ನವದೆಹಲಿ: ಹರಿವಂಶ ನಾರಾಯಣ್ ಸಿಂಗ್ ರಾಜ್ಯಸಭೆ (Rajya Sabha)ಯ ಉಪಸಭಾಪತಿಯಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಹರಿವಂಶ ನಾರಾಯಣ್ ಸಿಂಗ್ ಅವರು ಎರಡನೇ ಬಾರಿಗೆ ಈ ಹುದ್ದೆಗೆ ಆಯ್ಕೆಯಾಗಿದ್ದಾರೆ. ಜೆಡಿಯು ಮುಖಂಡರಾಗಿರುವ ಹರಿವಂಶ ಅವರನ್ನು NDA ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಪ್ರತಿಪಕ್ಷಗಳ ವತಿಯಿಂದ RJD ಮುಖಂಡ ಮನೋಜ್ ಝಾ ಅಭ್ಯರ್ಥಿಯಾಗಿದ್ದರು. ಈ ಕುರಿತು ಘೋಷಣೆ ಮಾಡಿರುವ ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು, ಹರಿವಂಶ ನಾರಾಯಣ್ ಸಿಂಗ್ ಅವರನ್ನು ಧ್ವನಿಮತದ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದ್ದಾರೆ.
ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
ಹರಿವಂಶ ನಾರಾಯಣ್ ಸಿಂಗ್ ಅವರ ಆಯ್ಕೆಯ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, "ಎರಡನೇ ಬಾರಿ ಉಪಸಭಾಪತಿಯಾಗಿ ಆಯ್ಕೆಯಾಗಿರುವ ಹರಿವಂಶ ನಾರಾಯಣ್ ಸಿಂಗ್ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸಾಮಾಜಿಕ ಕಾರ್ಯ ಹಾಗೂ ಪತ್ರಿಕೋದ್ಯಮದ ಮೂಲಕ ಹರಿವಂಶಜೀ ಅವರು ಪ್ರಾಮಾಣಿಕ ಛಾಪು ಮೂಡಿಸಿದ್ದಾರೆ. ಇದಕ್ಕಾಗಿ ನನ್ನ ಮನಸ್ಸಿನಲ್ಲಿ ಅವರ ಪ್ರತಿ ಭಾರಿ ಗೌರವವಿದೆ" ಎಂದಿದ್ದಾರೆ.
ಅವರ ಆಯ್ಕೆಯ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯಸಭಾ ಸಂಸದ ಗುಲಾಂ ನಬಿ ಆಜಾದ್, "ಎರಡನೇ ಬಾರಿಗೆ ಅವರನ್ನು ರಾಜ್ಯಸಭೆಯ ಉಪಸಭಾಪತಿಯಾಗಿ ಆಯ್ಕೆ ಮಾಡಲಾಗಿದ್ದು, ಅವರಿಗೆ ನನ್ನ ಅಭಿನಂದನೆಗಳು" ಎಂದಿದ್ದಾರೆ.
ಹರಿವಂಶ ನಾರಾಯಣ್ ಸಿಂಗ್ ಅವರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ
ಜೂನ್ 30, 1956 ರಲ್ಲಿ ಬಲಿಯಾ ಜಿಲ್ಲೆಯ ಸೀತಾಬದಿಯಾರ್ ಗ್ರಾಮದಲ್ಲಿ ಜನಿಸಿದ ಹರಿವಂಶ ನಾರಾಯಣ್ ಸಿಂಗ್, ಜೆಪಿ ಆಂದೋಲನದ ಮೂಲಕ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದ ಹರಿವಂಶ ನಾರಾಯಣ್ ಸಿಂಗ್, ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಮುಗಿಸಿ ಆರಂಭದಲ್ಲಿ ಟೈಮ್ಸ್ ಸಮೂಹದಲ್ಲಿ ತಮ್ಮ ವೃತ್ತಿಜೀವನ ನಡೆಸಿದ್ದರು.
ಬ್ಯಾಂಕ್ ನಲ್ಲಿಯೂ ಕೂಡ ಸೇವೆ
ಇದಾದ ಬಳಿಕ ಹರಿವಂಶ ಸಾಪ್ತಾಹಿಕ ಪತ್ರಿಕೆಯಾಗಿರುವ ಧರ್ಮಯುಗದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. 1981ರ ವರೆಗೆ ಧರ್ಮಯುಗ ಪತ್ರಿಕೆಯ ಉಪಸಂಪಾದಕರಾಗಿದ್ದರು. ಬಳಿಕ ಪತ್ರಿಕೋದ್ಯಮದಿಂದ ದೂರವಾದ ಅವರು 1981 ರಿಂದ 1984ರವರೆಗೆ ಹೈದ್ರಾಬಾದ್ ಹಾಗೂ ಪಟ್ನಾದ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸೇವೆ ಸಲ್ಲಿಸಿದ್ದಾರೆ. ವರ್ಷ 1984 ರಲ್ಲಿ ಪುನ ಪತ್ರಿಕೋದ್ಯಮಕ್ಕೆ ಮರಳಿದ ಅವರು 1989ರವರೆಗೆ ಆನಂದ್ ಬಜಾರ್ ಪತ್ರಿಕೆಯ ಸಾಪ್ತಾಹಿಕ ಪತ್ರಿಕೆ ರವಿವಾರದಲ್ಲಿ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
2014 ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶ
90ರ ದಶಕದಲ್ಲಿ ಹರಿವಂಶ ಬಿಹಾರದ ಓದು ದೊಡ್ಡ ಮಾಧ್ಯಮ ಸಮೂಹಕ್ಕೆ ಸೇರಿದರು ಅಲ್ಲಿ ಅವರು ಸುಮಾರು ಎರಡು ದಶಕಗಳಿಗಿಂತಲೂ ಅಧಿಕ ಕಾಲ ಸೇವೆ ಸಲ್ಲಿಸಿದರು. ಈ ಅವಧಿಯಲಿ ಅವರು ಬಿಹಾರಗೆ ಸಂಬಂಧಿಸಿದ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದರು. ಈ ವೇಳೆ ಅವರು ಪ್ರಸ್ತುತ ಬಿಹಾರ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಅವರ ಸಂಪರ್ಕಕ್ಕೆ ಬಂದರು. ಅದಾದ ಬಳಿಕ ಜೆಡಿಯು ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಅವರು ಸೇರಿಕೊಂಡರು. 2014ರಲ್ಲಿ ಜೆಡಿಯು ಹರಿವಂಶ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತು. ಹೀಗಾಗಿ ಮೊಟ್ಟಮೊದಲ ಬಾರಿಗೆ ಅವರು ಸಂಸತ್ ಪ್ರವೇಶಿಸಿದರು.