Viral Video: ನಾನು ನಿಮಗೆ ಮತ ಹಾಕಿದ್ದೇನೆ, ನನಗೆ ಮದುವೆ ಮಾಡಿಸಿ..! ಶಾಸಕರಿಗೆ ಬೇಡಿಕೆ ಇಟ್ಟ ವ್ಯಕ್ತಿ..!

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಪೆಟ್ರೋಲ್ ಬಂಕ್‌ ಉದ್ಯೋಗಿಯೊಬ್ಬ ಶಾಸಕರೋಬ್ಬರಿಗೆ ನಾನು ನಿಮಗೆ ಮತ ಹಾಕಿದ್ದೇನೆ ನನಗೆ ಮದುವೆ ಮಾಡಿಸಿ ಎಂದು ಮನವಿ ಮಾಡಿದ್ದಾನೆ.

Written by - Manjunath N | Last Updated : Oct 19, 2024, 05:54 PM IST
  • ಈ ವ್ಯಕ್ತಿಯನ್ನು ಉತ್ತರ ಪ್ರದೇಶದ ಮಹೋಬಾದ ಪೆಟ್ರೋಲ್ ಬಂಕ್‌ ಉದ್ಯೋಗಿಯಾಗಿದ್ದು,
  • ಚರಖಾರಿ ಶಾಸಕ ಬ್ರಿಜ್ ಭೂಷಣ್ ರಜಪೂತ್ ಅವರಿಗೆ ಕಂಕಣ ಭಾಗ್ಯ ಕಲ್ಪಿಸಲು ಆ ಯುವಕ ಮನವಿ ಮಾಡಿದ್ದಾನೆ.
  • ಈ ವಿಡಿಯೊವನ್ನು ಸ್ವತಃ ಶಾಸಕರೇ ತಮ್ಮ ಫೇಸ್ ಬುಕ್ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ
 Viral Video: ನಾನು ನಿಮಗೆ ಮತ ಹಾಕಿದ್ದೇನೆ, ನನಗೆ ಮದುವೆ ಮಾಡಿಸಿ..! ಶಾಸಕರಿಗೆ ಬೇಡಿಕೆ ಇಟ್ಟ ವ್ಯಕ್ತಿ..! title=

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಪೆಟ್ರೋಲ್ ಬಂಕ್‌ ಉದ್ಯೋಗಿಯೊಬ್ಬ ಶಾಸಕರೋಬ್ಬರಿಗೆ ನಾನು ನಿಮಗೆ ಮತ ಹಾಕಿದ್ದೇನೆ ನನಗೆ ಮದುವೆ ಮಾಡಿಸಿ ಎಂದು ಮನವಿ ಮಾಡಿದ್ದಾನೆ.

ಈ ವ್ಯಕ್ತಿಯನ್ನು ಉತ್ತರ ಪ್ರದೇಶದ ಮಹೋಬಾದ ಪೆಟ್ರೋಲ್ ಬಂಕ್‌ ಉದ್ಯೋಗಿಯಾಗಿದ್ದು, ಚರಖಾರಿ ಶಾಸಕ ಬ್ರಿಜ್ ಭೂಷಣ್ ರಜಪೂತ್ ಅವರಿಗೆ ಕಂಕಣ ಭಾಗ್ಯ ಕಲ್ಪಿಸಲು ಆ ಯುವಕ ಮನವಿ ಮಾಡಿದ್ದಾನೆ. ಈ ವಿಡಿಯೊವನ್ನು ಸ್ವತಃ ಶಾಸಕರೇ ತಮ್ಮ ಫೇಸ್ ಬುಕ್ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಶಾಸಕರು ವಾಹನಕ್ಕೆ ಇಂಧನ ತುಂಬಿಸಲು ಪೆಟ್ರೋಲ್ ಬಂಕ್‌ಗೆ ತೆರಳಿದ್ದ ವೇಳೆ. ಆಗ ಅವರ ಬಳಿ ಬಂದ ಪೆಟ್ರೋಲ್ ಬಂಕ್‌ ಉದ್ಯೋಗಿ ಅಖಿಲೇಂದ್ರ ಖರೆ (44) ನನಗೆ ಇನ್ನೂ ಮದುವೆಯಾಗಿಲ್ಲ. ಹುಡುಗಿ ಹುಡುಕಿ ಮದುವೆ ಮಾಡಿಸುವಂತೆ ಅವರ ಬಳಿ ಮನವಿ ಮಾಡಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಜಪೂತ್, ಅವರು ಬೇರೆ ಯಾರಿಗಾದರೂ ಈ ರೀತಿ ಮನವಿ ಮಾಡಿದ್ದಿರಾ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು ಮಹೋಬದ ಶಾಸಕ ರಾಕೇಶ್ ಕುಮಾರ್ ಗೋಸ್ವಾಮಿ ಅವರ ಬಳಿ ಮನವಿ ಮಾಡಿದ್ದೆ ಆದರೆ ಯಾವುದೇ ಆದರೆ ಪ್ರಯೋಜನವಾಗಿಲ್ಲ ಎಂದು ವ್ಯಕ್ತಿ ಉತ್ತರಿಸಿದ್ದಾನೆ.ಇದಾದ ಬಳಿಕ ಶಾಸಕರು ಯಾವ ರೀತಿಯ ಕನ್ಯೆ ಬೇಕು ಎಂದು ಪ್ರಶ್ನಿಸಿದ್ದಲ್ಲದೆ ಆತನ ಸಂಬಳದ ಬಗ್ಗೆಯೂ ವಿಚಾರಿಸಿ ಕನ್ಯೆ ಹುಡುಕುವುದಾಗಿ ಭರವಸೆ ನೀಡಿದ್ದಾರೆ.ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News