ಡಾ. ಮನಮೋಹನ್ ಸಿಂಗ್ ಅವರನ್ನು ಹಾಡಿ ಹೊಗಳಿದ್ದ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ!

Barack Obama praised Dr Manmohan Singh : ಭಾರತದ ಮಾಜಿ ಪ್ರಧಾನಿ ಮತ್ತು ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರ ವ್ಯಕ್ತಿತ್ವ, ಕೊಡುಗೆ, ಜ್ಞಾನಗಳನ್ನು ಜಾಗತಿಕ ವೇದಿಕೆಯಲ್ಲಿ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತುಂಬು ಹೃದಯದಿಂದ ಶ್ಲಾಘಿಸಿದ್ದರು. 

Written by - Yashaswini V | Last Updated : Dec 27, 2024, 07:17 AM IST
  • ಬರಾಕ್ ಒಬಾಮಾ ತಮ್ಮ ಆತ್ಮಚರಿತ್ರೆಯಲ್ಲಿ ಡಾ. ಮನಮೋಹನ್ ಸಿಂಗ್ ಅವರ ಬಗ್ಗೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
  • ಪ್ರಪಂಚವನ್ನೇ ಪೆಡಂಭೂತವಾಗಿ ಕಾಡುತ್ತಿದ್ದ ಆರ್ಥಿಕ ಹಿಂಜರಿತ ಭಾರತವನ್ನು ಬಾಧಿಸದಂತೆ ನೋಡಿಕೊಂಡ ಶ್ರೇಷ್ಠ ನಾಯಕ ಎಂದು ಸ್ಮರಿಸಿದ್ದಾರೆ.
  • ಇಡೀ ಆತ್ಮಕಥೆಯಲ್ಲಿ ಡಾ. ಮನಮೋಹನ್ ಸಿಂಗ್ ಅವರನ್ನು ಬಿಟ್ಟರೆ ಉಳಿದವರಾರ ಬಗೆಗೂ ಅವರು ಅಷ್ಟಾಗಿ ಬರೆದಿಲ್ಲ.
ಡಾ. ಮನಮೋಹನ್ ಸಿಂಗ್ ಅವರನ್ನು ಹಾಡಿ ಹೊಗಳಿದ್ದ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ! title=

Barack Obama praised Dr Manmohan Singh :  ಬರಾಕ್ ಒಬಾಮಾ ತಾವು ಅಮೆರಿಕಾದ ಅಧ್ಯಕ್ಷರಾಗಿದ್ದ ಕಾಲದ ಘಟನೆಗಳನ್ನು ಆಧರಿಸಿ ಬರೆದಿರುವ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ನಲ್ಲಿ ಡಾ. ಮನಮೋಹನ್ ಸಿಂಗ್ ಅವರ ಬಗ್ಗೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಳಿ ಗಡ್ಡ ಮತ್ತು ಪೇಟ ಡಾ. ಮನಮೋಹನ್ ಸಿಂಗ್ ಅವರ ಸಿಖ್ ನಂಬಿಕೆಯ ಹೆಗ್ಗುರುತುಗಳಾಗಿದ್ದವಾದರೂ ಪಾಶ್ಚಿಮಾತ್ಯರ ಕಣ್ಣುಗಳ ಪಾಲಿಗೆ ಸ್ವತಃ ಅವರೇ ಪವಿತ್ರ ಎಂದು ಪರಿಭಾವಿಸಬಹುದಾದ ವ್ಯಕ್ತಿಯಾಗಿದ್ದರು ಎಂದು ಬರೆದಿದ್ದಾರೆ.

ಆತ್ಮಚರಿತ್ರೆಯಲ್ಲಿ ಭಾರತ ಪ್ರವಾಸದ ಬಗ್ಗೆ ದಾಖಲಿಸಿರುವ ಬರಾಕ್ ಒಬಾಮಾ ಅವರು ಡಾ. ಮನಮೋಹನ್ ಸಿಂಗ್ ಅವರನ್ನು ಅಸಾಮಾನ್ಯ ಬುದ್ದಿವಂತಿಕೆ ಹೊಂದಿದ್ದ ನಾಯಕ ಎಂದು ಬಣ್ಣಿಸಿದ್ದಾರೆ. ಮೃಧು ಮಾತಿನ ಅರ್ಥಶಾಸ್ತ್ರಜ್ಞ ಎಂದು ಕರೆದಿದ್ದಾರೆ. ಪ್ರಪಂಚವನ್ನೇ ಪೆಡಂಭೂತವಾಗಿ ಕಾಡುತ್ತಿದ್ದ ಆರ್ಥಿಕ ಹಿಂಜರಿತ ಭಾರತವನ್ನು ಬಾಧಿಸದಂತೆ ನೋಡಿಕೊಂಡ ಶ್ರೇಷ್ಠ ನಾಯಕ ಎಂದು ಸ್ಮರಿಸಿಕೊಂಡಿದ್ದಾರೆ. 

ಇದನ್ನೂ ಓದಿ- ಡಾ. ಮನಮೋಹನ್ ಸಿಂಗ್ 2 ಬಾರಿ ಪ್ರಧಾನಿಯಾದರೂ, ಹುಟ್ಟೂರಿಗೆ ಹೋಗಬೇಕೆನಿಸಿದರೂ ಇದೊಂದು ಕಾರಣಕ್ಕೆ ಹೋಗಲೇ ಇಲ್ಲ…!

ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರಜ್ಞರಾದ ಡಾ. ಮನಮೋಹನ್ ಸಿಂಗ್ ಅವರೊಂದಿಗೆ ಬೆರೆಯುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ. ಅವರು ಅತ್ಯಂತ ಬುದ್ದಿವಂತರು, ಚಿಂತನಾಶೀಲರು, ಅಪರಿಮಿತವಾದ ಪ್ರಾಮಾಣಿಕರು. ಭಾರತದ ಆರ್ಥಿಕತೆಯ ಜೊತೆಗೆ ಜಗತ್ತಿನ ಆರ್ಥಿಕತೆಗೆ ಹೊಸ ದಿಕ್ಕು ತೋರಿಸಿಕೊಟ್ಟವರು ಎಂದು ಒಬಾಮಾ ಬರೆದಿದ್ದಾರೆ. ಇಡೀ ಆತ್ಮಕಥೆಯಲ್ಲಿ ಡಾ. ಮನಮೋಹನ್ ಸಿಂಗ್ ಅವರನ್ನು ಬಿಟ್ಟರೆ ಉಳಿದವರಾರ ಬಗೆಗೂ ಅವರು ಅಷ್ಟಾಗಿ ಬರೆದಿಲ್ಲ.

ಇದನ್ನೂ ಓದಿ- "ಭಾರತದ ಆಧುನಿಕ ಆರ್ಥಿಕತೆಯ ಶಿಲ್ಪಿ" ಡಾ. ಮನಮೋಹನ್ ಸಿಂಗ್‌..! 

ಡಾ. ಮನಮೋಹನ್ ಸಿಂಗ್ ಮತ್ತು ಅವರ ಪತ್ನಿ ಗುರುಶರಣ್ ಕೌರ್ ದೆಹಲಿಯ ನಿವಾಸದಲ್ಲಿ ನನಗೆ ಮತ್ತು ಪತ್ನಿ ಮಿಚೆಲ್‌ಗೆ ಕ್ಯಾಂಡಲ್ ಲೈಟ್ ಡಿನ್ನರ್ ಗೆ ಆಹ್ವಾನಿಸಿದ್ದರು. ಊಟಕ್ಕೆ ಹೋಗುವ ಮುನ್ನ ನನ್ನ ಭುಜದ ಮೇಲೆ ಕೈಯಿಟ್ಟು ಹಲವು ವಿಷಯಗಳನ್ನು ಮಾತನಾಡಿದರು. ಜಗತ್ತಿನ ಅರ್ಥವ್ಯವಸ್ಥೆ ಅವನತಿಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಆಕಾಶ ನೋಡಿ ಮೋಡಗಳ ಬಗ್ಗೆ ಮಾತನಾಡಿ ಹಗುರವಾದರು. ಅವು ನನ್ನ ಪಾಲಿಗೆ ಅಪೂರ್ವ ಗಳಿಗೆಗಳು ಎಂದು ಒಬಾಮಾ ಬರೆದುಕೊಂಡಿದ್ದಾರೆ.

 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News