ಬಾಲಸೋರ್ (ಒಡಿಶಾ): ಒಡಿಶಾದ ಬಾಲಸೋರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬಳು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮೇಲೆ ಮೊಟ್ಟೆ ಎಸೆದ ಘಟನೆ ನಡೆದಿದೆ.
ಆದರೆ ಅದೃಷ್ಟವಶಾತ್ ಮೊಟ್ಟೆಯು ಮುಖ್ಯಮಂತ್ರಿಗಳಿಗೆ ತಗುಲಿಲ್ಲ ಎಂದು ತಿಳಿದು ಬಂದಿದೆ. ಈ ಘಟನೆಯ ನಂತರ ಆ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡ ಭದ್ರತಾ ಸಿಬ್ಭಂಧಿ ಅವಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಕೊರಾಪುಟ್ ಜಿಲ್ಲೆಯ ಕುಂದೂಲಿಯಲ್ಲಿ ನಾಲ್ವರು ವ್ಯಕ್ತಿಗಳು ಶಾಲಾ ಬಾಲಕಿಯನ್ನು ಅತ್ಯಾಚಾರ ಮಾಡಿದ್ದರು. ಅತ್ಯಾಚಾರಕ್ಕೊಳಗಾದ ಬಾಲಕಿಯು ಮನನೊಂದು ಜನವರಿ 22 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು.ಆದ್ದರಿಂದ ಈ ವಿಷಯವಾಗಿ ಆ ಮಹಿಳೆಯು ಆಕ್ರೋಶಗೊಂಡು ಮೊಟ್ಟೆಯನ್ನು ಮುಖ್ಯಮಂತ್ರಿಗಳ ಮೇಲೆ ಎಸೆಯಲಾಗಿದೆ ಎಂದು ತಿಳಿದುಬಂದಿದೆ.ಆದರೆ ಇದನ್ನು ಅಲ್ಲಗಳೆದಿರುವ ಬಿಜು ಜನತಾದಳ ಪಕ್ಷ(ಬಿಜೆಡಿ) ಈ ಘಟನೆಯ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ.