ಹೊಸ ವರ್ಷಕ್ಕೆ ರಿಲಯನ್ಸ್ ಜಿಯೋದಿಂದ ಹೊಸ ರೀಚಾರ್ಜ್ ಪ್ಲಾನ್: ಏನೆಲ್ಲಾ ಸೌಲಭ್ಯ ಇದೆ ಗೊತ್ತಾ?

Reliance Jio New Year Plan: ರಿಲಯನ್ಸ್ ಜಿಯೋ ಹೊಸ ವರ್ಷಕ್ಕೆ ಹೊಸ ಪ್ಲಾನ್ ಪ್ರಾರಂಭಿಸುತ್ತಿದೆ. 2,025 ರುಪಾಯಿಯ ಈ ಪ್ಲಾನಿನಲ್ಲಿ 200 ದಿನ ಅನ್ಲಿಮಿಟೆಡ್ 5G ಡೇಟಾ ಬಳಸಬಹುದು. ಅಷ್ಟೇ ಅಲ್ಲ, ಹೊಸ ವರ್ಷದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿರುವ ಈ ಯೋಜನೆಯಲ್ಲಿ ಇನ್ನೂ ಸಾಕಷ್ಟು ಸೌಲಭ್ಯಗಳು ಲಭ್ಯವಿವೆ.   

Written by - Yashaswini V | Last Updated : Dec 16, 2024, 10:19 AM IST
  • ರಿಲಯನ್ಸ್ ಜಿಯೋ ಹೊಸ ವರ್ಷಕ್ಕೆ ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ ಬಂಪರ್ ಆಫರ್ ಒಂದನ್ನು ಬಿಡುಗಡೆ ಮಾಡಿದೆ.
  • ಈ ಹೊಸ ಯೋಜನೆಯನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ 2.5GB ದೈನಂದಿನ ಡೇಟಾ ಯೋಜನೆಯ ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ.
  • ಇದನ್ನು ಸೀಮಿತ ಸಮಯದ ಕೊಡುಗೆಯಲ್ಲಿ ಟ್ಯಾಗ್ ಮಾಡಲಾಗಿದೆ. ಅಂದರೆ ಈ ಆಫರ್ ಜನವರಿ 11 ರವರೆಗೆ ಮಾತ್ರ.
ಹೊಸ ವರ್ಷಕ್ಕೆ ರಿಲಯನ್ಸ್ ಜಿಯೋದಿಂದ ಹೊಸ ರೀಚಾರ್ಜ್ ಪ್ಲಾನ್: ಏನೆಲ್ಲಾ ಸೌಲಭ್ಯ ಇದೆ ಗೊತ್ತಾ? title=

Reliance Jio New Year Plan: ರಿಲಯನ್ಸ್ ಜಿಯೋ ಹೊಸ ವರ್ಷಕ್ಕೆ ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ ಬಂಪರ್ ಆಫರ್ ಒಂದನ್ನು ಬಿಡುಗಡೆ ಮಾಡಿದೆ. ಈ ಹೊಸ ಯೋಜನೆಯನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ 2.5GB ದೈನಂದಿನ ಡೇಟಾ ಯೋಜನೆಯ ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ. ಇದನ್ನು ಸೀಮಿತ ಸಮಯದ ಕೊಡುಗೆಯಲ್ಲಿ ಟ್ಯಾಗ್ ಮಾಡಲಾಗಿದೆ. ನೆನಪಿಡಿ ಈ ವಿಶೇಷ ಕೊಡುಗೆಯನ್ನು 2025ರ ಜನವರಿ 11ರವರೆಗೆ ಮಾತ್ರ ಪಡೆಯಲು ಸಾಧ್ಯ. 
 
ಜಿಯೋ 2,025 ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು: 
ಜಿಯೋ 2,025 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರು ಒಟ್ಟು 200 ದಿನಗಳವರೆಗೆ ಪ್ರತಿನಿತ್ಯ 2.5GB ಡೇಟಾ ಎಂದರೆ ಒಟ್ಟು 500GB ಡೇಟಾ ಪಡೆಯಲಿದ್ದಾರೆ. ದೈನಂದಿನ ಮಿತಿಯ ನಂತರವೂ ನಿಮಗೆ ಡೇಟಾ ಸಿಗುತ್ತದೆ. ಆದರೆ ಡೇಟಾ ವೇಗವು 64kbsp ಗೆ ಕಡಿಮೆಯಾಗುತ್ತದೆ. ಹೊಸ ವರ್ಷದ ಹೊಸ ಪ್ಲಾನ್ ನಲ್ಲಿ ಅನ್ಲಿಮಿಟೆಡ್ ವಾಯ್ಸ್ ಕಾಲ್, ಪ್ರತಿ ದಿನ 100 SMS ಉಚಿತವಾಗಿ ಸಿಗುತ್ತದೆ. ಇದಲ್ಲದೆ, ಈ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಗ್ರಾಹಕರಿಗೆ JioTV, JioCinema ಮತ್ತು JioCloudಗೆ ಉಚಿತ ಪ್ರವೇಶ ಸಿಗುತ್ತದೆ.  

ಇದನ್ನೂ ಓದಿ- ಏರ್‌ಟೆಲ್ ನಿಂದ ಹೊಸ ಪ್ಲಾನ್ ಬಿಡುಗಡೆ; ಹೊಸ ವರ್ಷಕ್ಕೆ ಸಿಕ್ತು ಬೊಂಬಾಟ್ ಉಡುಗೊರೆ

ಇದಲ್ಲದೆ Ajio ನಲ್ಲಿ 2,999 ರೂಪಾಯಿ ಮೌಲ್ಯದ ಆರ್ಡರ್‌ ಮಾಡಿದರೆ 500 ರೂಪಾಯಿ ಮೌಲ್ಯದ ಕೂಪನ್‌ ಉಚಿತವಾಗಿ ಸಿಗುತ್ತದೆ. ಉತ್ಪನ್ನವನ್ನು ಖರೀದಿಸಲು ಕಂಪನಿಯ ಸೈಟ್‌ನಲ್ಲಿ ಇರುವ ಲಿಂಕ್ ಕ್ಲಿಕ್ ಮಾಡಬೇಕು. ಜೊತೆಗೆ ಗ್ರಾಹಕರು EaseMyTrip.com ನಲ್ಲಿ ಫ್ಲೈಟ್‌ ಟಿಕೆಟ್ ಬುಕ್ ಮಾಡುವಾಗ 1,500 ರೂಪಾಯಿವರೆಗೆ ರಿಯಾಯಿತಿ ಪಡೆಯಬಹುದು. ಸ್ವಿಗ್ಗಿಯಲ್ಲಿ  499 ರೂಪಾಯಿ ಮೌಲ್ಯದ ಖರೀದಿ ಮಾಡಿದರೆ 150 ರೂಪಾಯಿ ರಿಯಾಯಿತಿ ಲಭ್ಯವಿರುತ್ತದೆ.

ಇದನ್ನೂ ಓದಿ- Google Top Trending Search: 2024ರಲ್ಲಿ ಜನ ಗೂಗಲ್‌ನಲ್ಲಿ ಹೆಚ್ಚಾಗಿ ಸರ್ಚ್ ಮಾಡಿದ್ದು ಏನನ್ನ ಗೊತ್ತಾ?

ಜಿಯೋ ವಾರ್ಷಿಕ ರಿಚಾರ್ಜ್ ಪ್ಲಾನ್: 
ಜಿಯೋ 3,599 ರೂ.ಗಳ ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ಕೂಡ ಬಿಡುಗಡೆ ಮಾಡಿದೆ. 365 ದಿನಗಳ ವ್ಯಾಲಿಡಿಟಿಯೊಂದಿಗೆ ಪರಿಚಯಿಸಲಾಗಿರುವ ಈ ಯೋಜನೆಯಲ್ಲಿ ಪ್ರತಿದಿನ 2.5GB ಡೇಟಾ ಎಂದರೆ ಇದರಲ್ಲಿ ಗ್ರಾಹಕರು ಒಟ್ಟು 912.5GB ಡೇಟಾವನ್ನು ಪಡೆಯಬಹುದಾಗಿದೆ. ಇದಲ್ಲದೆ,  ಪ್ರತಿದಿನ 100 SMS ಮತ್ತು ಅನಿಯಮಿತ ಧ್ವನಿ ಕರೆ ಮಾಡಬಹುದಾಗಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News