ಚೀನಾದ ವಿಸ್ಮಯ! Tiktok ಮೇಲಿನ ನಿಷೇಧವನ್ನು ಹತ್ತೇ ದಿನದಲ್ಲಿ ಹಿಂಪಡೆದ ಪಾಕಿಸ್ತಾನ

ಈಗ ಇದನ್ನು ಚೀನಾದ ಭಯದಿಂದಾಗಿ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರವು ಚೀನಾದ ಆ್ಯಪ್ ಟಿಕ್‌ಟಾಕ್ ಮೇಲಿನ ನಿಷೇಧವನ್ನು ಕೆಲವೇ ದಿನಗಳಲ್ಲಿ ತೆಗೆದುಹಾಕಿದೆ ಎಂದು ಹೇಳಬಹುದು.

Last Updated : Oct 20, 2020, 09:25 AM IST
  • ಚೀನೀ ಅಪ್ಲಿಕೇಶನ್ ಟಿಕೆಟಾಕ್ ಅಶ್ಲೀಲತೆಯನ್ನು ಹರಡಿದೆ ಎಂದು ಆರೋಪಿಸಲಾಯಿತು
  • ಈ ಆಧಾರದ ಮೇಲೆ ಪಾಕಿಸ್ತಾನ ಈ ಹಿಂದೆ ನಿಷೇಧಿಸಿತ್ತು
  • ಆದರೆ ಇದೀಗ ಕೆಲವೇ ದಿನಗಳಲ್ಲಿ ಪಾಕಿಸ್ತಾನ ತನ್ನ ಹೆಜ್ಜೆಯನ್ನು ಹಿಂದಿಟ್ಟಿದೆ.
ಚೀನಾದ ವಿಸ್ಮಯ! Tiktok ಮೇಲಿನ ನಿಷೇಧವನ್ನು ಹತ್ತೇ ದಿನದಲ್ಲಿ ಹಿಂಪಡೆದ ಪಾಕಿಸ್ತಾನ title=

ಇಸ್ಲಾಮಾಬಾದ್: ಚೀನಾದ ತಾಳಕ್ಕೆ ಪಾಕಿಸ್ತಾನ ಹೆಜ್ಜೆ ಹಾಕುತ್ತಿದೆ ಎಂಬ ಮಾತಿಗೆ ಮತ್ತೆ ಸಾಕ್ಷಿ ಎಂಬಂತೆ ಪಾಕಿಸ್ತಾನ ಚೀನಾದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಟಿಕ್‌ಟಾಕ್ (TikTok) ಮೇಲಿನ ನಿಷೇಧವನ್ನು ತೆಗೆದುಹಾಕಿದೆ. ಅದುವೇ ಕೇವಲ 10 ದಿನಗಳಲ್ಲಿ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ತನ್ನ ಹೆಜ್ಜೆಗಳನ್ನು ಹಿಂತೆಗೆದುಕೊಂಡಿದೆ. ಹೌದು ಹತ್ತು ದಿನಗಳ ಹಿಂದಷ್ಟೇ ದೇಶದಲ್ಲಿ ಅಶ್ಲೀಲತೆಯನ್ನು ಹರಡಿದೆ ಎಂದು ಆರೋಪಿಸಿ ದೇಶದಲ್ಲಿ ಟಿಕ್‌ಟಾಕ್ (TikTok) ಮೇಲೆ ನಿಷೇಧ ಹೇರಿದ್ದ ಪಾಕಿಸ್ತಾನ ಅದನ್ನು ಕೇವಲ ಹತ್ತು ದಿನಗಳಲ್ಲಿ ಹಿಂಪಡೆದಿದೆ.

ಈಗ ಎಲ್ಲವೂ ಸರಿಯಿದೆ:
ನಿಷೇಧವನ್ನು ತೆಗೆದುಹಾಕುವ ಬಗ್ಗೆ ಮಾಹಿತಿ ನೀಡಿದ ಪಾಕಿಸ್ತಾನದ (Pakistan) ಟೆಲಿಕಾಂ ಪ್ರಾಧಿಕಾರವು ಅಶ್ಲೀಲತೆ ಮತ್ತು ಅನೈತಿಕ ಕೃತ್ಯಗಳಲ್ಲಿ ಭಾಗಿಯಾಗಿರುವ ಎಲ್ಲ ಬಳಕೆದಾರರ ಖಾತೆಗಳನ್ನು ಟಿಕ್ಟಾಕ್ ನಿರ್ಬಂಧಿಸಿದೆ ಎಂದು ಹೇಳಿದರು. ಆದ್ದರಿಂದ ಅಪ್ಲಿಕೇಶನ್ ಮೇಲಿನ ನಿಷೇಧವನ್ನು ತೆಗೆದುಹಾಕಲಾಗುತ್ತಿದೆ. ಪಾಕಿಸ್ತಾನ ಸರ್ಕಾರದ ಈ ನಿರ್ಧಾರವು ಚೀನಾ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವ ಧೈರ್ಯವನ್ನು ಹೊಂದಿಲ್ಲ ಎಂದು ತೋರಿಸುತ್ತದೆ. ಪಾಕಿಸ್ತಾನವು ಟಿಕ್ಟಾಕ್ ಅನ್ನು ನಿಷೇಧಿಸಿ ಕೆಲವೇ ದಿನಗಳಲ್ಲಿ ಇಂತಹ ಕ್ರಮ ಕೈಗೊಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಭಾರತದಲ್ಲಿ ಮತ್ತೆ ಪಠಾಣ್‌ಕೋಟ್ ಭಾಗ -2 ಪುನರಾವರ್ತಿಸಲು ನಡೆದಿದೆ ಯತ್ನ!

ನಿರಂತರವಾಗಿ ಸ್ವೀಕರಿಸಲಾಗುತ್ತಿದ್ದ ದೂರುಗಳು: 
ಟೆಲಿಕಾಂ ಅಧಿಕಾರಿಗಳು ಟಿಕ್‌ಟಾಕ್ ಬಗ್ಗೆ ನಿರಂತರವಾಗಿ ದೂರುಗಳನ್ನು ಸ್ವೀಕರಿಸುತ್ತಿದ್ದರು. ಚೀನೀ ಆ್ಯಪ್‌ನಲ್ಲಿ (Chainese Apps) ಅಶ್ಲೀಲ ಚಿತ್ರಗಳನ್ನು ಹರಡಲಾಗಿದೆ ಎಂದು ಆರೋಪಿಸಲಾಯಿತು. ಈ ಕಾರಣದಿಂದಾಗಿ ಸುಮಾರು 10 ದಿನಗಳ ಹಿಂದೆ ಟಿಕ್‌ಟಾಕ್ ಅನ್ನು ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರವು ಹಲವಾರು ತಿಂಗಳುಗಳಿಂದ ಆ್ಯಪ್‌ಗೆ ಎಚ್ಚರಿಕೆಯನ್ನೂ ನೀಡಿತ್ತು, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈ ಅಪ್ಲಿಕೇಶನ್ ಅನ್ನು ದೇಶಾದ್ಯಂತ ನಿರ್ಬಂಧಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿತ್ತು.

ಚೀನಾದ ವೀಡಿಯೊ ಹಂಚಿಕೆ ಆ್ಯಪ್ TikTok ನಿಷೇಧಿಸಿದ ಪಾಕಿಸ್ತಾನ

ಇದಕ್ಕೂ ಮುನ್ನ ಭಾರತ ಸೇರಿದಂತೆ ಕೆಲವು ದೇಶಗಳು ಈಗಾಗಲೇ ಬೈಟ್‌ಡ್ಯಾನ್ಸ್ ಕಂಪನಿಯ ಟಿಕ್‌ಟಾಕ್ ಅನ್ನು ನಿಷೇಧಿಸಿವೆ. ಗಡಿ ವಿವಾದದ ಹಿನ್ನೆಲೆಯಲ್ಲಿ ಭಾರತವು ಅನೇಕ ಚೀನೀ ಆ್ಯಪ್‌ಗಳನ್ನು ನಿಷೇಧಿಸಿದೆ ಮತ್ತು ಭಾರತವು ತನ್ನ ನಿರ್ಧಾರಕ್ಕೆ ಬದ್ಧವಾಗಿದೆ. ಆದರೆ ಪಾಕಿಸ್ತಾನವು ಈ ಧೈರ್ಯವನ್ನು ತೋರಿಸುವುದು ಅಸಾಧ್ಯ, ಏಕೆಂದರೆ ಪಾಕಿಸ್ತಾನವು ಚೀನಾದ ಕೃಪಾಕಟಾಕ್ಷದ ಮೇಲೆ ಬೆಳೆಯುತ್ತದೆ. ಚೀನಾದ ಕಂಪನಿಗಳಿಗೆ ಅಲ್ಲಿ ಏನು ಬೇಕಾದರೂ ಮಾಡುವ ಅವಕಾಶವಿದೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನ ಕೆಲಸದಲ್ಲಿ ತೊಡಗಿದ್ದ ಚೀನಾದ ಕಾರ್ಮಿಕರಿಂದ ಸ್ವಲ್ಪ ಸಮಯದ ಹಿಂದೆ ಪಾಕಿಸ್ತಾನಿ ಸೈನಿಕನನ್ನು ಥಳಿಸಲಾಯಿತು ಎಂದು ತಿಳಿದುಬಂದಿದೆ, ಆಗಲೂ ಇಮ್ರಾನ್ ಖಾನ್ ಸರ್ಕಾರ ಮತ್ತು ಸೈನ್ಯ ಮೌನವಾಗಿತ್ತು ಎಂಬುದು ನಿಜಕ್ಕೂ ವಿಷಾಧನೀಯ ಸಂಗತಿ.

Trending News