ನವದೆಹಲಿ: ಪ್ರಕೃತಿ ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ. ಇಂದು ನಾವು ಪ್ರಾಕೃತಿಕ ಔಷಧಿಯ ಕುರಿತು ನಾವು ನಿಮಗೆ ಹೇಳಲಿದ್ದೇವೆ. ಅಂದರೆ, ಸಸ್ಯ-ಗಿಡಗಳಿಂದ ಶರೀರವನ್ನು ನಿರೋಗಿಯನ್ನಾಗಿಡಬಹುದು. ಇಂತಹುದೇ ಒಂದು ಗಿಡ ಎಂದರೆ ಅದು ಗುಲಾಬಿ ಹೂವಿ(Rose)ನ ಗಿಡ. ಪುಷ್ಪಗಳ ರಾಜ ಎಂದೇ ಕರೆಯಲಾಗುವ ಗುಲಾಬಿ ಹೂವಿನ ಗಿಡ ಮುಳ್ಳಿನಿಂದ ಕೂಡಿರುತ್ತದೆ. ಆದರೂ ಕೂಡ ಈ ಗಿಡ ತುಂಬಾ ಮನಮೋಹಕವಾಗಿರುತ್ತದೆ. ಇದರ ಸುಗಂಧ ಹಾಗೂ ಸುಂದರತೆ ಎಲ್ಲರ ಮನ ಸೆಳೆಯುತ್ತದೆ. ಆದರೆ, ಇದು ಕೇವಲ ಮನಸ್ಸಿಗೆ ಆಹ್ಲಾದ ನೀಡುವ ಸಸ್ಯವಲ್ಲ. ಇದರಲ್ಲಿ ಔಷಧಿಯ ಗುಣಗಳು ಕೂಡ ಇವೆ. ಆಯುರ್ವೇದದಲ್ಲಿ ಹಲವು ರೋಗಗಳ ಚಿಕಿತ್ಸೆಗೆ ಗುಲಾಬಿಯನ್ನು ಬಳಸಲಾಗುತ್ತದೆ.
ಗುಲಾಬಿಯ ಔಷಧೀಯ ಗುಣಗಳು
- ಗುಲಾಬಿ ಹೂವು ಬಾಯಿಗೆ ಸಂಬಂಧಿಸಿದ ಕಾಯಿಲೆಗಳಿಂದ ಪರಿಹಾರ ನೀಡುತ್ತದೆ.
- ಇದು ತಲೆಯಲ್ಲಿನ ಗಾಯಗಳನ್ನು ಸಹ ಗುಣಪಡಿಸುತ್ತದೆ.
- ಗುಲಾಬಿಯಿಂದ ತಯಾರಿಸಿದ ಗುಳಕಂದವನ್ನು ಸೇವಿಸುವುದು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುತ್ತದೆ.
- ಕ್ಷಯರೋಗ ಚಿಕಿತ್ಸೆಯಲ್ಲಿ ಇದು ಪ್ರಯೋಜನಕಾರಿಯಾಗಿದೆ.
- ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಲ್ಲಿಯೂ ಇದು ಪ್ರಯೋಜನಕಾರಿಯಾಗಿದೆ.
- ಗುಲಾಬಿ ಹೂವು ಯಕೃತ್ತಿನ ಕಾಯಿಲೆಗಳಲ್ಲಿ ರಾಮಬಾಣವಾಗಿದೆ.
- ಸಿಡುಬು ಚಿಕಿತ್ಸೆಯಲ್ಲಿ ಗುಲಾಬಿ ಹೂವನ್ನು ಸಹ ಬಳಸಲಾಗುತ್ತದೆ.