ದಿನಭವಿಷ್ಯ 01-10-2024: ಮಂಗಳವಾರದಂದು ಪೂರ್ವಾ ನಕ್ಷತ್ರ, ಶುಕ್ಲ ಯೋಗ ನಿಮ್ಮ ರಾಶಿಗೆ ಹೇಗಿದೆ!

Today Horoscope 01st October 2024: ಮಂಗಳವಾರದಂದು ಪೂರ್ವಾ ನಕ್ಷತ್ರ, ಶುಕ್ಲ ಯೋಗ  ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Oct 1, 2024, 06:46 AM IST
  • ಇಂದು ಚತುರ್ದಶಿ ತಿಥಿ
  • ಈ ದಿನ ಪೂರ್ವಾ ನಕ್ಷತ್ರ, ಶುಕ್ಲ ಯೋಗ
  • ಮಂಗಳವಾರದಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ.
ದಿನಭವಿಷ್ಯ 01-10-2024:  ಮಂಗಳವಾರದಂದು ಪೂರ್ವಾ ನಕ್ಷತ್ರ, ಶುಕ್ಲ ಯೋಗ ನಿಮ್ಮ ರಾಶಿಗೆ ಹೇಗಿದೆ!   title=

Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಮಂಗಳವಾರದ ಈ ದಿನ ಪೂರ್ವಾ ನಕ್ಷತ್ರ, ಶುಕ್ಲ ಯೋಗ ಯಾವ ರಾಶಿಯವರಿಗೆ ಶುಭವಾಗಿದೆ ತಿಳಿಯಿರಿ.

ಮೇಷ ರಾಶಿಯವರ ಭವಿಷ್ಯ (Aries Horoscope):  
ಈ ರಾಶಿಯವರಿಗೆ ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ಕೌಟುಂಬಿಕ ಸಮಸ್ಯೆಗಳು ಮರುಕಳಿಸಬಹುದಾದ್ದರಿಂದ ಮನಸ್ಸಿಗೆ ಕಿರಿಕಿರಿ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಸಿಗದೇ ಇರಬಹುದು. ಇದರಿಂದ ನಿರಾಶೆ ಅನುಭವಿಸುವಿರಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಈ ರಾಶಿಯವರು ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ಕುಟುಂಬದಲ್ಲಿ ನಿಮ್ಮ ಜವಾಬ್ದಾರಿಗಳಲ್ಲಿ ಅಸಡ್ಡೆ ತೋರಬೇಡಿ. ಇದು ಕುಟುಂಬ ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗಬಹುದು. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಹೊಸ ಉದ್ಯಮವನ್ನು ಆರಂಭಿಸಲು ಯೋಚಿಸುತ್ತಿರುವವರಿಗೆ ಇಂದು ಶುಭ ದಿನ. ನಿಮ್ಮ ಸಹೋದ್ಯೋಗಿಗಳೊಂದಿಗೆ ಸಂತಸದ ಸಂಜೆ ಪಾರ್ಟಿ ಆಯೋಜಿಸಬಹುದು. ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಬಹು ದಿನಗಳ ನಿಮ್ಮ ಕನಸು ನನಸಾಗಬಹುದು. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಈ ರಾಶಿಯವರು ಇಂದು ವಿವಾದಗಳಿಂದ ದೂರ ಉಳಿದ್ರೆ ಒಳ್ಳೇದು. ಇಲ್ಲವೇ ದೊಡ್ಡ ಅಪಾಯದಲ್ಲಿ ಸಿಲುಕುವಿರಿ. ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳನ್ನು ಅನುಭವಿಸಬಹುದು. ಆದರೂ, ನಿಮ್ಮ ಬುದ್ದಿವಂತಿಕೆಯಿಂದ ಹಿಡಿದ ಕೆಲಸ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ. 

ಇದನ್ನೂ ಓದಿ- ವಿಜಯದಶಮಿಯಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗದಿಂದ ಈ ರಾಶಿಯವರಿಗೆ ಅಷ್ಟದಿಕ್ಕುಗಳಿಂದಲೂ ಅದೃಷ್ಟ!

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಈ ರಾಶಿಯ ಜನರು ಇಂದು ವ್ಯವಹಾರಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಾಗಬಹುದು.  ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಗೌರವ ಗಳಿಸುತ್ತಾರೆ. ಪೂರ್ವಜರ ಆಸ್ತಿಗೆ ಸಂಬಂಧಿದಂತೆ ಶುಭ ಸುದ್ದಿ ನಿರೀಕ್ಷಿಸಬಹುದು. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಈ ರಾಶಿಯವರಿಗೆ ಇಂದು ಕೆಲಸದ ಒತ್ತಡ ಹೆಚ್ಚಾಗುವುದರಿಂದ ಪ್ರಕ್ಷುಬ್ಧತೆಯನ್ನು ಅನುಭವಿಸುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಮುಂದುವರೆಯುವುದು ಸೂಕ್ತ. ಯಾವುದೇ ರೀತಿಯ ಪ್ರಮುಖ ಹಣಕಾಸಿನ ವಹಿವಾಟನ್ನು ತಪ್ಪಿಸಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಈ ರಾಶಿಯ ಜನರಿಗೆ ಇಂದು ಸಮಾಜದಲ್ಲಿ ಗೌರವ ಹೆಚ್ಚಾಗಬಹುದು. ಹಬ್ಬಕ್ಕಾಗಿ ಶಾಪಿಂಗ್ ಗಾಗಿ ಯೋಜಿಸಲು ಶುಭ ಸಮಯ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. ಆದರೆ, ಮಕ್ಕಳ ನಡವಳಿಕೆಯಿಂದ ಅಸಮಾಧಾನ ನಿಮ್ಮನ್ನು ಬಾಧಿಸಬಹುದು. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಈ ರಾಶಿಯವರು ಇಂದು ಸಂಗಾತಿಯೊಂದಿಗೆ ಕೋಪದಿಂದ ವರ್ತಿಸುವುದನ್ನು ತಪ್ಪಿಸಿ. ಇದು ಅವರ ಭಾವನೆಗಳಿಗೆ ನೋವುಂಟು ಮಾಡಬಹುದು. ವ್ಯಾಪಾರದಲ್ಲಿ ಪ್ರತಿಸ್ಪರ್ಧಿಗಳು ಕಠಿಣ ಸ್ಪರ್ಧೆ ಒಡ್ಡಬಹುದು. ಇದಕ್ಕೆ ಸಿದ್ದವಾಗಿರಿ. ನಿಮ್ಮ ಆರೋಗ್ಯದ ಬಗ್ಗೆ ನಿಗಾವಹಿಸಿ. 

ಇದನ್ನೂ ಓದಿ- Weekly Horoscope: ಮಹಾಲಯ ಅಮಾವಾಸ್ಯೆಯಂದೇ ಸೂರ್ಯಗ್ರಹಣ:  ಈ ವಾರ 4 ರಾಶಿಯವರಿಗೆ ಆಸ್ತಿ ಖರೀದಿ ಯೋಗ, ಸಂಪತ್ತು ವೃದ್ಧಿ 

ಧನು ರಾಶಿಯವರ ಭವಿಷ್ಯ (Sagittarius Horoscope):  
ಈ ರಾಶಿಯ ಜನರಿಗೆ ಇಂದು ಮಿಶ್ರ ಪ್ರತಿಫಲ ದಿನವಾಗಿರುತ್ತದೆ. ವ್ಯಾಪಾರದಲ್ಲಿ ವಿಶೇಷ ವ್ಯಕ್ತಿಗಳ ಪರಿಚಯದಿಂದ ಲಾಭವಾಗಲಿದೆ. ನಿಮ್ಮ ಸಂಗತಿಯೊಂದಿಗೆ ಕೋಪದಿಂದ ವರ್ತಿಸುವುದನ್ನು ತಪ್ಪಿಸಿ. ಕೆಲಸದಲ್ಲಿ ಸೋಮಾರಿತನವನ್ನು ತಪ್ಪಿಸಿ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಈ ರಾಶಿಯ ಜನರು ಇಂದು ಆಹ್ಲಾದಕರ ದಿನವನ್ನು ಆನಂದಿಸುವಿರಿ. ಕುಟುಂಬದಲ್ಲಿ ಪ್ರೀತಿ-ಸಹಕಾರ ತುಂಬಿರಲಿದೆ. ಕುಟುಂಬದಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಅತ್ಯುತ್ತಮ ದಿನವಾಗಿದೆ. ವಿದ್ಯಾರ್ಥಿಗಳಿಗೆ ಫಲಪ್ರದವಾದ ದಿನ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಈ ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದ ಪ್ರತಿ ಹೆಜ್ಜೆಯನ್ನೂ ಇಡಬೇಕು. ಪ್ರತಿ ಹೆಜ್ಜೆಗೂ ಸವಾಲುಗಳಿರುತ್ತವೆ. ಇದಕ್ಕಾಗಿ ಮಾನಸಿಕವಾಗಿ ಸಿದ್ದವಾಗಿರಿ. ಕೆಲಸದಲ್ಲಿ ಅಪಾಯವನ್ನು ತೆಗೆದುಕೊಳ್ಳುವುದು ನಷ್ಟಕ್ಕೆ ಕಾರಣವಾಗಬಹುದು. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಈ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಕುಟುಂಬಸ್ಥರು ಅಚ್ಚರಿಯ ಪಾರ್ಟಿಯನ್ನು ಆಯೋಜಿಸಬಹುದು. ಹೊಸ ವಾಹನ ಖರೀದಿಸುವ ಬಹುದಿನಗಳ ನಿಮ್ಮ ಕನಸು ನನಸಾಗುವ ಸಾಧ್ಯತೆ ಇರುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News