ಮಾದಪ್ಪನ ಬೆಟ್ಟದ ಬಸ್ ಚಾಲಕನಿಂದಲೇ ಮದ್ಯ ಸಾಗಾಟ- ಬಂಧನ 

ಅಕ್ರಮ ಮದ್ಯ ಸಾಗಾಟದ ಖಚಿತ ಮಾಹಿತಿ ಮೇರೆಗೆ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ದಾಳಿ ನಡೆಸಿ ಮದ್ಯದ ಪೌಚುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

Written by - Krishna N K | Last Updated : Oct 19, 2024, 06:06 PM IST
    • ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಸಾಗಾಟ
    • ಮದ್ಯ ಸಾಗಾಟ ನಡೆಸುವಾಗ ಪ್ರಾಧಿಕಾರದ ಬಸ್ ಚಾಲಕನೇ ಸಿಕ್ಕಿಬಿದ್ದಿದ್ದಾನೆ.
    • ಪ್ರಾಧಿಕಾರದ ಬಸ್ ಚಾಲಕ ರಾಜು ಎಂಬಾತ ಬಂಧಿತ ಆರೋಪಿ.
ಮಾದಪ್ಪನ ಬೆಟ್ಟದ ಬಸ್ ಚಾಲಕನಿಂದಲೇ ಮದ್ಯ ಸಾಗಾಟ- ಬಂಧನ  title=

ಚಾಮರಾಜನಗರ: ನಾಡಿನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಸಾಗಾಟ ನಡೆಸುವಾಗ ಪ್ರಾಧಿಕಾರದ ಬಸ್ ಚಾಲಕನೇ ಸಿಕ್ಕಿಬಿದ್ದಿದ್ದಾನೆ.

ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಬಸ್ ಚಾಲಕ ರಾಜು ಎಂಬಾತ ಬಂಧಿತ ಆರೋಪಿ. ಬಸ್ ನಲ್ಲಿ ಕ್ಷೇತ್ರಕ್ಕೆ ಬೆಂಗಳೂರು, ಮೈಸೂರು, ಕೊಳ್ಳೇಗಾಲದಿಂದ ಭಕ್ತಾದಿಗಳನ್ನು ಕರೆತರುವ ಜೊತೆಗೆ ಅಕ್ರಮವಾಗಿ ಮದ್ಯ ಸಾಗಾಟ ನಡೆಸುತ್ತಿದ್ದನು. ಅಕ್ರಮ ಮದ್ಯ ಸಾಗಾಟದ ಖಚಿತ ಮಾಹಿತಿ ಮೇರೆಗೆ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ದಾಳಿ ನಡೆಸಿ ಮದ್ಯದ ಪೌಚುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Viral Video: ನಾನು ನಿಮಗೆ ಮತ ಹಾಕಿದ್ದೇನೆ, ಮದುವೆ ಮಾಡಿಸಿ! ಶಾಸಕರಿಗೆ ಬೇಡಿಕೆ ಇಟ್ಟ ವ್ಯಕ್ತಿ..!

ಚಾಲಕನ ವಿರುದ್ಧ  ಶಿಸ್ತು ಕ್ರಮ. ಕೈಗೊಳ್ಳುವಂತೆ ಪೊಲೀಸರು ಪ್ರಾಧಿಕಾರಕ್ಕೆ ಪತ್ರ ಕೂಡ ಬರೆದಿದ್ದಾರೆ. ದೀಪದ ಕೆಳಗೆ ಕತ್ತಲು ಎಂಬಂತೆ ಪ್ರಾಧಿಕಾರದ ಬಸ್ ನಲ್ಲೇ ಮದ್ಯ ಸಾಗಾಟ ನಡೆಸಿರುವುದಕ್ಕೆ ಭಕ್ತಾದಿಗಳು ಆಕ್ರೋಶ ಹೊರಹಾಕಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News