ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನೀತಿ ಆಯೋಗದ ಎಲ್ಲಾ ನೌಕರರನ್ನು ಹೊರಗೆ ಕರೆದು ಕಟ್ಟಡವನ್ನು ಮೊಹರು ಮಾಡಲಾಗಿದೆ.
ನವದೆಹಲಿ: ಕೊರೊನಾವೈರಸ್ ದೇಶದಲ್ಲಿ ಕೋಲಾಹಲ ಸೃಷ್ಟಿಸಿದೆ. ಪ್ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ ಮತ್ತು ಸುಪ್ರೀಂ ಕೋರ್ಟ್ ನಂತರ ಈಗ ನೀತಿ ಆಯೋಗ (NITI Aayog) ಮೇಲೂ ಕರೋನಾದ ಕರಿನೆರಳು ಬಿದ್ದಿದೆ. ಇಂದು ನೀತಿ ಆಯೋಗದ ಉದ್ಯೋಗಿ ಒಬ್ಬರಲ್ಲಿ ಕರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಕಟ್ಟಡವನ್ನು ಸೀಲ್ಡೌನ್ ಮಾಡಲಾಗಿದೆ.
ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನೀತಿ ಆಯೋಗದ ಎಲ್ಲಾ ನೌಕರರನ್ನು ಹೊರಗೆ ಕರೆದು ಕಟ್ಟಡವನ್ನು ಮೊಹರು ಮಾಡಲಾಗಿದೆ. ಇದಕ್ಕೂ ಮುನ್ನ ಸೋಮವಾರ covid -19 ರ ಮೊದಲ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಕಾಣಿಸಿಕೊಂಡಿತ್ತು. ಸುಪ್ರೀಂ ಕೋರ್ಟ್ (Supreme Court)ನ ಉದ್ಯೋಗಿಯೊಬ್ಬರಲ್ಲಿ ಕರೋನಾ ದೃಢಪಟ್ಟಿತ್ತು. ಕರೋನಾ ಸೋಂಕಿಗೆ ಒಳಗಾದ ಉದ್ಯೋಗಿ ಏಪ್ರಿಲ್ 16ರಂದು ನ್ಯಾಯಾಲಯಕ್ಕೆ ಬಂದಿದ್ದರು. ಈಗ ಈ ಉದ್ಯೋಗಿಯೊಂದಿಗೆ ಸಂಪರ್ಕಕ್ಕೆ ಬಂದಿರುವ ಜನರನ್ನು ಪತ್ತೆಹಚ್ಚಲಾಗುತ್ತಿದೆ. ಇದಲ್ಲದೆ ಸುಪ್ರೀಂ ಕೋರ್ಟ್ನ 2 ರಿಜಿಸ್ಟ್ರಾರ್ಗಳನ್ನು ಏಪ್ರಿಲ್ 30ರವರೆಗೆ ನಿರ್ಬಂಧಿಸಲಾಗಿದೆ.