ಒಂದು ಲೋಟ ನೀರಿಗೆ ಈ ಪುಡಿಯನ್ನು ಮಿಕ್ಸ್‌ ಮಾಡಿ ಕುಡಿಯಿರು.. ಬೊಜ್ಜು ಕರಗಿ ನಿಮ್ಮ ಹೊಟ್ಟೆ ಫ್ಲಾಟ್‌ ಆಗುತ್ತದೆ..!

Asafoetida For Belly Fat: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ಆಹಾರ ಪದ್ಧತಿ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಆಹಾರ ಪದ್ಧತಿಯಿಂದಾಗಿ ಜನರು ಅಧಿಕ ತೂಕ ಮತ್ತು ಹೊಟ್ಟೆಯ ಕೊಬ್ಬಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
 

1 /12

Asafoetida For Belly Fat: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ಆಹಾರ ಪದ್ಧತಿ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಆಹಾರ ಪದ್ಧತಿಯಿಂದಾಗಿ ಜನರು ಅಧಿಕ ತೂಕ ಮತ್ತು ಹೊಟ್ಟೆಯ ಕೊಬ್ಬಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.  

2 /12

ಹೊಟ್ಟೆಯ ಕೊಬ್ಬು ಎಂದರೆ ಹೊಟ್ಟೆಯ ಸುತ್ತ ಕೊಬ್ಬಿನ ಶೇಖರಣೆ. ಇದರಿಂದ ಹೊಟ್ಟೆಯು ದುಂಡಾಗಿ ಕಾಣುತ್ತದೆ. ಇದರಿಂದಾಗಿ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡಲು ವ್ಯಾಯಾಮ ಮತ್ತು ಆಹಾರ ಕ್ರಮವನ್ನು ಅನುಸರಿಸುತ್ತಿದ್ದಾರೆ.  

3 /12

ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಸಾಕಾಗುವುದಿಲ್ಲ. ದೇಹದ ಒಟ್ಟು ಕೊಬ್ಬನ್ನು ಕಡಿಮೆ ಮಾಡಿ. ವ್ಯಾಯಾಮದ ಜೊತೆಗೆ, ಕೆಲವು ಮನೆ ಸಲಹೆಗಳನ್ನು ಸಹ ಅನುಸರಿಸಬೇಕು.  

4 /12

ದೇಹದ ಕೊಬ್ಬನ್ನು ತೊಡೆದುಹಾಕಿ. ನೈಸರ್ಗಿಕವಾಗಿ ದೇಹದ ಕೊಬ್ಬನ್ನು ಕಳೆದುಕೊಳ್ಳಲು ಬಯಸುವವರಿಗೆ ಯಾವುದೇ ವ್ಯಯಾಮ ಅಥವಾ ಡಯಟ್‌ ಬೇಕಾಗಿಲ್ಲ. ಕೇವಲ ಈ  ಪಪುಡಿಯನ್ನು ಬೆರೆಸಿದ ನೀರನ್ನು ಕುಡಿಯುವುದರಿಂದ ನೀವು, ನಿಮ್ಮ ಹೊಟ್ಟೆಯ ಕೊಬ್ಬನ್ನು ಕೆಲವೇ ದಿನಗಳಲ್ಲಿ ಕರಗಿಸಬಹುದು.   

5 /12

ಭಾರತೀಯ ಪಾಕಪದ್ಧತಿಯಲ್ಲಿ ಪರಿಮಳವನ್ನು ಹೆಚ್ಚಿಸಲು ಇಂಗುವನ್ನು ಸಾಮಾನ್ಯವಾಗಿ ಎಲ್ಲಾ ಅಡುಗೆಗಳಲ್ಲು ಬಳಸಲಾಗುತ್ತದೆ. ಅದರಲ್ಲೂ ಸಾಂಬಾರ್ ಗೆ ಇಂಗು ಹಾಕಿದರೆ ಅದರ ರುಚಿಯೇ ಬೇರೆ.  

6 /12

ಅಂತಹ ಇಂಗುದಿಂದ ನೀವು ತೂಕವನ್ನು ಕಳೆದುಕೊಳ್ಳಬಹುದು. ಹೊಟ್ಟೆಯ ಕೊಬ್ಬು ಮತ್ತು ಸೊಂಟದ ಗಾತ್ರವು ಏಕಕಾಲದಲ್ಲಿ ಕಡಿಮೆಯಾಗುತ್ತದೆ ಎನ್ನುತ್ತವೆ ಸಂಶೋಧನೆಗಳು.   

7 /12

ಇಂಗುವನ್ನು ಸಾಮಾನ್ಯವಾಗಿ ಭಕ್ಷ್ಯಗಳ ಸುವಾಸನೆ ಹೆಚ್ಚಿಸಲು ಬಳಸಲಾಗುತ್ತದೆ. ಇಂಗುವನ್ನು ಪ್ರತಿದಿನ ಸೇವಿಸುವುದರಿಂದ ಚಯಾಪಚಯವು ಸುಧಾರಿಸುತ್ತದೆ. ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಅದ್ಭುತ ಔಷಧವಾಗಿದೆ.  

8 /12

ಇಂಗು ಅಧಿಕ ತೂಕದ ಜನರಿಗೆ ಬಹಳ ಪರಿಣಾಮಕಾರಿ. ಇದು ಹಸಿವನ್ನು ನಿಯಂತ್ರಿಸಿ, ಅತಿಯಾಗಿ ತಿನ್ನುವ  ಬಯಕೆಯನ್ನು ಕಡಿಮೆ ಮಾಡುತ್ತದೆ.   

9 /12

ಇಂಗು ಸೇವಿಸುವುದರಿಂದ ದೇಹದಲ್ಲಿರುವ ಕೊಳೆ ಜೊತೆಗೆ ಕೊಬ್ಬು ಕಡಿಮೆಯಾಗುತ್ತದೆ. ದಿನನಿತ್ಯದ ವ್ಯಾಯಾಮದ ಜೊತೆಗೆ ಇಂಗುವನ್ನು ಬೆರಸಿದ ನೀರನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬು ಕರಗಿ ಹೋಗುತ್ತದೆ.   

10 /12

ಒಂದು ಲೋಟ ನೀರನ್ನು ಪಾತ್ರೆಯಲ್ಲಿ ಸುರಿದು ಚೆನ್ನಾಗಿ ಕುದಿಯಲು ಇಡಿ. ಈ ನೀರಿಗೆ ಒಂದು ಚಿಟಿಕೆ ಇಂಗು ಪುಡಿಯನ್ನು ಸೇರಿಸಿ, ಇದಕ್ಕೆ ಬ್ಲಾಕ್‌ ಸಾಲ್ಟ್‌ ಹಾಕಿ ನೀರನ್ನು ಸೋಸಿಕೊಂಡು ನಿಂಬೆ ರಸವನ್ನು ಬೆರಸಿ ಸೇವಿಸಿ.  

11 /12

ಈ ರೀತಿ ಖಾಲಿ ಹೊಟ್ಟೆಯಲ್ಲಿ ವಾರಕ್ಕೆ ಮೂರು ಭಾರಿ ಈ ನೀರನ್ನು ಕುಡಿಯುವುದರಿಂದ ನೀವು ಉತ್ತಮ ಫಲಿತಾಂಶವನ್ನು ಕಾಣಬಹುದು. ನಿಮಗೆ ಇನ್ನೂ ರುಚಿಯಾಗಿ ಎನಿಸಬEಕು ಎಂದುಕೊಂಡರೆ, ಇದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸಹ ಸೇರಿಸಿಕೊಳ್ಳಬಹುದು.   

12 /12

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.