ಟಾಸ್ಕ್‌ನಲ್ಲಿ ಗೆದ್ದರೂ Bigg Boss "ಫಿನಾಲೆ ಟಿಕೆಟ್" ಬೇಡ ಎಂದ ಸ್ಪರ್ಧಿ..! ಅದೃಷ್ಟವನ್ನು ಕಾಲಿನಿಂದ ಒದ್ದಿದ್ದೇಕೆ..? ಫ್ಯಾನ್ಸ್‌ ಶಾಕ್‌... 

Bigg Boss Ticket to finale : ಬಿಗ್ ಬಾಸ್ 18 ರ ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಗೆದ್ದರೂ, ಸ್ಪರ್ಧಿ ತಮಗೆ ಟಿಕೆಕ್‌ ಬೇಡ ಎಂದು ನಿರಾಕರಿಸಿದ್ದಾರೆ.. ಇದನ್ನು ನೋಡಿದ ಅವರ ಅಭಿಮಾನಿಗಳು ಮತ್ತು ವೀಕ್ಷಕರು ಶಾಕ್‌ ಆಗಿದ್ದಾರೆ. ಅಸಲಿಗೆ ಬಂದ ಅದೃಷ್ಟವನ್ನು ಸ್ಪರ್ಧಿ ಕಾಲಿನಿಂದ ಒದ್ದಿದ್ದು ಏಕೆ..? ಬನ್ನಿ ನೋಡೋಣ..

Written by - Krishna N K | Last Updated : Jan 8, 2025, 04:43 PM IST
    • ಬಿಗ್ ಬಾಸ್ ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಗೆಲುವು
    • ಗೆದ್ದರೂ ಟಿಕೆಕ್‌ ಬೇಡ ಎಂದು ನಿರಾಕರಿಸಿದ ಸ್ಪರ್ಧಿ
    • ಸ್ಪರ್ಧಿಯ ನಡೆಗೆ ಬೆಚ್ಚಿಬಿದ್ದ ವೀಕ್ಷಕರು..
ಟಾಸ್ಕ್‌ನಲ್ಲಿ ಗೆದ್ದರೂ Bigg Boss "ಫಿನಾಲೆ ಟಿಕೆಟ್" ಬೇಡ ಎಂದ ಸ್ಪರ್ಧಿ..! ಅದೃಷ್ಟವನ್ನು ಕಾಲಿನಿಂದ ಒದ್ದಿದ್ದೇಕೆ..? ಫ್ಯಾನ್ಸ್‌ ಶಾಕ್‌...  title=

Bigg Boss Finale updates : ಬಿಗ್ ಬಾಸ್ 18 ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗುತ್ತಿದೆ. ದಿನದಿಂದ ದಿನಕ್ಕೆ ಸ್ಪರ್ಧೆಯ ಬಿಸಿ ಹೆಚ್ಚುತ್ತಿದೆ.. ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಫೈನಲ್‌ನಲ್ಲಿ ಸ್ಥಾನ ಪಡೆಯಲು ಎಲ್ಲಾ ಸ್ಪರ್ಧಿಗಳು ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದಾರೆ. ಪ್ರಬಲ ಸ್ಪರ್ಧಿಗಳ ಪೈಕಿ ಕರಣ್ ವೀರ್ ಮೆಹ್ರಾ, ಅವಿನಾಶ್ ಮಿಶ್ರಾ, ರಜತ್ ದಲಾಲ್ ಮತ್ತು ವಿವಿಯನ್ ದ್ಸೇನಾ ಇದ್ದಾರೆ. ಪ್ರತಿಯೊಬ್ಬರೂ ಅಸ್ಕರ್ ಟ್ರೋಫಿಯನ್ನು ಗೆಲ್ಲಲು ಫೈಪೋಟಿ ನಡೆಸಿದ್ದಾರೆ. ಟಾಸ್ಕ್‌ - ಟಿಕೆಟ್ ಟು ಫಿನಾಲೆ - ನಿರ್ಣಾಯಕ ಯುದ್ಧಭೂಮಿಯಾಗಿ ಮಾರ್ಪಾಡಾಗಿದೆ...

ಹೊಸ ಪ್ರೋಮೋದಲ್ಲಿ, ಸ್ಪರ್ಧಿಗಳು ದೈಹಿಕವಾಗಿ ಹೆಚ್ಚು ಕಷ್ಟಕರವಾದ ಟಾಸ್ಕ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇತ್ತೀಚಿಗೆ ಬಿಗ್‌ಬಾಸ್‌ ಟಿಕೆಟ್‌ ಟು ಫಿನಾಲೆಗೆ ಟಾಸ್ಕ್‌ ನೀಡಿತ್ತು.. ಮೊಟ್ಟೆಗಳನ್ನು ಬುಟ್ಟಿಗೆ ಹಾಕಿ, ಅವುಗಳನ್ನು ಎತ್ತಿಕೊಂಡು ಬಂದು, ಅವುಗಳ ಮೇಲೆ ತಮ್ಮ ಹೆಸರುಗಳನ್ನು ಬರೆಬೇಕಿತ್ತು.. ಅಲ್ಲದೆ, ಹೆಚ್ಚು ಮೊಟ್ಟೆಗಳ ಮೇಲೆ ತಮ್ಮ ಹೆಸರನ್ನು ಬರೆಯುವ ಸ್ಪರ್ಧಿಯು ಗೆಲ್ಲುತ್ತಾನೆ ಮತ್ತು ಫೈನಲ್‌ಗೆ ಡೈರೆಕ್ಟ್‌ ಎಂಟ್ರಿ. 

ಇದನ್ನೂಓದಿ:ನನಗೆ ಮದುವೆ ಆಗಿದೆ, ತಿಂಗಳಲ್ಲಿ ಒಂದು ವಾರ ಮಾತ್ರ...! ಖ್ಯಾತ ನಿರೂಪಕಿ ಶಾಕಿಂಗ್‌ ಹೇಳಿಕೆ

ಕರಣ್ ವೀರ್ ಮೆಹ್ರಾ ಅವರು ಚುಮ್ ದರಾಂಗ್ ಪರ ಆಡುತ್ತಿದ್ದಾರೆ, ಆದರೆ ವಿವಿಯನ್ ಡಿಸೇನಾ ಮತ್ತು ಅವಿನಾಶ್ ಮಿಶ್ರಾ ಸೇರಿದಂತೆ ಇತರರು ತಮ್ಮದೇ ಸ್ಥಾನಗಳನ್ನು ಭದ್ರಪಡಿಸಿಕೊಳ್ಳುವತ್ತ ಗಮನಹರಿಸಿದ್ದಾರೆ. ಇದೇ ವೇಳೆ ಕುತೂಹಲಕಾರಿಯಾಗಿ ಘಟನೆ ನಡೆದಿದೆ..

ಟಾಸ್ಕ್‌ನಲ್ಲಿ ವಿವಿಯನ್ ಡಿಸೇನಾ ಗೆದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಟಿಕೆಟ್‌ ಟು ಫಿನಾಲೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.. ವಿವಿಯನ್ ಆಕ್ರಮಣ ಮಾಡುವ ಮೂಲಕ ಗೆದ್ದಿದ್ದು, ಅದಕ್ಕೆ ಗೆಲುವನ್ನು ನಿರಾಕರಿಸಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಅನಿರೀಕ್ಷಿತ ಟ್ವಿಸ್ಟ್ ಅಭಿಮಾನಿಗಳಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವರ ಈ ನಿರ್ಧಾರದ ಹಿಂದಿನ ಕಾರಣಗಳ ಬಗ್ಗೆ ಕುತೂಹಲ ಮೂಡಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News