ಮಾರುಕಟ್ಟೆಗೆ ಕಾಲಿಟ್ಟಿದೆ Samsung Galaxy S24 FE : ಅದ್ಭುತವಾಗಿ ಡಿಸೈನ್, ಬ್ಯಾಟರಿ, ಕ್ಯಾಮರಾ !

 Samsung ತನ್ನ Galaxy S24 ಸರಣಿಯಲ್ಲಿ Galaxy S24 FE ಫೋನ್ ಬಿಡುಗಡೆ ಮಾಡಿದೆ.ಈ ಫೋನ್ ಅನ್ನು ಮುಂಗಡವಾಗಿ ಆರ್ಡರ್ ಮಾಡಬಹುದು.   

Written by - Ranjitha R K | Last Updated : Sep 27, 2024, 01:12 PM IST
  • samsung ತನ್ನ Galaxy S24 ಸರಣಿಯಲ್ಲಿ Galaxy S24 FE ಬಿಡುಗಡೆ
  • Galaxy AI ನಂತಹ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.
  • ಈ ಫೋನ್ ಅನ್ನು ಮುಂಗಡವಾಗಿ ಆರ್ಡರ್ ಮಾಡಬಹುದು.
ಮಾರುಕಟ್ಟೆಗೆ ಕಾಲಿಟ್ಟಿದೆ Samsung Galaxy S24 FE : ಅದ್ಭುತವಾಗಿ ಡಿಸೈನ್, ಬ್ಯಾಟರಿ, ಕ್ಯಾಮರಾ ! title=

ಬೆಂಗಳೂರು : Samsung ತನ್ನ Galaxy S24 ಸರಣಿಯಲ್ಲಿ Galaxy S24 FE ಹೆಸರಿನ ಹೊಸ ಫೋನ್ ಅನ್ನು ಬಿಡುಗಡೆ ಮಾಡಿದೆ.ಈ ಫೋನ್ ಈ ಸರಣಿಯಲ್ಲಿ ಅಗ್ಗದ ಫೋನ್ ಆಗಿದ್ದು Galaxy AI ನಂತಹ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.ಈ ಫೋನ್ ಅನ್ನು ಮುಂಗಡವಾಗಿ ಆರ್ಡರ್ ಮಾಡಬಹುದು. ಕಂಪನಿಯು ಈ ಫೋನ್ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. 

Samsung Galaxy S24 FE ಬೆಲೆ : 
Samsung Galaxy S24 FE ಎರಡು ಮಾದರಿಗಳಲ್ಲಿ ಬರುತ್ತದೆ.8GB RAM + 128GB ಮತ್ತು 8GB RAM + 256GB.ಈ ಫೋನ್‌ನ ಬೆಲೆಯು ಅಮೇರಿಕಾದಲ್ಲಿ 699.99 ಡಾಲರ್ (ಅಂದಾಜು  54,360)ನಿಂದ ಪ್ರಾರಂಭವಾಗುತ್ತದೆ.ಅತ್ಯಂತ ದುಬಾರಿ ಮಾಡೆಲ್  749.99 ಡಾಲರ್ (ಅಂದಾಜು ರೂ 59,378) ಆಗಿದೆ.ಈ ಫೋನ್ ಅನ್ನು ಅಮೆರಿಕದಲ್ಲಿ ಮುಂಗಡವಾಗಿ ಆರ್ಡರ್ ಮಾಡಬಹುದು.ಈ ಫೋನ್ ನೀಲಿ, ಗ್ರ್ಯಾಫೈಟ್,ಗ್ರೇ ಮತ್ತು ಮಿಂಟ್ ಎನ್ನುವ ನಾಲ್ಕು ಬಣ್ಣಗಳಲ್ಲಿ ಬರುತ್ತದೆ.  ಅಕ್ಟೋಬರ್ 3ರಿಂದ ಅಮೆರಿಕದಲ್ಲಿ ಈ ಫೋನ್ ಮಾರಾಟ ಆರಂಭವಾಗಲಿದೆ. ಆದರೆ ಭಾರತದಲ್ಲಿ ಈ ಫೋನ್‌ನ ಬೆಲೆ ಮತ್ತು ಲಭ್ಯತೆಯ ಬಗ್ಗೆ ಕಂಪನಿಯು ಇನ್ನೂ ಏನನ್ನೂ ಹೇಳಿಲ್ಲ.

ಇದನ್ನೂ ಓದಿ : ಅರ್ಧದಷ್ಟಾಯಿತು iPhone 15ರ ಬೆಲೆ !ಈಗ ನೀವೂ ಬಳಸಬಹುದು ಸಿರಿವಂತರ ಫೋನ್

Samsung Galaxy S24 FE ವಿಶೇಷಣಗಳು :
Samsung Galaxy S24 FE Samsung Exynos 2400e ಪ್ರೊಸೆಸರ್ ಅನ್ನು ಹೊಂದಿದೆ. ಇದು 8GB RAM ಮತ್ತು 256GB ವರೆಗೆ ಸ್ಟೋರೇಜ್ ಅನ್ನು ಹೊಂದಿದೆ. ಈ ಫೋನ್ Android 14 ರಲ್ಲಿ ಕಾರ್ಯನಿರ್ವಹಿಸುತ್ತದೆ.Galaxy S24 ಸರಣಿಯ ಇತರ ಫೋನ್‌ಗಳಂತೆ ಸಾಕಷ್ಟು AI ವೈಶಿಷ್ಟ್ಯಗಳನ್ನು ಹೊಂದಿದೆ.ಈ ಫೋನ್ 6.7 ಇಂಚಿನ FHD+ ಡೈನಾಮಿಕ್ AMOLED 2X ಡಿಸ್ಪ್ಲೇಯನ್ನು ಹೊಂದಿದೆ.ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಅನ್ನು ಈ ಡಿಸ್ಪ್ಲೇನಲ್ಲಿ ಇನ್ಸ್ಟಾಲ್ ಮಾಡಲಾಗಿದೆ. ಈ ಫೋನ್ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದ್ದು, ತುಂಬಾ ಗಟ್ಟಿಯಾಗಿದೆ. 

50MP ಮೇನ್  ಕ್ಯಾಮೆರಾ, 12MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 8MP ಟೆಲಿಫೋಟೋ ಕ್ಯಾಮೆರಾ ಹೀಗೆ ಈ ಫೋನ್ ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿದೆ.ಸೆಲ್ಫಿಗಾಗಿ 10MP ಫ್ರಂಟ್ ಕ್ಯಾಮೆರಾವನ್ನು ನೀಡಲಾಗಿದೆ.ಈ ಫೋನ್ 4,700mAh ಬ್ಯಾಟರಿಯನ್ನು ಹೊಂದಿದು, ಬಹಳ ಬೇಗನೆ ಚಾರ್ಜ್ ಆಗುತ್ತದೆ.ಈ ಫೋನ್‌ನಲ್ಲಿ ಎರಡು ಸಿಮ್ ಕಾರ್ಡ್‌ಗಳು ಅಥವಾ ಎರಡು ಇ-ಸಿಮ್ ಕಾರ್ಡ್‌ಗಳನ್ನು ಬಳಸಬಹುದು.ಇದು Wi-Fi 6E, Bluetooth v5.3, NFC, NavIC ಮತ್ತು ಇತರ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 213 ಗ್ರಾಂ ತೂಗುವ ಈ ಫೋನ್ ಗಾತ್ರ 162.0 x 77.3 x 8.0.

ಇದನ್ನೂ ಓದಿ : ಅನಿಯಮಿತ ಕರೆ, ಡೇಟಾ, ಜಿಯೋ ಸಿನಿಮಾ ಸೇರಿದಂತೆ ಇನ್ನೂ ಹೆಚ್ಚಿನ ಲಾಭ ಬೆಲೆ 200 ರೂ.ಗಿಂತಲೂ ಕಡಿಮೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News