ಇನ್ಮುಂದೆ Indian Railways ಕೂಡ ಹೋಂ ಡಿಲೆವರಿ ಸೇವೆ ನೀಡಲಿದೆ

ಕೊರೊನಾ ಕಾಲದಲ್ಲಿ ಜನರಿಗೆ ಅವರ ಸರಕುಗಳನ್ನು ಮನೆ ಬಾಗಿಲಿಗೆ ತಲುಪಿಸಲು ಭಾರತೀಯ ರೈಲು ವಿಭಾಗ (Indian Railways) ಶೀಘ್ರದಲ್ಲಿಯೇ ಭಾರತೀಯ ಅಂಚೆ ವಿಭಾಗ (India Post) ಸೇವೆಗಳನ್ನು ಬಳಸಲಿದೆ.

Last Updated : Aug 21, 2020, 07:35 AM IST
ಇನ್ಮುಂದೆ Indian Railways ಕೂಡ ಹೋಂ ಡಿಲೆವರಿ ಸೇವೆ ನೀಡಲಿದೆ title=

ನವದೆಹಲಿ: ಕೊರೊನಾ ಕಾಲದಲ್ಲಿ ಜನರಿಗೆ ಅವರ ಸರಕುಗಳನ್ನು ಮನೆ ಬಾಗಿಲಿಗೆ ತಲುಪಿಸಲು ಭಾರತೀಯ ರೈಲು ವಿಭಾಗ (Indian Railways) ಶೀಘ್ರದಲ್ಲಿಯೇ ಭಾರತೀಯ ಅಂಚೆ ವಿಭಾಗ (India Post) ಸೇವೆಗಳನ್ನು ಬಳಸಲಿದೆ. ಈ ಕುರಿತು ಸ್ವತಃ ರೈಲು ವಿಭಾಗದ ಅಧ್ಯಕ್ಷ ವಿ.ಕೆ. ಯಾದವ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಯಾದವ್, ಶೀಘ್ರದಲ್ಲಿಯೇ ದೇಶದ ಜನರ ಸರಕುಗಳನ್ನು ಅವರವರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಭಾರತೀಯ ರೈಲು ವಿಭಾಗ, ದೇಶದ ಅಂಚೆ ವಿಭಾಗದ ಸೇವೆಗಳನ್ನು ಬಳಸುವ ಯೋಜನೆ ರೂಪಿಸುತ್ತಿದೆ ಎಂದಿದ್ದಾರೆ. ಈಗಾಗಲೇ ಈ ರೀತಿಯ ಯೋಜನೆಯನ್ನು ಮಹಾರಾಷ್ಟ್ರದ ಮಧ್ಯ ರೇಲ್ವೆ ವಿಭಾಗದಲ್ಲಿ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

24 ಗಂಟೆಗಳಲ್ಲೇ ತಲುಪಿವೆ ಎರಡು ವೆಂಟಿಲೆಟರ್ ಗಳು
ಸೆಂಟ್ರಲ್ ರೈಲ್ವೆ ಮತ್ತು ಇಂಡಿಯಾ ಪೋಸ್ಟ್‌ನ ಜಂಟಿ ಸೇವೆಯಾದ 'ಇಂಡಿಯನ್ ಪೋಸ್ಟಲ್ ರೈಲ್ವೆ ಪಾರ್ಸೆಲ್ ಸರ್ವಿಸ್' ಅನ್ನು ಲಾಕ್ ಡೌನ್ ಸಮಯದಲ್ಲಿ ನಾಗ್ಪುರದಿಂದ ಮುಂಬೈಗೆ ಎರಡು ವೆಂಟಿಲೇಟರ್‌ಗಳನ್ನು ಕಳುಹಿಸಲು ಬಳಸಲಾಗಿದೆ. ಮನೆಯಿಂದ ಮನೆಗೆ ಸರಕುಗಳನ್ನು ತಲುಪಿಸಲು ಇಪ್ಪತ್ನಾಲ್ಕು ಗಂಟೆ ಬೇಕಾಯಿತು ಎಂದು ಯಾದವ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ಇದು ಮನೆಯಿಂದ ಮನೆಗೆ ಸರಕುಗಳನ್ನು ತಲುಪಿಸುವ ಸೇವೆಯಾಗಿದೆ. ಇದಕ್ಕಾಗಿ ಮಧ್ಯ ರೈಲ್ವೆ ಪ್ರಾಯೋಗಿಕ ಯೋಜನೆಯನ್ನು ನಡೆಸಿದ್ದು ಮತ್ತು ಇದೀಗ ನಾವು ಅದನ್ನು ದೇಶಾದ್ಯಂತ ಈ ಸೇವೆ ಆರಂಭಿಸಲು ಬಯಸುತ್ತೇವೆ. ಅಂಚೆ ಸೇವೆಯ ಬೆಂಬಲದೊಂದಿಗೆ ನಾವು ಇದನ್ನು ಮಾಡಲು ಬಯಸುತ್ತೇವೆ. ಅವರು ಈ ಕೆಲಸವನ್ನು ಕಡಿಮೆ ದೂರದವರೆಗೆ ಮಾಡುತ್ತಾರೆ, ರೈಲ್ವೆ ಒಂದು ತುದಿಯಿಂದ ಇನ್ನೊಂದು ತುದಿಗೆ ದೂರದವರೆಗೆ ಇದನ್ನು ಮಾಡಬಹುದು ಎಂದಿದ್ದಾರೆ.

Trending News