ಚಾಮರಾಜನಗರ: ಒಂದೆಡೆ ಬಂಡೀಪುರ- ವೈನಾಡು ನಡುವೆ ರಾತ್ರಿ ಸಂಚಾರಕ್ಕೆ ಅವಕಾಶ ಕೊಡಿಸುತ್ತೇನೆ ಎಂದು ನೂತನ ಸಂಸದೆ ಪ್ರಿಯಾಂಕಾ ಗಾಂಧಿ ಭರವಸೆ ಕೊಡುವ ಜೊತೆಗೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.
ಬಂಡೀಪುರ- ವೈನಾಡು ರಸ್ತೆಯಲ್ಲಿ ಪುಂಡರು ಹಗಲಲ್ಲೇ ಆನೆ ಮರಿಗೆ ಕೀಟಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸೇರಿದಂತೆ ಹಲವರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
ಬಂಡೀಪುರ- ವೈನಾಡು ರಸ್ತೆಯಲ್ಲಿ ಆನೆ ಮರಿಯೊಂದಕ್ಕೆ ಬೈಕ್ ಸವಾರರು ಕೇವಲ ವೀಡಿಯೋ ಮಾಡುವ ಹುಚ್ಚಿನಿಂದ ನಡು ರಸ್ತೆಯಲ್ಲಿ ಹುಚ್ಚಾಟ ಮೆರೆದಿದ್ದಾರೆ. ಆನೆಗೆ ಕೀಟಲೆ ಮಾಡಿ ಅದು ಗಾಬರಿ ಹುಟ್ಟಿಸಿ ಅಟ್ಟಿಸಿಕೊಂಡು ಬರುವಂತೆ ಮಾಡಿದ್ದಾರೆ.
ಹಗಲಲ್ಲೇ ಆನೆ ಮರಿಗೆ ಕೀಟಲೆ ಮಾಡಿದ ಕಿಡಿಗೇಡಿಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಡಿ.ವಿ.ಸದಾನಂದಗೌಡ ವೀಡಿಯೋ ಪೋಸ್ಟ್ ಮಾಡಿ ಬಂಡೀಪುರ- ವೈನಾಡು ನಡುವೆ ಯಾವುದೇ ಕಾರಣಕ್ಕೂ ರಾತ್ರಿ ಸಂಚಾರಕ್ಕೆ ಅವಕಾಶ ಕೊಡಬಾರದು, ವನ್ಯಜೀವಿಗಳಿಗೆ ಅಪಾಯ ತರಲಿದೆ ಎಂದು ಒತ್ತಾಯಿಸಿದ್ದಾರೆ.
Shocking behaviour by bikers disturbing a baby elephant on Bandipur road shows why protecting wildlife is crucial. Yet, @INCKarnataka govt plans to open this road at night, endangering animals further. Bandipur's rich biodiversity deserves better care, not reckless policies. https://t.co/CtERBYXjJR
— Sadananda Gowda (@DVSadanandGowda) December 2, 2024
ಇದನ್ನೂ ಓದಿ- Viral Video: ಪರಸ್ತ್ರೀ ಜೊತೆಗೆ ಸಿಕ್ಕಿಬಿದ್ದ ವ್ಯಕ್ತಿಯನ್ನು ಭೀಕರವಾಗಿ ಹೊಡೆದು ಕೊಂದರು, ವಿಡಿಯೋ ನೋಡಿ
ವೀಡಿಯೋ ಹುಚ್ಚಿಗೆ ಆನೆ ಮರಿಗೆ ಕೀಟಲೆ, ಗಾಬರಿಯಾಗುವಂತೆ ಮಾಡಿರುವ ಪುಂಡರ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದು ಸಹಸ್ರಾರು ಮಂದಿ ರಾತ್ರಿ ಸಂಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಗಲಲ್ಲೇ ಈ ಪರಿ ಪ್ರಾಣಿಗಳಿಗೆ ತೊಂದರೆ ಕೊಟ್ಟರೇ ಇನ್ನು ರಾತ್ರಿ ಸಂಚಾರ ಆರಂಭಗೊಂಡರೇ ಮಿತಿ ಏನು??? ಎಂದು ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಕೊಡಬೇಕು ಎಂಬ ಸಂಸದೆ ಪ್ರಿಯಾಂಕಾ ಗಾಂಧಿ ಒತ್ತಾಯದ ಬೆನ್ನಲ್ಲೇ ಪುಂಡರ ವೀಡಿಯೋ ವೈರಲ್ಲಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.