ನವದೆಹಲಿ: ನವದೆಹಲಿ: ಒಂದು ವೇಳೆ ನೀವೂ ಕೂಡ ಉದ್ಯಮವನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದ್ದಾರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ವಿಮಾನ ನಿಲ್ದಾಣಗಳಲ್ಲಿ ಇನ್ಮುಂದೆ ಕುಲ್ಲಡ್ (ಮಣ್ಣಿನಲ್ಲಿ ತಯಾರಿಸಲಾದ ಕಪ್) ನಲ್ಲಿ ಚಹಾ ಮಾರಾಟ ನಡೆಸಲಾಗುವುದು. ಇಂತಹುದರಲ್ಲಿ ನೀವೂ ಕೂಡ ಕುಲ್ಲಡ್ ತಯಾರಿಕೆಯ ವ್ಯಾಪಾರ ಆರಂಭಿಸಬಹುದು. ಏಕೆಂದರೆ, ಒಂದು ವೇಳೆ ಸರ್ಕಾರವು ಈ ಯೋಜನೆಯನ್ನು ಕಾರ್ಯಗತಗೊಳಿಸಿದರೆ, ಮುಂಬರುವ ಸಮಯದಲ್ಲಿ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕುಲ್ಲಡ್ ಗಳು ಬೇಕಾಗಲಿವೆ. ಇದರ ಜೊತೆಗೆ ನೀವು ಕುಲ್ಲಡ್ ಚಹಾ ಅಥವಾ ಹಾಲಿನ ಬಿಸಿನೆಸ್ ಕೂಡ ಮಾಡಬಹುದಾಗಿದೆ.
ಕುಲ್ಲಡ್ ಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ಲಾಸ್ಟಿಕ್ ಅಥವಾ ಪೇಪರ್ ಕಪ್ಗಳಲ್ಲಿ ಚಹಾ ಮಾರಾಟವನ್ನು ನಿಷೇಧಿಸುವಂತೆ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಒತ್ತಾಯಿಸಿದ್ದಾರೆ. ಆದರೂ ಕೂಡ ಈ ಬೇಡಿಕೆ ಗಣನೀಯವಾಗಿದೆ. ಪ್ರಸ್ತುತ ಪ್ಲಾಸ್ಟಿಕ್ ಹಾಗೂ ಕಾಗದದ ಕಪ್ ಗಳಿಗೆ ಬೇಡಿಕೆ ಕುಸಿಯುತ್ತಿದ್ದು, ಚಹಾ ವಿತರಣೆಗಾಗಿ ಕುಲ್ಲಡ್ ಗಳ ಬಳಕೆ ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರ ಒದಗಿಸಲಿದೆ ಧನ ಸಹಾಯ
ಕುಂಬಾರನ ವೃತ್ತಿಯಲ್ಲಿ ತೊಡಗಿರುವ ಜನರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ(PM Modi), 'ಕುಂಬಾರರ ಸಬಲೀಕರಣ ಯೋಜನೆ'ಯನ್ನು ಜಾರಿಗೆ ತಂದಿದ್ದಾರೆ. ಇದರ ಅಡಿ ಸರ್ಕಾರ ಕುಂಬಾರರಿಗೆ ಇಲೆಕ್ಟ್ರಿಕ್ ಚಕ್ರ ನೀಡಲಿದ್ದು, ಕುಂಬಾರರು ಇದರಿಂದ ಕುಲ್ಲಡ್ ತಯಾರಿಸಬಹುದಾಗಿದೆ. ಬಳಿಕ ಸರ್ಕಾರ ಈ ಕುಲ್ಲಡ್ ಗಳನ್ನು ಉತ್ತಮ ಹಣ ನೀಡಿ ಖರೀದಿಸಲಿದೆ.
ಕಡಿಮೆ ವೆಚ್ಚ ಉತ್ತಮ ಆದಾಯ
ಕೇವಲ ರೂ.5000 ನೀಡಿ ನೀವು ಈ ವ್ಯಾಪಾರವನ್ನು ಆರಂಭಿಸಬಹುದು. ಇದಕ್ಕಾಗಿ ನಿಮಗೆ ಸ್ವಲ್ಪ ಸ್ಪೇಸ್ ಬೇಕಾಗಲಿದೆ. ಜಾಗಕ್ಕೆ ಪ್ರಾಮ್ಪಟ್ ಲೋಕೇಶನ್ ಇರುವುದು ಆವಶ್ಯಕವಲ್ಲ. ಈ ಕುರಿತು ಹೇಳಿಕೆ ನೀಡಿರುವ ಖಾದಿ ಗ್ರಾಮೋದ್ಯೋಗ ಆಯೋಗದ ಚೇರ್ಮನ್ ವಿನಯ್ ಕುಮಾರ್ ಸಕ್ಸೇನಾ, ಈ ವರ್ಷ ಸರ್ಕಾರ 25 ಸಾವಿರ ಇಲೆಕ್ಟ್ರಿಕ್ ಚಕ್ರಗಳ ಹಂಚಿಕೆ ಮಾಡುವ ಗುರಿ ಹೊಂದಿದೆ.
ಎಷ್ಟಾಗಲಿದೆ ಗಳಿಕೆ?
ಚಹಾ ಕುಲ್ಲಡ್ ಗಳ ಬೆಲೆ ಪ್ರತಿ ಶೇಕಡಾ 50 ರೂ. ಆಗಿದೆ. ಲಸ್ಸಿ ಕುಲ್ಲಡ್ ಬೆಲೆ ಪ್ರತಿ ಶೇಕಡಾ ರೂ.150ಗಳಾಗಿದೆ, ಹಾಲಿನ ಕುಲ್ಲಡ್ ಬೆಲೆ ಪ್ರತಿ ಶೇಕಡಾ ರೂ.150 ಆಗಿದೆ. ಮಣ್ಣಿನ ಗ್ಲಾಸ್ ಬೆಲೆ ಪ್ರತಿ ಶೇ. ರೂ.100 ಆಗಿರಲಿದೆ. ಡಿಮಾಂಡ್ ನಲ್ಲಿ ಹೆಚ್ಚಳವಾದಾಗ ಇನ್ನೂ ಉತ್ತಮ ಬೆಲೆ ಕೂಡ ಸಿಗಲಿದೆ.
ಕುಲ್ಲಡ್ ಚಹಾ ವ್ಯಾಪಾರ
ಕುಲ್ಲಡ್ ಗಳ ಸಪ್ಲೈ ಜೊತೆಗೆ ನೀವು ಕುಲ್ಲಡ್ ಚಹಾ ಹಾಗೂ ಕುಲ್ಲಡ್ ಹಾಲಿನ ಬಿಸಿನೆಸ್ ಕೂಡ ಮಾಡಬಹುದು. ಈ ಬಿಸಿನೆಸ್ ಕೂಡ ನೀವೂ ರೂ.5000 ರಲ್ಲಿ ಆರಂಭಿಸಬಹುದು. ನಗರಗಳಲ್ಲಿ ಒಂದು ಕಪ್ ಕುಲ್ಲಡ್ ಚಹಾ ಬೆಲೆ ರೂ.15 ರಿಂದ ರೂ.20 ಇದೆ. ಕುಲ್ಲಡ್ ಚಹಾ ಬಿಸಿನೆಸ್ ನಲ್ಲಿ ದಿನವೊಂದಕ್ಕೆ 1000 ರೂ. ಉಳಿತಾಯವಾಗುತ್ತದೆ.
ಕುಲ್ಲಡ್ ಹಾಲಿನ ಬಿಸಿನೆಸ್
ಕುಲ್ಲಡ್ ನಲ್ಲಿ 200 ಮಿಲಿ ಹಾಲಿನ ಬೆಲೆ ರೂ.20 ರಿಂದ ರೂ.30 ರಷ್ಟಿದೆ. 1 ಲೀಟರ್ ಹಾಲಿನ ಮಾರಾಟದ ಮೇಲೆ ನಿಮಗೆ ಕನಿಷ್ಠ ಅಂದರೆ ರೂ.30 ಉಳಿತಾಯವಾಗಲಿದೆ. ಒಂದು ದಿನದಲ್ಲಿ ಒಂದು ವೇಳೆ ನೀವು 500 ಲೀಟರ್ ಹಾಲಿನ ಮಾರಾಟ ಮಾಡಿದರೆ, ದಿನವೊಂದಕ್ಕೆ ನಿಮಗೆ 1500 ರೂ.ವರೆಗೆ ಉಳಿತಾಯವಾಗಲಿದೆ. ಇದರ ಅರ್ಥ ತಿಂಗಳಿಗೆ ಸುಮಾರು 45 ಸಾವಿರದಿಂದ 50 ಸಾವಿರವರೆಗೆ ಉಳಿತಾಯವಾಗಲಿದೆ.