ಕಿವುಡುತನದ ಔಷಧಿ Coronavirus ನಿರ್ಮೂಲನೆಗೆ ರಾಮಬಾಣ ! ವಿಜ್ಞಾನಿಗಳಿಗೆ ಸಿಕ್ಕ ದೊಡ್ಡ ಯಶಸ್ಸು

ಆಧುನಿಕ ಕಂಪ್ಯೂಟರ್ ಸಿಮ್ಯುಲೇಶನ್‌ ಮೂಲಕ, ವಿಜ್ಞಾನಿಗಳು ಮೊದಲೇ ಅಸ್ತಿತ್ವದಲ್ಲಿರುವ ಔಷಧಿಯೊಂದನ್ನು ಕರೋನಾ ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು ಎಂಬುದನ್ನು ಕಂಡು ಹಿಡಿದಿದ್ದಾರೆ,

Last Updated : Aug 15, 2020, 06:34 PM IST
ಕಿವುಡುತನದ  ಔಷಧಿ Coronavirus ನಿರ್ಮೂಲನೆಗೆ ರಾಮಬಾಣ ! ವಿಜ್ಞಾನಿಗಳಿಗೆ ಸಿಕ್ಕ ದೊಡ್ಡ ಯಶಸ್ಸು title=

ನವದೆಹಲಿ: ಆಧುನಿಕ ಕಂಪ್ಯೂಟರ್ ಸಿಮ್ಯುಲೇಶನ್‌ ಮೂಲಕ, ವಿಜ್ಞಾನಿಗಳು ಮೊದಲೇ ಅಸ್ತಿತ್ವದಲ್ಲಿರುವ ಔಷಧಿಯೊಂದನ್ನು ಕರೋನಾ ವೈರಸ್ (Coronavirus) ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು ಎಂಬುದನ್ನು ಕಂಡು ಹಿಡಿದಿದ್ದಾರೆ, ಪ್ರಸ್ತುತ ಈ ಔಷಧಿಯನ್ನು  ಬೈಪೋಲಾರ್ ಡಿಸಾರ್ಡರ್ (ಮಾನಸಿಕ ಅಸ್ವಸ್ಥತೆ) ಮತ್ತು ಶ್ರವಣದೋಷ ಹೊಂದಿರುವ ರೋಗಿಗಳಿಗೆ ಬಳಸಲಾಗುತ್ತದೆ. ಈ ಔಷಧಿ ಕರೋನಾ ವೈರಸ್ ಪುನರಾವರ್ತಿಸದಂತೆ ತಡೆಯುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೋಂಕಿತ ವ್ಯಕ್ತಿಯ ದೇಹದಲ್ಲಿ ತಮ್ಮ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ವೈರಸ್‌ ಉಸಿರಾಟದ ವ್ಯವಸ್ಥೆಯಲ್ಲಿ ಪ್ರಾಬಲ್ಯ ಮೆರೆಯುತ್ತದೆ.

ಸೈನ್ಸ್ ಅಡ್ವಾನ್ಸಸ್ ಜರ್ನಲ್ನಲ್ಲಿ ಪ್ರಕಟಗೊಂಡ ಒಂದು ಅಧ್ಯಯನ ವರದಿಯ ಪ್ರಕಾರ,  ನಾವೆಲ್ ಕೊರೊನಾ ವೈರಸ್ ನ  ಮುಖ್ಯ ಪ್ರೋಟಿಯೇಸ್  Mpro,ವೈರಸ್ ನ ಜೀವನ ಚಕ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಕಿಣ್ವವಾಗಿದೆ ಎಂದು ಹೇಳಲಾಗಿದೆ. ಯುಎಸ್ ಯೂನಿವರ್ಸಿಟಿ ಆಫ್ ಚಿಕಾಗೊ ಸಂಶೋಧಕರು ಸೇರಿದಂತೆ ಇತರೆ ಸಂಶೋಧಕರ ಪ್ರಕಾರ,  Mpro ವೈರಸ್ ಗೆ ಆನುವಂಶಿಕ ವಸ್ತುಗಳಿಂದ (ಆರ್ಎನ್ಎ) ಪ್ರೋಟೀನ್ ತಯಾರಿಸುವ ಸಾಮರ್ಥ್ಯ ಒದಗಿಸುತ್ತದೆ ಮತ್ತು ಈ ಕಾರಣದಿಂದಾಗಿ, ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯ ಜೀವಕೋಶಗಳಲ್ಲಿ ತನ್ನ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

ಬಯಾಲಾಜಿಕಲ್ ಮಾಲಿಕ್ಯೂಲ್ಸ್ ಮಾಡಲಿಂಗ್ ಅನ್ನು ಬಳಸಿಕೊಂಡು, ವಿಜ್ಞಾನಿಗಳು ಕರೋನದ ವಿರುದ್ಧ ಪರಿಣಾಮಕಾರಿಯಾದ ಸಾವಿರಾರು ಸಂಯುಕ್ತಗಳ ವೇಗವಾದ ತನಿಖೆ ನಡೆಸಿದ್ದಾರೆ. ಇದರಿಂದ  Mpro ವಿರುದ್ಧ ಸಾಮರ್ಥ್ಯ ತೋರಿಸಿದ ಔಷಧಿಯನ್ನು ವಿಜ್ಞಾನಿಗಳು  ಎಬ್ಲ್ಸೆಲೆನ್ (Eblselen) ಎಂದು ಗುರುತಿಸಿದ್ದಾರೆ. ಇದು ರಾಸಾಯನಿಕ ಸಂಯುಕ್ತವಾಗಿದ್ದು, ಆಂಟಿ ವೈರಲ್, ಆಂಟಿ ಇನ್ಫ್ಲಮೇಟರಿ, ಆಂಟಿ ಆಕ್ಸಿಡೇಟಿವ್, ಬ್ಯಾಕ್ಟೀರಿಯಾನಾಶಕ ಮತ್ತು ಕೋಶ ರಕ್ಷಣಾತ್ಮಕ ಗುಣಗಳನ್ನು ಹೊಂದಿದೆ.

ಸಂಶೋಧಕರ ಪ್ರಕಾರ Eblselen ನ ಬಳಕೆ ಬೈಪೋಲಾರ್ ಡಿಸ್ ಆರ್ಡರ್ ಹಾಗೂ ಕೇಳುವ ಕ್ಷಮತೆ ಇರುವುದು ಸೇರಿದಂತೆ ಇತರೆ ರೋಗಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಹಲವು ಕ್ಲಿನಿಕಲ್ ಟ್ರಯಲ್ ಗಳಲ್ಲಿ ಈ ಔಷಧಿ ಮಾನವರ ಮೇಲಿನ ಬಳಕೆಗೆ ಸುರಕ್ಷಿತ ಎಂದು ಹೇಳಲಾಗಿದೆ.

ತಮ್ಮ ಸಂಶೋಧನೆಯಲ್ಲಿ, ಡಿ ಪ್ಯಾಬ್ಲೋ ಮತ್ತು ಅವರ ತಂಡವು ಕಿಣ್ವಗಳು ಮತ್ತು ಔಷಧಿಯ ವಿಸ್ತೃತ ಮಾದರಿಗಳನ್ನು ರಚಿಸಿದೆ  ಮತ್ತು ಸೂಪರ್ ಕಂಪ್ಯೂಟರ್ ಸಿಮ್ಯುಲೇಶನ್‌ ಮೂಲಕ ಎಬ್ಸೆಲೆನ್ Mpro ಚಟುವಟಿಕೆಯನ್ನು ಕಡಿಮೆ ಮಾಡಲು ಸಮರ್ಥವಾಗಿದೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ಆದರೂ ವಿಜ್ಞಾನಿಗಳಿಗೆ ಈ ಔಷಧಿಯಲ್ಲಿ ಸಾಕಷ್ಟು ಸಂಭವನೀಯತೆಗಳು ಕಂಡುಬಂದಿವೆ. ಕೋರೋನಾ ವಿರುದ್ಧ ಈ ಔಷಧಿಯ ಪರಿಣಾಮವನ್ನು ಪರೀಕ್ಷಿಸಲು ಹೆಚ್ಚಿನ ಅಧ್ಯಯನ ನಡೆಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.

Trending News