ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿ ಸಂಸದರನ್ನು ಭೇಟಿಯಾಗಲಿರುವ ಪ್ರಧಾನಿ ಮೋದಿ

ಇಂದು ಸಂಜೆ ನಡೆಯಲಿರುವ ಸಭೆಯಲ್ಲಿ ನೂತನ ರಾಜ್ಯಸಭಾ ಸಂಸದರನ್ನು ಪ್ರಧಾನಮಂತ್ರಿಯವರಿಗೆ ಪರಿಚಯಿಸಲಾಗುವುದು.   

Last Updated : Jul 22, 2020, 03:35 PM IST
ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿ ಸಂಸದರನ್ನು ಭೇಟಿಯಾಗಲಿರುವ ಪ್ರಧಾನಿ ಮೋದಿ title=

ನವದೆಹಲಿ: ರಾಜ್ಯಸಭೆಗೆ ಆಯ್ಕೆಯಾದ 61 ಸಂಸದರಲ್ಲಿ 45 ಮಂದಿ ಸಂಸತ್ ಭವನದಲ್ಲಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಇದರಲ್ಲಿ ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia), ಹಿರಿಯ ಕಾಂಗ್ರೆಸ್ ಮುಖಂಡರಾದ ಮಲ್ಲಿಕರ್ಜುನ್ ಖರ್ಗೆ,  ದಿಗ್ವಿಜಯ್ ಸಿಂಗ್ ಸೇರಿದ್ದಾರೆ. ಹೊಸ ಸದಸ್ಯರಿಗೆ ರಾಜ್ಯಸಭಾ ಸಭಾಪತಿ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು  ಅವರ ಕೊಠಡಿಯಲ್ಲಿ ಪ್ರಮಾಣ ವಚನ ಬೋಧಿಸಿದರು.

ಈ ಸಂದರ್ಭದಲ್ಲಿ ವೆಂಕಯ್ಯ ನಾಯ್ಡು ಅವರು ಎಲ್ಲಾ ಹೊಸ ಸಂಸದರಿಗೆ ನೈತಿಕತೆಯ ಮಹತ್ವವನ್ನು ನೀಡುವಂತೆ, ಸಂಸತ್ತಿನಲ್ಲಿ ನಿಯಮಿತವಾಗಿ ಹಾಜರಾಗುವಂತೆ, ಸಂಸತ್ತಿನ ನಿಯಮಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಂತೆ ಮತ್ತು ಮಧ್ಯಂತರ ಎರಡು ಅಧಿವೇಶನಗಳಲ್ಲಿಯೂ ಸಹ ಸಂಸದರ ಘನತೆ ಮತ್ತು ಉನ್ನತ ಗುಣಮಟ್ಟವನ್ನು ಅನುಸರಿಸುವಂತೆ ಸಲಹೆ ನೀಡಿದರು. 

ರಾಜ್ಯಸಭೆಯ ಸದಸ್ಯರಾದ 18 ಸಂಸದರು ಬಿಜೆಪಿಯವರು. ಇಂದು ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ, ವಿವೇಕ್ ಠಾಕೂರ್, ದೀಪಕ್ ಪ್ರಕಾಶ್, ಸುಮೇರ್ ಸಿಂಗ್ ಸೋಲಂಕಿ ಅವರು ಬಿಜೆಪಿಯ ರಾಜ್ಯಸಭಾ ಸಂಸದರಾಗಿ ಆಯ್ಕೆಯಾದವರಲ್ಲಿ ಪ್ರಮುಖರು. ಈ ಎಲ್ಲ ಬಿಜೆಪಿ ಸಂಸದರು ಇಂದು ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಲಿದ್ದಾರೆ.

ಇಂದು ಸಂಜೆ ನಡೆಯಲಿರುವ ಸಭೆಯಲ್ಲಿ ನೂತನ ರಾಜ್ಯಸಭಾ (Rajya sabha) ಸಂಸದರನ್ನು ಪ್ರಧಾನಮಂತ್ರಿಯವರಿಗೆ ಪರಿಚಯಿಸಲಾಗುವುದು. ಬಿಜೆಪಿ ಸಂಸದೀಯ ಪಕ್ಷದ ಸಭೆಗಳಲ್ಲಿ ಸದನದಲ್ಲಿ ಉಳಿಯಲು ಮತ್ತು ಸಂಸತ್ತಿನ ನಿಯಮಗಳನ್ನು ಪಾಲಿಸುವಂತೆ ಪ್ರಧಾನಿ ಯಾವಾಗಲೂ ತಮ್ಮ ಸಂಸದರಿಗೆ ಸೂಚನೆ ನೀಡುತ್ತಾರೆ. ಹಾಗೆಯೇ ಇಂದೂ ಸಹ ನೂತನ ರಾಜ್ಯಸಭಾ ಸಂಸದರಿಗೆ ಪ್ರಧಾನಿ ಸಲಹೆ ನೀಡಲಿದ್ದಾರೆ ಎಂದು ಭಾವಿಸಲಾಗಿದೆ.

10 ವಿವಿಧ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಂಸದರು:
ಕರೋನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೆ ಇಂದು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಸಂಸದರು 10 ವಿವಿಧ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.  ಗಮನಾರ್ಹವಾಗಿ ರಾಜ್ಯಸಭೆಯಲ್ಲಿ  ನೂತನವಾಗಿ 61 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಇಂದು ಅವರಲ್ಲಿ 45 ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ 45 ರಲ್ಲಿ ಬಿಜೆಪಿಯ18 ಸದಸ್ಯರಿದ್ದಾರೆ. 
 

Trending News