W,W,W,W,W... 5 ವಿಕೆಟ್‌ ಕಬಳಿಸಿ ಟೆಸ್ಟ್‌ನಲ್ಲಿ ಚರಿತ್ರೆ ಸೃಷ್ಟಿಸಿದ ಜಡೇಜಾ! ಒಂದೇ ಪಂದ್ಯದಲ್ಲಿ ಇಬ್ಬರು ದಿಗ್ಗಜರ ದಾಖಲೆ ಮುರಿದೇಬಿಟ್ರು ಸ್ಟಾರ್‌ ಆಲ್‌ರೌಂಡರ್‌

Ravindra Jadeja Record: ಈ ಇನ್ನಿಂಗ್ಸ್‌ನ ಮೊದಲ 11 ಓವರ್‌ಗಳಲ್ಲಿ ಜಡೇಜಾ ಯಶಸ್ವಿಯಾಗಲಿಲ್ಲ, ಆದರೆ 12 ನೇ ಓವರ್‌ನಲ್ಲಿ, ಈ ಸ್ಟಾರ್ ಒಬ್ಬರ ನಂತರ ಒಬ್ಬರಂತೆ ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್‌ ದಾರಿ ತೋರಿಸಿದ್ದರು.

Written by - Bhavishya Shetty | Last Updated : Nov 1, 2024, 07:41 PM IST
    • ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಯ ಕೊನೆಯ ಪಂದ್ಯ
    • ಇಶಾಂತ್ ಶರ್ಮಾ ಮತ್ತು ಜಹೀರ್ ಖಾನ್ ಅವರ ದಾಖಲೆಯನ್ನು ಮುರಿದು ವಿಶೇಷ ಕ್ಲಬ್‌ಗೆ ಸೇರಿಕೊಂಡಿದ್ದಾರೆ
    • ಈ ಇನ್ನಿಂಗ್ಸ್‌ನ ಮೊದಲ 11 ಓವರ್‌ಗಳಲ್ಲಿ ಜಡೇಜಾ ಯಶಸ್ವಿಯಾಗಲಿಲ್ಲ
W,W,W,W,W... 5 ವಿಕೆಟ್‌ ಕಬಳಿಸಿ ಟೆಸ್ಟ್‌ನಲ್ಲಿ ಚರಿತ್ರೆ ಸೃಷ್ಟಿಸಿದ ಜಡೇಜಾ! ಒಂದೇ ಪಂದ್ಯದಲ್ಲಿ ಇಬ್ಬರು ದಿಗ್ಗಜರ ದಾಖಲೆ ಮುರಿದೇಬಿಟ್ರು ಸ್ಟಾರ್‌ ಆಲ್‌ರೌಂಡರ್‌ title=
File Photo

Ravindra Jadeja Milestone: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಯ ಕೊನೆಯ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡ ಮೊದಲ ದಿನವೇ 235 ರನ್‌ಗಳಿಗೆ ಕುಸಿದಿತ್ತು. ಇದರಲ್ಲಿ ರವೀಂದ್ರ ಜಡೇಜಾ ಪ್ರಮುಖ ಕೊಡುಗೆಯನ್ನು ನೀಡಿದ್ದರು. ಐದು ವಿಕೆಟ್ ಕಬಳಿಸುವ ಮೂಲಕ ಇಶಾಂತ್ ಶರ್ಮಾ ಮತ್ತು ಜಹೀರ್ ಖಾನ್ ಅವರ ದಾಖಲೆಯನ್ನು ಮುರಿದು ವಿಶೇಷ ಕ್ಲಬ್‌ಗೆ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: 2025ರ ಐಪಿಎಲ್‌​ಗೆ ವಿರಾಟ್​ ಕೊಹ್ಲಿಯೇ ನಾಯಕ: ಆರ್‌ಸಿಬಿ ಮ್ಯಾನೇಜ್‌​ಮೆಂಟ್​ ಹೇಳಿದ್ದು ಹೀಗೆ...

ಈ ಇನ್ನಿಂಗ್ಸ್‌ನ ಮೊದಲ 11 ಓವರ್‌ಗಳಲ್ಲಿ ಜಡೇಜಾ ಯಶಸ್ವಿಯಾಗಲಿಲ್ಲ, ಆದರೆ 12 ನೇ ಓವರ್‌ನಲ್ಲಿ, ಈ ಸ್ಟಾರ್ ಒಬ್ಬರ ನಂತರ ಒಬ್ಬರಂತೆ ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್‌ ದಾರಿ ತೋರಿಸಿದ್ದರು. ಈ ಮೂಲಕ ಅವರು ತಮ್ಮ 22 ಓವರ್‌ಗಳ ಸ್ಪೆಲ್‌ನಲ್ಲಿ 65 ರನ್‌ಗಳಿಗೆ 5 ವಿಕೆಟ್ ಪಡೆದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜಾ ಅವರ 14ನೇ 5 ವಿಕೆಟ್ ಸಾಧನೆಯಾಗಿದೆ.

ಇಶಾಂತ್-ಜಹೀರ್ ದಾಖಲೆ ಬ್ರೇಕ್:
ಮೂರನೇ ವಿಕೆಟ್ ಪಡೆಯುವ ಮೂಲಕ ಜಡೇಜಾ ಭಾರತ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಇಶಾಂತ್ ಶರ್ಮಾ ಮತ್ತು ಜಹೀರ್ ಖಾನ್ ದಾಖಲೆಯನ್ನು ಮುರಿದಿದ್ದಾರೆ. ಇಶಾಂತ್ ಶರ್ಮಾ ಮತ್ತು ಜಹೀರ್ ಖಾನ್ ಇಬ್ಬರೂ ಟೆಸ್ಟ್ ನಲ್ಲಿ 311 ವಿಕೆಟ್ ಪಡೆದಿದ್ದಾರೆ. ಜಡೇಜಾ ಈಗ 314 ಟೆಸ್ಟ್ ವಿಕೆಟ್‌ಗಳನ್ನು ಹೊಂದಿದ್ದಾರೆ. ಇದಲ್ಲದೇ ಜಡೇಜಾ ಕೂಡ ಟಾಪ್-5 ಕ್ಲಬ್ ಪ್ರವೇಶಿಸಿದ್ದಾರೆ. ಭಾರತ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಐದನೇ ಬೌಲರ್ ಎನಿಸಿಕೊಂಡಿದ್ದಾರೆ.

ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳು

  • ಅನಿಲ್ ಕುಂಬ್ಳೆ - 619
  • ರವಿಚಂದ್ರನ್ ಅಶ್ವಿನ್ - 533
  • ಕಪಿಲ್ ದೇವ್ - 434
  • ಹರ್ಭಜನ್ ಸಿಂಗ್ - 417
  • ರವೀಂದ್ರ ಜಡೇಜಾ - 414

ಇದನ್ನೂ ಓದಿ: ಕಾಲಿನ ಸ್ಪರ್ಶ ಜ್ಞಾನ, ಬೆನ್ನು ಹುರಿ..! ಅಸಲಿಗೆ ದರ್ಶನ್‌ ಆರೋಗ್ಯ ಸ್ಥಿತಿ ಹೇಗಿದೆ ಗೊತ್ತೆ..?

ಪ್ರಸಕ್ತ ಸರಣಿಯಲ್ಲೂ ಜಡೇಜಾ ಅದ್ಭುತ ಸಾಧನೆ ಮಾಡಿದ್ದಾರೆ. 3000 ರನ್ ಮತ್ತು 300 ವಿಕೆಟ್‌ಗಳ ಸಾಧನೆ ಮಾಡಿದ ಮೂರನೇ ಭಾರತೀಯ ಆಟಗಾರರಾಗಿದ್ದಾರೆ. ಈ ಹಿಂದೆ ಕಪಿಲ್ ದೇವ್ ಮತ್ತು ರವಿಚಂದ್ರನ್ ಅಶ್ವಿನ್ ಈ ಸಾಧನೆ ಮಾಡಿದ್ದರು. ಇಂಗ್ಲೆಂಡ್‌ನ ಇಯಾನ್ ಬೋಥಮ್ ನಂತರ ಈ ಸಾಧನೆ ಮಾಡಿದ ಎರಡನೇ ಅತಿ ವೇಗದ ಆಟಗಾರ ಜಡೇಜಾ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News