400 ವಿಕೆಟ್, 6000 ರನ್... ಸ್ಟಾರ್‌ ಆಲ್‌ರೌಂಡರ್‌ ʼಭಯಂಕರʼ ಆಟಕ್ಕೆ ಸೃಷ್ಟಿಯಾಗೇಬಿಡ್ತು ಇತಿಹಾಸ... ಜಡೇಜಾ, ಪಾಂಡ್ಯ ಕೂಡ ಮಾಡಿರದ ಸರ್ವಶ್ರೇಷ್ಠ ದಾಖಲೆ

jalaj saxena: ಜಲಜ್ ಸಕ್ಸೇನಾ ಬುಧವಾರ ಉತ್ತರ ಪ್ರದೇಶ ವಿರುದ್ಧ ಕೇರಳದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ರಣಜಿ ಟ್ರೋಫಿಯಲ್ಲಿ 6000 ರನ್ ಮತ್ತು 400 ವಿಕೆಟ್‌ಗಳನ್ನು ಪೂರೈಸಿದ್ದಾರೆ.  

Written by - Bhavishya Shetty | Last Updated : Nov 6, 2024, 04:35 PM IST
    • ಕ್ರಿಕೆಟ್‌ನಲ್ಲಿ ಬರೆಯಲ್ಪಡುವ ಕೆಲವೊಂದು ದಾಖಲೆಗಳು ಜಗತ್ತನ್ನು ಬೆರಗುಗೊಳಿಸುತ್ತವೆ
    • ಜಲಜ್ ಸಕ್ಸೇನಾ ಇಂತಹದೊಂದು ಸಾಧನೆ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ
    • ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕೂಡ ಇದನ್ನು ಮಾಡಲು ಸಾಧ್ಯವಾಗಿರಲಿಲ್ಲ
400 ವಿಕೆಟ್, 6000 ರನ್... ಸ್ಟಾರ್‌ ಆಲ್‌ರೌಂಡರ್‌ ʼಭಯಂಕರʼ ಆಟಕ್ಕೆ ಸೃಷ್ಟಿಯಾಗೇಬಿಡ್ತು ಇತಿಹಾಸ... ಜಡೇಜಾ, ಪಾಂಡ್ಯ ಕೂಡ ಮಾಡಿರದ ಸರ್ವಶ್ರೇಷ್ಠ ದಾಖಲೆ title=
Jalaj Saxena Record Ranji Trophy

Jalaj Saxena Record Ranji Trophy: ಕ್ರಿಕೆಟ್‌ನಲ್ಲಿ ಬರೆಯಲ್ಪಡುವ ಕೆಲವೊಂದು ದಾಖಲೆಗಳು ಜಗತ್ತನ್ನು ಬೆರಗುಗೊಳಿಸುತ್ತವೆ. ಇದೀಗ ಭಾರತದ ದೇಶಿ ಕ್ರಿಕೆಟ್ ನಲ್ಲಿ ಅನುಭವಿ ಆಲ್ ರೌಂಡರ್ ಜಲಜ್ ಸಕ್ಸೇನಾ ಇಂತಹದೊಂದು ಸಾಧನೆ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇಲ್ಲಿಯವರೆಗೆ, ಭಾರತದ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕೂಡ ಇದನ್ನು ಮಾಡಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: ಶೀಘ್ರವೇ ಮಾರುಕಟ್ಟೆಗೆ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಮೊಬೈಲ್ ಪೈ ಲಗ್ಗೆ: ಮೊಬೈಲ್ ಮಾರುಕಟ್ಟೆಯಲ್ಲಿ ಆಗುತ್ತಾ ಕಮಾಲ್?

ಜಲಜ್ ಸಕ್ಸೇನಾ ಬುಧವಾರ ಉತ್ತರ ಪ್ರದೇಶ ವಿರುದ್ಧ ಕೇರಳದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ರಣಜಿ ಟ್ರೋಫಿಯಲ್ಲಿ 6000 ರನ್ ಮತ್ತು 400 ವಿಕೆಟ್‌ಗಳನ್ನು ಪೂರೈಸಿದ್ದಾರೆ.

ಕೊನೆಯ ಸುತ್ತಿನಲ್ಲಿ ಕೋಲ್ಕತ್ತಾದಲ್ಲಿ 6000 ರನ್ ಪೂರೈಸಿದ ಸಕ್ಸೇನಾ, ಯುಪಿ ವಿರುದ್ಧ ನಾಲ್ಕನೇ ವಿಕೆಟ್ ಪಡೆಯುವ ಮೂಲಕ 400 ನೇ ರಣಜಿ ಟ್ರೋಫಿ ವಿಕೆಟ್‌ನ ಮೈಲಿಗಲ್ಲು ಸಾಧಿಸಿದರು.

37 ವರ್ಷ ವಯಸ್ಸಿನ ಸಕ್ಸೇನಾ ರಣಜಿ ಟ್ರೋಫಿ ಇತಿಹಾಸದಲ್ಲಿ 400 ವಿಕೆಟ್‌ಗಳನ್ನು ಪಡೆದ 13 ನೇ ಬೌಲರ್ ಮತ್ತು ಈ ಸಾಧನೆ ಮಾಡಿದ ಏಕೈಕ ಸಕ್ರಿಯ ಕ್ರಿಕೆಟಿಗ. ಸಕ್ಸೇನಾ 2005 ರಲ್ಲಿ ಮಧ್ಯಪ್ರದೇಶದೊಂದಿಗೆ ತಮ್ಮ ಪ್ರಥಮ ದರ್ಜೆ ವೃತ್ತಿಜೀವನವನ್ನು ಪ್ರಾರಂಭಿಸಿದರು. ಹಲವು ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿರುವ ಜಲಜ್ ಕಳೆದ ಋತುವಿನಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ 9000 ರನ್ ಹಾಗೂ 600 ವಿಕೆಟ್ ಪಡೆದ ನಾಲ್ಕನೇ ಆಟಗಾರ ಎನಿಸಿಕೊಂಡರು.

ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್
637 - ರಾಜಿಂದರ್ ಗೋಯಲ್
530 - ಎಸ್ ವೆಂಕಟರಾಘವನ್
479 - ಸುನಿಲ್ ಜೋಶಿ
442 - ಆರ್ ವಿನಯ್ ಕುಮಾರ್
441 - ನರೇಂದ್ರ ಹಿರ್ವಾನಿ
437 - ಭಾಗವತ್ ಚಂದ್ರಶೇಖರ್
418 - ವಿ.ವಿ.ಕುಮಾರ್
416 - ಶಹಬಾಜ್ ನದೀಮ್
409 - ಪಂಕಜ್ ಸಿಂಗ್
405 - ಸಾಯಿರಾಜ್ ಬಹುತುಲೆ
403 - ಬಿಶನ್ ಸಿಂಗ್ ಬೇಡಿ
401 - ಉತ್ಪಲ್ ಚಟರ್ಜಿ
400* -ಜಲಜ್ ಸಕ್ಸೇನಾ

ಇದನ್ನೂ ಓದಿ: ಇನ್ಮುಂದೆ ನಾನು ಕ್ರಿಕೆಟ್‌ ಆಡೋದೇ ಇಲ್ಲಾ ಅಂತಾ ಹೋಗಿದ್ದ ಈ ಆಟಗಾರ... 10 ವರ್ಷಗಳ ನಂತ್ರ ಐಪಿಎಲ್‌

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News