ಕೊರೊನಾ ಲಸಿಕೆಯನ್ನು ಮಾನವ ಪ್ರಯೋಗಕ್ಕೆ ಒಳಪಡಿಸಲು ಮುಂದಾದ ಲಂಡನ್‌ನ ಇಂಪೀರಿಯಲ್ ಕಾಲೇಜ್

ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿ ಅಭಿವೃದ್ಧಿಪಡಿಸಿದ ಲಸಿಕೆ ಈ ವಾರ ಮಾನವ-ಪ್ರಯೋಗ ಹಂತಕ್ಕೆ ಹೋಗುತ್ತದೆ, ಇದು 2021 ರ ವಸಂತ ಋತುವಿನಲ್ಲಿ ಸಾಮೂಹಿಕ ವ್ಯಾಕ್ಸಿನೇಷನ್‌ಗೆ ಲಭ್ಯವಾಗಲಿದೆ.ಇನ್ನೊಂದೆಡೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಎರಡನೇ ಹಂತದಲ್ಲಿ ಮತ್ತೊಂದು ಪ್ರಯೋಗ ಪ್ರಗತಿಯಲ್ಲಿದೆ ಎಂದು ಹೇಳಲಾಗುತ್ತದೆ.

Last Updated : Jun 16, 2020, 08:17 PM IST
ಕೊರೊನಾ ಲಸಿಕೆಯನ್ನು ಮಾನವ ಪ್ರಯೋಗಕ್ಕೆ ಒಳಪಡಿಸಲು ಮುಂದಾದ ಲಂಡನ್‌ನ ಇಂಪೀರಿಯಲ್ ಕಾಲೇಜ್  title=

ನವದೆಹಲಿ: ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿ ಅಭಿವೃದ್ಧಿಪಡಿಸಿದ ಲಸಿಕೆ ಈ ವಾರ ಮಾನವ-ಪ್ರಯೋಗ ಹಂತಕ್ಕೆ ಹೋಗುತ್ತದೆ, ಇದು 2021 ರ ವಸಂತ ಋತುವಿನಲ್ಲಿ ಸಾಮೂಹಿಕ ವ್ಯಾಕ್ಸಿನೇಷನ್‌ಗೆ ಲಭ್ಯವಾಗಲಿದೆ.ಇನ್ನೊಂದೆಡೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಎರಡನೇ ಹಂತದಲ್ಲಿ ಮತ್ತೊಂದು ಪ್ರಯೋಗ ಪ್ರಗತಿಯಲ್ಲಿದೆ ಎಂದು ಹೇಳಲಾಗುತ್ತದೆ.

ಆಫೀಸ್ ಫಾರ್ ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ (ಒಎನ್ಎಸ್) ನ ಹೊಸ ಅಂಕಿ ಅಂಶಗಳು ಲಂಡನ್ ನಲ್ಲಿ ಇತ್ತೀಚಿನ ವಾರಗಳಲ್ಲಿ ಸತ್ತವರ ಮತ್ತು ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಕುಸಿತವನ್ನು ದಾಖಲಿಸಿರುವ ಬೆನ್ನಲ್ಲೇ ಈಗ ಇಂಪೀರಿಯಲ್ ಕಾಲೇಜ್ ಲಸಿಕೆ ಮಾನವ ಪ್ರಯೋಗದ ಬಗ್ಗೆ ಪ್ರಕಟಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಂಡನ್ ನಲ್ಲಿ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ದಾಖಲಾಗಿದ್ದವು.

ದುರ್ಬಲಗೊಂಡ ಅಥವಾ ಮಾರ್ಪಡಿಸಿದ ವೈರಸ್ ಅಥವಾ ಅದರ ಭಾಗಗಳನ್ನು ಆಧರಿಸಿದ ಸಾಂಪ್ರದಾಯಿಕ ಲಸಿಕೆಗಳಿಗಿಂತ ಭಿನ್ನವಾಗಿ, ಇಂಪೀರಿಯಲ್ ಲಸಿಕೆ ವೈರಸ್ನ ಆನುವಂಶಿಕ ವಸ್ತುಗಳ ಆಧಾರದ ಮೇಲೆ ಆನುವಂಶಿಕ ಸಂಕೇತದ (ಆರ್ಎನ್ಎ ಎಂದು ಕರೆಯಲ್ಪಡುವ) ಸಂಶ್ಲೇಷಿತ ಎಳೆಗಳನ್ನು ಬಳಸಿಕೊಂಡು ಹೊಸ ವಿಧಾನವನ್ನು ಅಳವಡಿಸಿಕೊಳ್ಳುತ್ತದೆ.ಸುಮಾರು 300 ಆರೋಗ್ಯವಂತ ಸ್ವಯಂಸೇವಕರು ಈ ಲಸಿಕೆ ಪ್ರಯೋಗಕ್ಕೆ ಒಳಗಾಗಲಿದ್ದಾರೆ ಎನ್ನಲಾಗಿದೆ.

ಲಸಿಕೆ ಅಧ್ಯಯನವನ್ನು ಮುನ್ನಡೆಸುತ್ತಿರುವ ಇಂಪೀರಿಯಲ್ ಕಾಲೇಜಿನ ಸಾಂಕ್ರಾಮಿಕ ರೋಗ ವಿಭಾಗದ ರಾಬಿನ್ ಶಟ್ಟಾಕ್ ಮಾತನಾಡಿ 'ವೈಜ್ಞಾನಿಕ ದೃಷ್ಟಿಕೋನದಿಂದ, ಹೊಸ ತಂತ್ರಜ್ಞಾನಗಳು ಎಂದರೆ ನಾವು ಅಭೂತಪೂರ್ವ ಲಸಿಕೆಯ ಮೇಲೆ ಅಭೂತಪೂರ್ವ ವೇಗದಲ್ಲಿ ಚಲಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

Trending News