ಕೇವಲ 45 ನಿಮಿಷಗಳಲ್ಲಿ ಅಗ್ಗದ ಸಾಲ ನೀಡಲಿದೆ SBI 6 ತಿಂಗಳವರೆಗೆ EMI ಬಗ್ಗೆ ಚಿಂತಿಸಬೇಕಿಲ್ಲ

ಈ ಸಮಯದಲ್ಲಿ, ನಿಮಗೆ ಹಣದ ಅಗತ್ಯವಿದ್ದರೆ, ನೀವು ಸ್ವಲ್ಪವೂ ಚಿಂತಿಸಬೇಕಾಗಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗಾಗಿ ತುರ್ತು ಸಾಲವನ್ನು ತಂದಿದೆ.  

Last Updated : May 2, 2020, 07:17 AM IST
ಕೇವಲ 45 ನಿಮಿಷಗಳಲ್ಲಿ ಅಗ್ಗದ ಸಾಲ ನೀಡಲಿದೆ SBI 6 ತಿಂಗಳವರೆಗೆ  EMI ಬಗ್ಗೆ ಚಿಂತಿಸಬೇಕಿಲ್ಲ title=

ನವದೆಹಲಿ : ಈ ಸಮಯದಲ್ಲಿ ನಿಮಗೆ ಹಣದ ಅಗತ್ಯವಿದ್ದರೆ ನೀವು ಅದಕ್ಕಾಗಿ ಚಿಂತಿಸಬೇಕಿಲ್ಲ. ಕಾರಣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಮಗಾಗಿ ತುರ್ತು ಸಾಲ ಸೌಲಭ್ಯ ನೀಡುತ್ತಿದ್ದು ಈ ಸಾಲವನ್ನು ತೆಗೆದುಕೊಳ್ಳಲು ನೀವು ಬ್ಯಾಂಕಿಗೆ ಹೋಗಬೇಕಾಗಿಲ್ಲ. ನೀವು ಈ ಸಾಲವನ್ನು ಮನೆಯಿಂದಲೇ ಪಡೆಯುತ್ತೀರಿ. ಈ ಸಾಲದ ವಿಶೇಷವೆಂದರೆ ಇದಕ್ಕಾಗಿ ನೀವು ಹಲವಾರು ದಿನಗಳವರೆಗೆ ಕಾಯಬೇಕಾಗಿಲ್ಲ. ಈ ಸಾಲವು ಕೇವಲ 45 ನಿಮಿಷಗಳಲ್ಲಿ ನಿಮ್ಮ ಖಾತೆಗೆ ಬರುತ್ತದೆ. 

6 ತಿಂಗಳ ಇಎಂಐ ನೀಡುವ ಅಗತ್ಯವಿಲ್ಲ :
ಲಾಕ್ ಡೌನ್ ದೃಷ್ಟಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಸಾಲ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ತುರ್ತು ಸಾಲವು ಎಸ್‌ಬಿಐ ಗ್ರಾಹಕರಿಗೆ ಮಾತ್ರ. ಸಾಲ ತೆಗೆದುಕೊಳ್ಳುವ ಗ್ರಾಹಕರಿಗೆ 6 ತಿಂಗಳವರೆಗೆ ಕಂತುಗಳನ್ನು (EMI) ನೀಡುವ ಅಗತ್ಯವಿಲ್ಲ ಎಂದು ಬ್ಯಾಂಕ್ ಹೇಳಿದೆ. ಅಂದರೆ ನೀವು ಮೇ ತಿಂಗಳಲ್ಲಿ ಎಸ್‌ಬಿಐನಿಂದ ತುರ್ತು ಸಾಲವನ್ನು ತೆಗೆದುಕೊಂಡರೆ ಅಕ್ಟೋಬರ್ ವರೆಗೆ ಇಎಂಐ ಪಾವತಿಸುವ ಅಗತ್ಯವಿಲ್ಲ. ನಿಮ್ಮ ಇಎಂಐ ಆರು ತಿಂಗಳ ನಂತರ ಮಾತ್ರ ಪ್ರಾರಂಭವಾಗುತ್ತದೆ.

ಈ ಸಾಲಕ್ಕೆ ಪಾವತಿಸಬೇಕಾದ ಬಡ್ಡಿ?
ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಈ ಸಾಲ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ವೈಯಕ್ತಿಕ ಸಾಲಕ್ಕಾಗಿ ಗ್ರಾಹಕರು ಶೇಕಡಾ 10.50 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ದಿನದ 24 ಗಂಟೆಗಳು ವಾರದ ಏಳು ದಿನಗಳು ಈ ಸಾಲಕ್ಕಾಗಿ ಅರ್ಜಿ ಹಾಕಬಹುದು.

ಲೋನ್ ಎಷ್ಟು ಸಿಗಲಿದೆ?

  • ವೈಯಕ್ತಿಕ ಸಾಲ: ಎರಡು ಲಕ್ಷ ರೂಪಾಯಿಗಳವರೆಗೆ
  • ಪಿಂಚಣಿ ಸಾಲ: ಎರಡೂವರೆ ಲಕ್ಷ ರೂಪಾಯಿ ವರೆಗೆ
  • ಸೇವಾ ವರ್ಗ: ಐದು ಲಕ್ಷ ರೂಪಾಯಿಗಳವರೆಗೆ

ಸಾಲಕ್ಕಾಗಿ ಈ ರೀತಿ ಅಪ್ಲೈ ಮಾಡಿ:
ಈ ಸಾಲಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸಬೇಕು. ಆ ಸುಲಭ ಹಂತಗಳನ್ನು  ನಾವು ನಿಮಗೆ ತಿಳಿಸುತ್ತೇವೆ.

  • ಗ್ರಾಹಕರು ಮೊದಲು PAPL <ಖಾತೆ ಸಂಖ್ಯೆಯ ಕೊನೆಯ 4 ಅಂಕಿಗಳನ್ನು> ತಮ್ಮ ನೋಂದಾಯಿತ ಸಂಖ್ಯೆಯಿಂದ 567676 ಗೆ ಕಳುಹಿಸಬೇಕು
  • ನೀವು ಸಾಲ ತೆಗೆದುಕೊಳ್ಳಲು ಅರ್ಹರಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನಿಮಗೆ ಬ್ಯಾಂಕಿನ ಸಂದೇಶದ ಮೂಲಕ ತಿಳಿಸಲಾಗುತ್ತದೆ.
  • ಅರ್ಹ ಗ್ರಾಹಕರು ನಾಲ್ಕು ಪ್ರಕ್ರಿಯೆಗಳಲ್ಲಿ ಸಾಲ ಪಡೆಯುತ್ತಾರೆ
  • ಇದಕ್ಕಾಗಿ ಬ್ಯಾಂಕ್ ವತಿಯಿಂದ ನಿಮಗೆ ಸಂದೇಶ ಬಂದ ನಂತರ, ಎಸ್‌ಬಿಐ ಅಪ್ಲಿಕೇಶನ್‌ನಲ್ಲಿ ಅವೈಲ್ ನೌ (Avail Now) ಕ್ಲಿಕ್ ಮಾಡಿ.
  • ಇದರ ನಂತರ ಸಾಲದ ಸಮಯ ಮತ್ತು ಮೊತ್ತವನ್ನು ಆಯ್ಕೆ ಮಾಡಿ.
  • ಇದರ ನಂತರ ನೋಂದಾಯಿತ ಸಂಖ್ಯೆಯಲ್ಲಿ ಒಟಿಪಿ ಬರುತ್ತದೆ. ನೀವು ಒಟಿಪಿ ನಮೂದಿಸಿದ ಕೂಡಲೇ ಹಣ ನಿಮ್ಮ ಖಾತೆಗೆ ಬರುತ್ತದೆ.
     

Trending News