ್ತಿ, ವೈಭವ ಹೆಚ್ಚಾಗಲಿದೆ. ಬಹುದಿನಗಳಿಂದ ಕಾಯುತ್ತಿದ್ದ ಒಪ್ಪಂದಗಳು ಅಂತಿಮ ರೂಪವನ್ನು ಪಡೆಯಬಹುದು. ಆದಾಗ್ಯೂ, ಇಂದು ನೀವು ವಾಹನ ಚಾಲನೆಯ ವೇಳೆ ಜಾಗರೂಕರಾಗಿರಬೇಕು. ದೈಹಿಕ ನೋವನ್ನು ನಿರ್ಲಕ್ಷಿಸಬೇಡಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಈ ರಾಶಿಯವರಿಗೆ ಇಂದು ಸಂತೋಷದಿಂದ ಕೂಡಿದ ದಿನ. ಪ್ರೀತಿ-ಪ್ರೇಮದಲ್ಲಿರುವ ಜೋಡಿಗಳಿಗೆ ಉತ್ತಮವಾದ ದಿನ. ಆದರೆ, ನಿಮ್ಮ ತಾಯಿಯೊಂದಿಗೆ ಘರ್ಷಣೆ ಸಾಧ್ಯತೆ ಇರುವುದರಿಂದ ಈ ಸಮಯದಲ್ಲಿ ಚಿಂತನಾಶೀಲರಾಗಿ ಮಾತನಾಡಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಈ ರಾಶಿಯ ಜನರಿಗಿಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಮನ್ನಣೆ ದೊರೆಯಬಹುದು. ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡುವುದನ್ನು ಪರಿಗಣಿಸಿ. ನಿಮ್ಮ ಭಾವನೆಗಳನ್ನೂ ಮನೆಯವರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಈ ರಾಶಿಯವರು ಇಂದು ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಆದರೆ, ಕೆಲಸದಲ್ಲಿ ನಿಮ್ಮ ಎದುರಾಳಿಗಳನ್ನು ಲಘುವಾಗಿ ತೆಗೆದುಕೊಳ್ಳದೆ, ಅವರ ಬಗ್ಗೆ ಎಚ್ಚರಿಕೆಯಿಂದ ಇರಿ. ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುವುದನ್ನು ಪರಿಗಣಿಸಿ.
ಇದನ್ನೂ ಓದಿ- Budha Uday: ದೀಪಾವಳಿಗೂ ಮೊದಲೇ ಈ ರಾಶಿಯವರಿಗೆ ಲಕ್ಷ್ಮೀ ಕೃಪೆ, ಕೈತುಂಬಾ ಹಣ!
ಸಿಂಹ ರಾಶಿಯವರ ಭವಿಷ್ಯ (Leo Horoscope):
ಈ ರಾಶಿಯವರಿಗೆ ಇಂದು ಕೆಲಸದ ಒತ್ತಡ ಹೆಚ್ಚಾಗಲಿದೆ. ಇದರಿಂದ ಉದ್ಯೋಗದಲ್ಲಿ ನಿಮ್ಮ ಸ್ಥಾನ ಪ್ರತಿಷ್ಠೆಯೂ ಹೆಚ್ಚಾಗಬಹುದು. ನೀವು ಹೆಚ್ಚಿನ ಕುಟುಂಬ ಜವಾಬ್ದಾರಿಗಳನ್ನು ಹೊಂದಿರುತ್ತೀರಿ, ಆದರೆ ನಿಮ್ಮ ಸಹೋದರರು ಮತ್ತು ಸಹೋದರಿಯರು ನಿಮ್ಮ ಕೆಲಸದಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಈ ರಾಶಿಯ ಉದ್ಯೋಗಸ್ಥರಿಗೆ ಇಂದು ಉತ್ತಮ ದಿನವಾಗಿದೆ. ಶತ್ರುಗಳು ನಿಮ್ಮ ಕೆಲಸವನ್ನು ಹಾಳು ಮಾಡಲು ಪ್ರಯತ್ನಿಸುತ್ತಾರೆ ಈ ಬಗ್ಗೆ ಜಾಗರೂಕರಾಗಿರಿ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ವಾತಾವರಣವು ಆಹ್ಲಾದಕರವಾಗಿರುತ್ತದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಈ ರಾಶಿಯವರಿಗೆ ಇಂದು ಲಾಭದಾಯಕದಿನ. ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಯ ನಿಮ್ಮ ಪಾಲಿಗಿದೆ. ಯಾವುದಾದರೂ ಹೊಸ ಯೋಜನೆಗೆ ಕೈ ಹಾಕಲು ಯೋಚಿಸುತ್ತಿದ್ದರೆ ಈ ವಿಷಯದಲ್ಲಿ ಇಂದು ಮುಂದುವರೆಯಬಹುದು.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ನಿಮ್ಮ ಸೃಜನಾತ್ಮಕ ಕೆಲಸಗಳಿಂದ ನೀವು ಹೆಸರು ಗಳಿಸುವಿರಿ. ಕುಟುಂಬದಲ್ಲಿ ದೀರ್ಘಕಾಲದಿಂದ ಮೂಡಿದ್ದ ಉದ್ವಿಗ್ನತೆ ದೂರವಾಗಲಿದೆ. ನಿಮ್ಮ ಮಕ್ಕಳಿಂದ ಇಂದು ನೀವು ಸಂತೋಷವನ್ನು ಅನುಭವಿಸುವಿರಿ. ಉದ್ಯೋಗಸ್ಥರು ಕೆಲಸದ ನಿಮಿತ್ತ ಪ್ರವಾಸ ಕೈಗೊಳ್ಳಬೇಕಾಗಬಹುದು.
ಇದನ್ನೂ ಓದಿ- ಎದುರಿನವರು ಎಂತದ್ದೇ ತಪ್ಪು ಮಾಡಿದ್ರೂ ಕ್ಷಮಿಸುವ ದಯಾಮಯಿಗಳು ಈ ರಾಶಿಯ ಜನ
ಧನು ರಾಶಿಯವರ ಭವಿಷ್ಯ (Sagittarius Horoscope):
ಈ ರಾಶಿಯ ಜನರು ಇಂದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ಉದ್ಯೋಗವನ್ನು ಹುಡುಕುತ್ತಿರುವ ಜನರು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ನಿಮ್ಮ ವ್ಯವಹಾರದಲ್ಲಿ ಕೆಲವು ಏರಿಳಿತಗಳ ನಂತರವೂ ನೀವು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳಲ್ಲಿ ಜಯ ಸಾಧಿಸುವಿರಿ. ಆದಾಗ್ಯೂ, ಕಠಿಣ ಪರಿಶ್ರಮದ ನಂತರವೇ ನೀವು ಯಶಸ್ಸನ್ನು ಕಾಣುತ್ತೀರಿ. ಯಾವುದೇ ವಿಷಯಗಳಲ್ಲಿ ನೀವು ಒತ್ತಡವನ್ನು ಎದುರಿಸುತ್ತಿದ್ದರೆ ಅದು ಇಂದು ಹೆಚ್ಚಾಗಬಹುದು. ಹಾಗಂತ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಈ ರಾಶಿಯವರಿಗೆ ಇಂದು ಆರೋಗ್ಯವು ಏರಿಳಿತಗಳಿಂದ ಕೂಡಿರಲಿದೆ. ನಿಮ್ಮೊಳಗಿನ ಆತ್ಮವಿಶ್ವಾಸದಿಂದ ನೀವು ಎಲ್ಲವನ್ನೂ ನಿಭಾಯಿಸುವಿರಿ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಇರುತ್ತದೆ. ನಿಮ್ಮ ಕುಟುಂಬದಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಈ ರಾಶಿಯ ಜನರಿಗೆ ಇಂದು ಅದೃಷ್ಟದ ದಿನ. ನಿಮ್ಮ ಕೆಲಸದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಆದರೆ, ತಾಳ್ಮೆಯಿಂದ ಮಾಡಿದರಷ್ಟೇ ಈ ಫಲ ದೊರೆಯಲಿದೆ. ನೀವು ಯಾವುದೇ ವಹಿವಾಟಿನ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಆ ಸಮಸ್ಯೆಯೂ ಪರಿಹಾರವಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.