Rashmika Mandanna on Allu arjun : ನಟಿ ರಶ್ಮಿಕಾ ಮಂದಣ್ಣ ಅವರು ಪುಷ್ಪ 2 ದಿ ರೂಲ್ ಚಿತ್ರೀಕರಣದ ವೇಳೆ ತಮಗಾದ ಅನುಭವವನ್ನು ತೆರೆದಿಟ್ಟಿದ್ದಾರೆ. ಇದೀಗ ನಟಿಯ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ಅಸಲಿಗೆ ಕಿರಿಕ್ ಬೆಡಗಿ ಹೇಳಿರುವ ಆ ಮಾತಾದ್ರು ಏನು..? ಇಲ್ಲಿ ಇಂಟ್ರಸ್ಟಿಂಗ್ ಸ್ಟೋರಿ..
ಪುಷ್ಪ 2 ರ ಮೊದಲ ಭಾಗದಲ್ಲಿ ನಟಿ ಸಮಂತಾ ಅವರ ಡ್ಯಾನ್ಸ್ ಸೂಪರ್ ಹಿಟ್ ಆಗಿದ್ದು, ಎರಡನೇ ಭಾಗದಲ್ಲಿ ಅಲ್ಲು ಅರ್ಜುನ್-ರಶ್ಮಿಕಾ ಅಭಿನಯದ "ಪಿಲಿಂಗ್ಸ್" ಹಾಡಿಗೆ ಅಭಿಮಾನಿಗಳಿಂದ ಫಿದಾ ಆಗಿದ್ದಾರೆ.. ಇದೀಗ ಈ ಹಾಡಿನ ಶೂಟಿಂಗ್ ವೇಳೆ ನಡೆದ ಘಟನೆ ಕುರಿತು ರಶ್ಮಿಕಾ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
ಹೌದು.. 2016 ರಲ್ಲಿ ತೆರೆಕಂಡ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ ನಟಿ ಇದೀಗ ನ್ಯಾಷುನಲ್ ಕ್ರಶ್ ಅಂತ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಹೆಸರುವಾಸಿದ್ದಾರೆ.. ಅಲ್ಲದೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ..
ಕನ್ನಡ ಸಿನಿಮಾಗಳಿಂದ ದೂರವಿರುವ ನಟಿ ರಶ್ಮಿಕಾ ಸಧ್ಯ ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ವರ್ಷ 2021 ರಲ್ಲಿ ತಮಿಳಿನಲ್ಲಿ ಬಿಡುಗಡೆಯಾದ ಕಾರ್ತಿ ಅವರ ಸುಲ್ತಾನ್ ಚಿತ್ರದ ಮೂಲಕ ಕಾಲಿವುಡ್ಗೆ ಕಾಲಿಟ್ಟರು.
ತೆಲುಗು ಸಿನಿಮಾ ಗೀತ ಗೋವಿಂದಂ ಮೂಲಕ ಸೌತ್ ಸಿನಿರಂಗದಲ್ಲಿ ಮುನ್ನೆಲೆಗೆ ಬಂದಳು.. ಈ ಸಿನಿಮಾದಲ್ಲಿ ವಿಜಯ ದೇವರಕೊಂಡ ಜೊತೆ ನಟಿಸಿದ್ದಾರೆ.. ಈ ಸಿನಿಮಾ ರಶ್ಮಿಕಾಗೆ ಒಳ್ಳೆಯ ಹೆಸರು ತಂದು ಕೊಟ್ಟಿತು. ಪ್ರಸ್ತುತ ಅವರು ಸಲ್ಮಾನ್ ಖಾನ್ ಜೊತೆ 'ಜಾವಾ' ಮತ್ತು 'ಶಿಕಂದರ್' ಸೇರಿದಂತೆ ಕೆಲವು ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಅಷ್ಟೇ ಅಲ್ಲದೆ, ಮತ್ತೆ ನಟ ವಿಜಯ್ ದೇವರಕೊಂಡ ಜೊತೆ ಮುಂಬರುವ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಸುದ್ದಿಯಾಗಿದೆ. ಸದ್ಯ ನಟಿ ರಶ್ಮಿಕಾ ಮಂದನಾ ಅವರ ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ 2' ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.
ನಿರ್ದೇಶಕ ಸುಕುಮಾರನ್ ನಿರ್ದೇಶನದ ಪುಷ್ಪಾ ಮೊದಲ ಭಾಗವು 2021 ರಲ್ಲಿ ಬಿಡುಗಡೆಯಾಯಿತು. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು. ಈ ಸಿನಿಮಾ ಅಲ್ಲು ಅರ್ಜುನ್ಗೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟಿತು.
ಪ್ಯಾನ್ ಚಿತ್ರ ಇಂಡಿಯಾ ಮಟ್ಟದಲ್ಲಿ ಸೂಪರ್ ಹಿಟ್ ಆಯಿತು. ಇದರ ಬೆನ್ನಲ್ಲೇ ಇದೀಗ ಎರಡನೇ ಭಾಗ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೀಗಿರುವಾಗ ನಟಿ ರಶ್ಮಿಕಾ ಮಂದಣ್ಣ ಈ ಚಿತ್ರದ ಶೂಟಿಂಗ್ ವೇಳೆ ತಮಗಾದ ಅನುಭವಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಪುಷ್ಪ 2 ಚಿತ್ರದ ಪೀಲಿಂಗ್ಸ್ ಹಾಡಿನ ಶೂಟಿಂಗ್ ವೇಳೆ, ನನಗೆ ಅನಾನುಕೂಲವಾಗಿತ್ತು ಎಂದು ನಟಿ ಹೇಳಿದ್ದಾರೆ. ಅದರಲ್ಲಿ ಯಾರಾದರೂ ನನ್ನನ್ನು ಎತ್ತಿಕೊಂಡು ಹೋದರೆ ನನಗೆ ಭಯವಾಗುತ್ತಿತ್ತು. ಅಲ್ಲು ಅರ್ಜುನ್ ಅವರು ನನ್ನನ್ನು ಎತ್ತಿ ಬಾಟಲಿಯೊಂದಿಗೆ ಡ್ಯಾನ್ಸ್ ಮಾಡಿದಾಗ ಮೊದಲಿಗೆ ಭಯವಾಗಿತ್ತು ಅಂತ ರಶ್ಮಿಕಾ ತಿಳಿಸಿದ್ದಾರೆ..