ಒಡೆದೋಯ್ತು ಮನಸ್ಸು ... ಫ್ಯಾನ್ಸ್‌ ಕಣ್ಣೀರು! ಕ್ರಿಕೆಟ್‌ ಜಗತ್ತಿಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ 7 ದಿಗ್ಗಜ ಆಟಗಾರರು... ʼಭಾರತೀಯ ಕ್ರಿಕೆಟ್‌ ಯುಗಾಂತ್ಯʼ

Indian Cricketers Retirement in 2024: 2024ರ ವರ್ಷ ಕ್ರಿಕೆಟ್‌ ಲೋಕಕ್ಕೆ ಕಹಿಯೆಂದರೆ ತಪ್ಪಾಗಲ್ಲ. ಭಾರತದ ದಿಗ್ಗಜರು ನಿವೃತ್ತಿ ಘೋಷಿಸಿದ್ದು ಅದೆಷ್ಟೋ ಅಭಿಮಾನಿಗಳ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ. ಇತ್ತೀಚೆಗೆಯಷ್ಟೇ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬ್ರಿಸ್ಬೇನ್ ಟೆಸ್ಟ್ ಫಲಿತಾಂಶದ ನಂತರ ಎಲ್ಲಾ ಮೂರು ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದರು. ಅಂತೆಯೇ ಈ ವರ್ಷ ಕ್ರಿಕೆಟ್ ಗೆ ವಿದಾಯ ಹೇಳಿದ ಭಾರತೀಯ ಕ್ರಿಕೆಟಿಗರ ಬಗ್ಗೆ ತಿಳಿಯೋಣ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

 2024ರ ವರ್ಷ ಕ್ರಿಕೆಟ್‌ ಲೋಕಕ್ಕೆ ಕಹಿಯೆಂದರೆ ತಪ್ಪಾಗಲ್ಲ. ಭಾರತದ ದಿಗ್ಗಜರು ನಿವೃತ್ತಿ ಘೋಷಿಸಿದ್ದು ಅದೆಷ್ಟೋ ಅಭಿಮಾನಿಗಳ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ. ಇತ್ತೀಚೆಗೆಯಷ್ಟೇ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬ್ರಿಸ್ಬೇನ್ ಟೆಸ್ಟ್ ಫಲಿತಾಂಶದ ನಂತರ ಎಲ್ಲಾ ಮೂರು ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದರು. ಅಂತೆಯೇ ಈ ವರ್ಷ ಕ್ರಿಕೆಟ್ ಗೆ ವಿದಾಯ ಹೇಳಿದ ಭಾರತೀಯ ಕ್ರಿಕೆಟಿಗರ ಬಗ್ಗೆ ತಿಳಿಯೋಣ.

2 /7

ರವಿಚಂದ್ರನ್ ಅಶ್ವಿನ್ ತಮ್ಮ ವೃತ್ತಿ ಜೀವನದಲ್ಲಿ 106 ಟೆಸ್ಟ್ ಪಂದ್ಯಗಳಲ್ಲಿ 537 ವಿಕೆಟ್ ಪಡೆದಿದ್ದಾರೆ. 116 ODI ಪಂದ್ಯಗಳಲ್ಲಿ 156 ವಿಕೆಟ್‌ಗಳನ್ನು ಪಡೆದ ಅವರು,  ಭಾರತದ ಶ್ರೇಷ್ಠ ಟೆಸ್ಟ್ ಸ್ಪಿನ್ನರ್ ಆಗಿ ತಮ್ಮ ವೃತ್ತಿಜೀವನವನ್ನು ಮುಗಿಸಿದ್ದಾರೆ.  

3 /7

ಇವರಲ್ಲದೆ, ಈ ವರ್ಷ ಭಾರತದ ಎಡಗೈ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಕೂಡ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಧವನ್ ಭಾರತದ ಅದ್ಭುತ ಎಡಗೈ ಓಪನರ್ ಆಗಿದ್ದರು. ಇನ್ನು ನಿವೃತ್ತಿಯಾಗುವ ಮೊದಲು, ಧವನ್ ದೀರ್ಘಕಾಲದವರೆಗೆ ತಂಡದಿಂದ ಹೊರಗುಳಿದಿದ್ದರು.  

4 /7

ಭಾರತ ಮತ್ತು ಬಂಗಾಳದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಈ ವರ್ಷ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ರಿಷಬ್ ಪಂತ್ ಗಾಯಗೊಂಡ ನಂತರ, ಸಹಾ ಭಾರತದ ಮುಂಚೂಣಿಯ ವಿಕೆಟ್ ಕೀಪರ್ ಪಾತ್ರವನ್ನು ನಿರ್ವಹಿಸಿದ್ದರು. ಆದರೆ, ಪಂತ್ ಹಿಂತಿರುಗಿದ ನಂತರ, ಸಹಾ ವೃತ್ತಿಜೀವನವು ಅಂತ್ಯದತ್ತ ಮುಖ ಮಾಡಿತ್ತು.  

5 /7

2024ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ ಮತ್ತೊಬ್ಬ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್. ಇದರೊಂದಿಗೆ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೂ ಆಟಗಾರನಾಗಿ ವಿದಾಯ ಹೇಳಿದ್ದಾರೆ.  

6 /7

ಭಾರತದ ಬ್ಯಾಟಿಂಗ್ ಲೆಜೆಂಡ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಟಿ 20 ವಿಶ್ವಕಪ್ ಗೆದ್ದ ನಂತರ ಕ್ರಿಕೆಟ್‌ನ ಕಡಿಮೆ ಸ್ವರೂಪದಿಂದ ನಿರ್ಗಮಿಸುವುದಾಗಿ ಘೋಷಿಸಿದ್ದರು. ಕಳೆದ ಒಂದು-ಎರಡು ವರ್ಷಗಳಿಂದ ಟಿ20 ಕ್ರಿಕೆಟ್‌ನಲ್ಲಿ ಈ ಆಟಗಾರರ ಉಪಸ್ಥಿತಿ ತೀರಾ ಕಡಿಮೆಯಾಗಿತ್ತು. ಇಬ್ಬರೂ ವಿಶ್ವಕಪ್‌ನಲ್ಲಿ ತಮ್ಮ ಕೊನೆಯ T20 ಅಂತರಾಷ್ಟ್ರೀಯ ಪ್ರದರ್ಶನವನ್ನು ನೀಡಿದ್ದರು.  

7 /7

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತೆ, ರವೀಂದ್ರ ಜಡೇಜಾ ಕೂಡ ಟಿ 20 ವಿಶ್ವಕಪ್ ನಂತರ ತಮ್ಮ ಟಿ 20 ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದರು. ಜಡೇಜಾ ಈ ಮಾದರಿಯಲ್ಲಿ ಅತ್ಯುತ್ತಮ ಆಲ್ ರೌಂಡರ್ ಪಾತ್ರವನ್ನು ನಿರ್ವಹಿಸುತ್ತಿದ್ದರು. ಪ್ರಮುಖ ಹೆಸರುಗಳ ಹೊರತಾಗಿ, ಭಾರತದ ಸೌರಭ್ ತಿವಾರಿ ಕೂಡ ಈ ವರ್ಷ ನಿವೃತ್ತಿ ಘೋಷಿಸಿದ್ದಾರೆ. ವೇಗದ ಬೌಲರ್ ವರುಣ್ ಆರೋನ್ ಕೂಡ ನಿವೃತ್ತಿಯಾಗಿದ್ದಾರೆ.