ಬೆಂಗಳೂರು: ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ಹಾವಳಿ ದೇಶದಲ್ಲೂ ಮುಂದುವರೆದಿದೆ. ದೇಶದ ವಿವಿಧ ಭಾಗಗಳಿಂದ 81 ಹೊಸ ಪ್ರಕರಣಗಳು ವರದಿಯಾಗಿರುವುದರಿಂದ ದೇಶದ ಒಟ್ಟು ಕರೋನವೈರಸ್ ಪ್ರಕರಣಗಳು ಭಾನುವಾರ (ಮಾರ್ಚ್ 22) 396 ಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಇಂದೂ ಸಹ ಬಂದ್ ಮುಂದುವರೆದಿದೆ.
ಗಮನಾರ್ಹವಾಗಿ ಕೊರೊನಾವೈರಸ್‌ನ(Coronavirus) ಹರಡುವಿಕೆಯನ್ನು ತಪ್ಪಿಸುವ ಸಲುವಾಗಿ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ಯಾವುದೇ ವಾಣಿಜ್ಯ ವಹಿವಾಟು ಕೂಡ ಇರುವುದಿಲ್ಲ.
ಈ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಮನೆಯಿಂದ ಹೊರಗೆ ಹೋಗದೇ ಇರುವುದು ಉತ್ತಮ. ಒಂದೊಮ್ಮೆ ಹೋಗಲೇಬೇಕಾದ ಪರಿಸ್ಥಿತಿ ಇದ್ದರೆ ಇಂದು ಏನಿರುತ್ತೆ? ಏನಿರಲ್ಲ ಎಂಬುದನ್ನು ಒಮ್ಮೆ ತಿಳಿಯಿರಿ.
ಏನಿರುತ್ತೆ?
> ಹಾಲು
> ಹಣ್ಣು
> ತರಕಾರಿ
> ದಿನಸಿ
> ಪೇಪರ್
> ಆರೋಗ್ಯ ಸೇವೆ
> ಆಟೋ
> ಅಗ್ನಿಶಾಮಕ
> ಬ್ಯಾಂಕ್
> ಎಟಿಎಂ
> ಪೋಸ್ಟ್ ಆಫೀಸ್
> ಸರ್ಕಾರಿ ಸೇವೆಗಳು ಲಭ್ಯ
ಏನಿರಲ್ಲ?
* ಸಾರ್ವಜನಿಕ ಸಾರಿಗೆ ವ್ಯವಸ್ಥೆ
* ಮೆಟ್ರೋ
* ಚಲನಚಿತ್ರ ಮಂದಿರ
* ಶಾಪಿಂಗ್ ಮಾಲ್
* ವಾಣಿಜ್ಯ ವಹಿವಾಟು
* ಶಾಲಾ-ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳು, ಕೋಚಿಂಗ್ ಸೆಂಟರ್ ಗಳನ್ನು ಮುಚ್ಚಲಾಗುವುದು.
*ಹೆಚ್ಚು ಜನರು ಬಳಸುವು ಸ್ವಿಮ್ಮಿಂಗ್ ಫೂಲ್ಸ್, ಜಿಮ್ ಮುಂತಾದವುಗಳು ಬಂದ್.