ಇಸ್ಲಾಮಾಬಾದ್: ದೊಡ್ಡ ಭರವಸೆಗಳೊಂದಿಗೆ ಇಮ್ರಾನ್ ಖಾನ್ (Imran Khan) ಪಾಕಿಸ್ತಾನದ ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೆ ಬಂದರು. ಆದರೆ ದುರದೃಷ್ಟವಶಾತ್ ಇಮ್ರಾನ್ ಖಾನ್ ಪಾಕಿಸ್ತಾನದ ಆಡಳಿತವನ್ನು ವಹಿಸಿಕೊಂಡಾಗಿನಿಂದ ದೇಶದಲ್ಲಿ ದಿನೇ ದಿನೇ ಸಂಕಷ್ಟಗಳು ಹೆಚ್ಚಾಗುತ್ತಲೇ ಇವೆ. ಇವುಗಳನ್ನು ಸರಿಪಡಿಸುವಲ್ಲಿ ಪಾಕಿಸ್ತಾನ ವಿಫಲವಾಗುತ್ತಲೇ ಇದೆ.ಇಮ್ರಾನ್ ಖಾನ್ ಅವರ ಖುರ್ಚಿಅಪಾಯದಲ್ಲಿದೆ. ದೇಶದ ಆರ್ಥಿಕತೆಯು ಹಾಳಾಗಿದೆ ಮತ್ತು ಈಗ ಪಾಕಿಸ್ತಾನದ ಪರಮಾಣು ಬಾಂಬ್ ಸಹ ಬೆದರಿಕೆಯನ್ನು ಹೊಂದಿದೆ ಎಂದು ವಿವರಿಸಲಾಗುತ್ತಿದೆ. ಒಂದಲ್ಲ, ಎರಡಲ್ಲ ಐದು ವಿಷಯಗಳಿಗೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಬೆಚ್ಚಿ ಬೀಳುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿ ಇಡೀ ಪ್ರಪಂಚವನ್ನೇ ಕಾಡುತ್ತಿರುವ ಮಹಾಮಾರಿ ಕರೋನಾವೈರಸ್ ಪಾಕಿಸ್ತಾನ ಪ್ರಧಾನಮಂತ್ರಿಗೆ ದುಃಸ್ವಪ್ನವಾಗಿ ಕಾಡತೊಡಗಿದೆ. ಎಚ್ಚರವಾಗಿರುವಾಗ ಯಾವಾಗಲೂ ಅವರನ್ನು ಪ್ರಕ್ಷುಬ್ಧವಾಗಿಡುವ ಕನಸು. ಕರೋನಾವನ್ನು ನಿಭಾಯಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಇಮ್ರಾನ್ ಖಾನ್ ಭಯಭೀತರಾಗಿದ್ದಾರೆ.
ಇಮ್ರಾನ್ ಖಾನ್ ನಿದ್ದೆಗೆಡಿಸಿರುವ 5 ವಿಷಯಗಳಿವು:
- ಕರೋನಾ
- ಆರ್ಥಿಕ ಕುಸಿತ
- ಭಾರತದ ದಾಳಿ
- ಪರಮಾಣು ಶಕ್ತಿ ಕಸಿದುಕೊಳ್ಳುವ ಭಯ
- ಬಜ್ವಾ ದಂಗೆ
ಪಾಕಿಸ್ತಾನ (Pakistan)ದಲ್ಲಿ ಕರೋನಾದಿಂದ ಸೋಂಕುಗಳು ಮತ್ತು ಸಾವುಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಲಾಕ್ ಡೌನ್ ಹಿಂಪಡೆಯುವ ಇಮ್ರಾನ್ ನಿರ್ಧಾರದ ನಂತರ ಕರೋನಾ ಸೋಂಕು ಅತ್ಯಂತ ಅಪಾಯಕಾರಿಯಾಗಿದೆ. ಪಾಕಿಸ್ತಾನದಲ್ಲಿ ಈ ಮೊದಲೇ ಆರ್ಥಿಕತೆ ಕುಸಿದಿತ್ತು ಆದರೆ ಪ್ರಸ್ತುತ ಪರಿಸ್ಥಿತಿಯಿಂದಾಗಿ ಆರ್ಥಿಕತೆ ಈಗ ಸಂಪೂರ್ಣವಾಗಿ ಮುಳುಗುವ ಹಂತ ತಲುಪಿದೆ. ಭಾರತದಲ್ಲಿ ಭಯೋತ್ಪಾದಕ ದಾಳಿಯ ನಂತರ ಇಮ್ರಾನ್ ಖಾನ್ ಭಾರತದ ದೊಡ್ಡ ದಾಳಿಯ ಭಯದಲ್ಲಿದ್ದಾರೆ. ಕರೋನಾ ಯುಗದಲ್ಲಿ ದೇಶದ ಪರಮಾಣು ಬಾಂಬ್ ಕಸಿದುಕೊಳ್ಳಲಾಗುವುದು ಎಂದು ಇಮ್ರಾನ್ ಅವರ ಮಾಜಿ ಪಾಲುದಾರ ಜಾವೇದ್ ಮಿಯಾಂದಾದ್ ಆತಂಕ ವ್ಯಕ್ತಪಡಿಸಿದ್ದಾರೆ. ಸೈನ್ಯವು ಇಮ್ರಾನ್ ಖಾನ್ ಅವರನ್ನು ಅಧಿಕಾರದಿಂದ ಹೊರಹಾಕಬಹುದು ಎಂಬ ಭಯವೂ ಅವರನ್ನು ಬೆಂಬಿಡದೆ ಕಾಡುತ್ತಿದೆ.
ಕರೋನಾ ಪಾಕಿಸ್ತಾನಕ್ಕೆ ದೊಡ್ಡ ಸಮಸ್ಯೆ ಎಂದು ಸಾಬೀತಾಗಿದೆ. ಇದರೊಂದಿಗೆಭಯೋತ್ಪಾದಕ ದಾಳಿಯಿಂದ ಕೋಪಗೊಂಡ ಭಾರತವು ಬಾಲಕೋಟ್ ರೀತಿ ದೊಡ್ಡ ಸೇಡು ತೀರಿಸಿಕೊಳ್ಳಬಹುದೇನೋ ಎಂಬ ಬಗ್ಗೆ ಇಮ್ರಾನ್ ಖಾನ್ ಭಯಭೀತರಾಗಿದ್ದಾರೆ. ಏತನ್ಮಧ್ಯೆ 1998 ರಲ್ಲಿ ನಡೆದ ಪೋಖ್ರಾನ್ ಪರೀಕ್ಷೆಯು ಪ್ರಬಲ ರಾಜಕೀಯ ನಾಯಕತ್ವವು ಮಾಡಬಹುದಾದ ವ್ಯತ್ಯಾಸವನ್ನು ತೋರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪೋಖ್ರಾನ್ನಲ್ಲಿ ನಡೆದ ಪರಮಾಣು ಪರೀಕ್ಷೆಯನ್ನು ನೆನಪಿಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಇಮ್ರಾನ್ ಖಾನ್ ಅವರ ಚಿಂತೆಗಳನ್ನು ಹೆಚ್ಚಿಸಿರಬಹುದು.
ಪಾಕಿಸ್ತಾನಕ್ಕೆ ಪ್ರವೇಶಿಸಲು ಮತ್ತು ಪಾಠ ಕಲಿಸಲು ಸಿದ್ಧವಾಗಿರುವ ಭಾರತದ ಈ ನಾಯಕತ್ವದಿಂದ ಇಮ್ರಾನ್ ಖಾನ್ಗೆ ದೊಡ್ಡ ಬೆದರಿಕೆ. ಕೇವಲ ಇಮ್ರಾನ್ ಖಾನ್ ಅವರಿಗೆ ಮಾತ್ರವಲ್ಲ ಇಡೀ ಪಾಕಿಸ್ತಾನವೇ ನ್ಯೂ ಇಂಡಿಯಾ ಬಗ್ಗೆ ಹೆದರುತ್ತದೆ. ಇದಕ್ಕೆ ಮುಖ್ಯ ಕಾರಣ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಮತ್ತು ಹಿಜ್ಬುಲ್ ಕಮಾಂಡರ್ ರಿಯಾಜ್ ನಾಯ್ಕುನನ್ನು ಹತ್ಯೆ ಮಾಡಿದ ನಂತರ ಭಾರತ ಪಾಕಿಸ್ತಾನದಲ್ಲಿ ದೊಡ್ಡ ದಾಳಿ ನಡೆಸದಿರುವಂತೆ ಕಟ್ಟೆಚ್ಚರ ವಹಿಸಿರುವ ಪಾಕ್ ಸೇನೆ ಆಕಾಶದಲ್ಲಿ ಗಸ್ತು ಹೆಚ್ಚಿಸಿದೆ.
ಆದರೆ ಪಾಕಿಸ್ತಾನವು ಕೇವಲ ಭಾರತದ ದಾಳಿಗಾಗಿ ಹೆದರುತ್ತಿರಲಿಲ್ಲ. ಬದಲಿಗೆ ಯಾವ ಪರಮಾಣು ಶಕ್ತಿಯ ಬೆಂಬಲದಿಂದ ಪಾಕ್ ಇಷ್ಟು ಮೆರೆಯುತ್ತಿದೆಯೋ ಅದನ್ನು ತನ್ನಿಂದ ಕಸಿದುಕೊಳ್ಳಬಹುದು ಎಂಬ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅವರ ಹೇಳಿಕೆಯಿಂದ ಈ ಭಯ ಹೆಚ್ಚಾಗಿದೆ.
ಈ ಕುರಿತಂತೆ ಶನಿವಾರ ವಿಡಿಯೋ ಟ್ವೀಟ್ ಒಂದನ್ನು ಶೇರ್ ಮಾಡಿರುವ ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್, ದೇಶದ ಮೇಲೆ ಹೆಚ್ಚುತ್ತಿರುವ ಸಾಲದಿಂದಾಗಿ ಅವರ ಪರಮಾಣು ಶಸ್ತ್ರಾಸ್ತ್ರಗಳು ಅಪಾಯದಲ್ಲಿದೆ. ಐಎಂಎಫ್ನಂತಹ ಸಂಸ್ಥೆಗಳ ಸಾಲವನ್ನು ಪಾಕಿಸ್ತಾನ ಮರುಪಾವತಿಸದಿದ್ದರೆ, ಅವರು ನಮ್ಮ ಆಟಮ್ ಬಾಂಬ್ ಅನ್ನು ತೆಗೆದುಕೊಳ್ಳುತ್ತಾರೆ ಮಿಯಾಂದಾದ್
ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ನ್ಯಾಷನಲ್ ಬ್ಯಾಂಕ್ ಆಫ್ ಪಾಕಿಸ್ತಾನದಲ್ಲಿ ಖಾತೆ ತೆರೆದಿದ್ದೇನೆ. ನಮ್ಮ ಆಟಮ್ ಬಾಂಬ್ ಅನ್ನು ಉಳಿಸಲು ಹಣವನ್ನು ಅದರಲ್ಲಿ ಠೇವಣಿ ಇಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ ಎಂದಿರುವ ಅಷ್ಟೇ ಅಲ್ಲ ಈ ಸಾಲಗಳನ್ನು ಮರುಪಾವತಿಸಲು ಮಿಯಾಂದಾದ್ ಬ್ಯಾಂಕ್ ಖಾತೆ ತೆರೆದು ಅದರಲ್ಲಿ ಹಣವನ್ನು ಠೇವಣಿ ಇಡಬೇಕೆಂದು ಜನರಿಗೆ ಮನವಿ ಮಾಡಿದ್ದಾರೆ. ಈ ದೇಶದ ಜನರು ತಮ್ಮ ದೇಶವನ್ನು ಬಹಳಷ್ಟು ಲೂಟಿ ಮಾಡಿದ್ದಾರೆ ಎಂದು ನನಗೆ ತಿಳಿದಿದೆ. ತಮ್ಮ ಪಾಪಗಳನ್ನು ಸರಿಮಾಡಿಕೊಳ್ಳುವ ಒಂದು ಅವಕಾಶ ಎಲ್ಲರ ಮುಂದಿದೆ. ತ್ಯಾಗ ಮಾಡುವ ಸಮಯ ಬಂದಿದೆ. ವಿದೇಶದಲ್ಲಿ ವಾಸಿಸುವ ಪಾಕಿಸ್ತಾನಿಗಳು ಸಹ ಕರ್ತವ್ಯ ನಿರ್ವಹಿಸಬೇಕು ಎಂದವರು ಮನವಿ ಮಾಡಿದ್ದಾರೆ.
ಮಿಯಾಂದಾದ್ ಅವರ ಈ ವಿಡಿಯೋದಿಂದ ಇಮ್ರಾನ್ ಖಾನ್ ತನ್ನ ಮತ್ತು ತನ್ನ ದೇಶದ ಜನರ ಭಯವನ್ನು ಹೋಗಲಾಡಿಸಲು ಬೇರೆ ಯಾವುದೇ ದಾರಿಯಿಲ್ಲ ಎಂಬುದು ಸ್ಪಷ್ಟವಾಗಿದೆ.