Twitterನಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದ #BoycottNetflix! ಕಾರಣ ಇಲ್ಲಿದೆ

ಟ್ವಿಟ್ಟರ್ ಬಳಕೆದಾರರು #BoycottNetflix ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, Netflix ವಿರುದ್ಧ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಕೆಲವರು Netflix ಮೇಲೆ ಸರ್ಕಾರದ ನಿಯಂತ್ರಣಕ್ಕೆ ಬೇಡಿಕೆ ಇಡುತ್ತಿದ್ದರೆ, ಇನ್ನುಳಿದವರು Netflix ಅನ್ನು ನಿರ್ಬಂಧಿಸಲು ಬೇಡಿಕೆ ಇಡುತ್ತಿದ್ದಾರೆ.

Last Updated : Nov 22, 2020, 12:56 PM IST
  • Netflix ವಿರುದ್ಧ ದೇವಾಲಯದಲ್ಲಿ ಚುಂಬನ ದೃಶ್ಯ ತೋರಿಸಿದ ಆರೋಪ.
  • Twitterನಲ್ಲಿ #BoycottNetflix ಟ್ರೆಂಡಿಂಗ್.
  • Netflix ವಿರುದ್ಧ ಅಸಮಾಧಾನ ಹೊರಹಾಕುತ್ತಿರುವ ಟ್ವಿಟರ್ಥಿಗಳು.
Twitterನಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದ #BoycottNetflix! ಕಾರಣ ಇಲ್ಲಿದೆ title=

ನವದೆಹಲಿ: ದೇವಸ್ಥಾನದ ಒಳಗಡೆ ಪ್ರೇಮಿಗಳ ನಡುವೆ ಚುಂಬನ ದೃಶ್ಯಗಳನ್ನು ತೋರಿಸಿ ನೆಟ್‌ಫ್ಲಿಕ್ಸ್ (Netflix) ಹಿಂದೂ ವಿರೋಧಿ ವಿಷಯವನ್ನು ತೋರಿಸಿದೆ ಎಂದು ಮತ್ತೊಮ್ಮೆ ಆರೋಪಿಸಲಾಗಿದೆ. ಏತನ್ಮಧ್ಯೆ, #BoycottNetflix ಸಹ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ಆಗಿದೆ.

ಇದನ್ನು ಓದಿ- ಭಾರತದಲ್ಲಿ Netflix ಉಚಿತವಾಗಿ ಬಳಸಿ, ಸಂಪೂರ್ಣ ವಿವರ ಇಲ್ಲಿದೆ

ಟ್ವಿಟರ್ ಬಳಕೆದಾರರು #BoycottNetflix ಮೇಲೆ ತಮ್ಮ ಪ್ರತಿಕ್ರಿಯೆಗಳನ್ನು ನೀಡಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದಾರೆ ಕೆಲವರು ನೆಟ್‌ಫ್ಲಿಕ್ಸ್ ಮೇಲೆ ಸರ್ಕಾರದ ನಿಯಂತ್ರಣಕ್ಕೆ ಒತ್ತಾಯಿಸುತ್ತಿದ್ದರೆ,  ಕೆಲವರು ನೆಟ್‌ಫ್ಲಿಕ್ಸ್‌ ಕ್ಷಮೆಯಾಚಿಸಬೇಕು ಎನ್ನುತ್ತಿದ್ದಾರೆ.  ಮತ್ತೆ ಕೆಲವರು  ನೆಟ್‌ಫ್ಲಿಕ್ಸ್ ಅನ್ನು ನಿಷೇಧಿಸುವ ಬಗ್ಗೆ ಮಾತನಾಡುತ್ತಿದ್ದಾರೆ.

ದೂರು ಸಲ್ಲಿಸಿದ ಬಿಜೆಪಿ ಯುವ ಮೋರ್ಚಾ
ಏತನ್ಮಧ್ಯೆ, ಬಿಜೆಪಿ (BJP) ಯುವ ಮೋರ್ಚಾ ರಾಷ್ಟ್ರೀಯ ಸಚಿವ ಗೌರವ್ ತಿವಾರಿ ಮಧ್ಯಪ್ರದೇಶ ಪೊಲೀಸರಿಗೆ ದೂರು ನೀಡಿದ್ದಾರೆ. ವೆಬ್ ಸರಣಿ ನಿರ್ಮಾಪಕ ನೆಟ್‌ಫ್ಲಿಕ್ಸ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ  ಗೌರವ್ ಶನಿವಾರ ರೇವಾ ಎಸ್‌ಎಸ್‌ಪಿಗೆ ಕಂಪ್ಲೇಂಟ್ ಸಲ್ಲಿಸಿದ್ದಾರೆ. ನೆಟ್‌ಫ್ಲಿಕ್ಸ್  ಇಂಡಿಯಾ ಅಧಿಕಾರಿಗಳಾದ ಮೋನಿಕಾ ಶೆರ್ಗಿಲ್ ಮತ್ತು ಅಂಬಿಕಾ ಖುರಾನಾ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ 

ಒಂದು ವೇಳೆ ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ವೀಡಿಯೊವನ್ನು ತೆಗೆದುಹಾಕದಿದ್ದರೆ, ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ ಗೌರವ್ ತಿವಾರಿ ಹೇಳಿದ್ದಾರೆ. ಈ ವೆಬ್ ಸರಣಿ ಸರಣಿಯು ವಿಕ್ರಮ್ ಸೇಠ್ ಬರೆದ ಪುಸ್ತಕವನ್ನು ಆಧರಿಸಿದೆ. ಇದನ್ನು ನೆಟ್‌ಫ್ಲಿಕ್ಸ್ ರಚಿಸಿದೆ. ಕಾರ್ಯಕ್ರಮದ ಎರಡನೇ ಸಂಚಿಕೆಯಲ್ಲಿ, ಹಿಂದೂ ಹುಡುಗಿಯ ಮುಸ್ಲಿಂ ಹುಡುಗನ ಚುಂಬನ ದೃಶ್ಯವನ್ನು ತೋರಿಸಲಾಗಿದೆ. ಈ ಚುಂಬನ ದೃಶ್ಯವನ್ನು ಮಧ್ಯಪ್ರದೇಶದ ಮಹೇಶ್ವರ ಘಾಟ್‌ನಲ್ಲಿರುವ ಶಿವ ದೇವಾಲಯ ಆವರಣದಲ್ಲಿ ತೋರಿಸಲಾಗಿದೆ.

ಇದು ಹಿಂದೂ ಭಾವನೆಗಳನ್ನು ಘಾಸಿಗೊಳಿಸುವ ಮತ್ತು ಲವ್ ಜಿಹಾದ್ ಅನ್ನು ಉತ್ತೇಜಿಸುವ ನಾಚಿಕೆಗೇಡಿನ ಪ್ರಯತ್ನವಾಗಿದೆ, ಇದನ್ನು ಹಿಂದೂ ಸಮಾಜವು ಎಂದಿಗೂ ಸಹಿಸುವುದಿಲ್ಲ. ಮಹೇಶ್ವರ ಶಿಲಾಯುಗದ ಅಸಂಖ್ಯಾತ ಶಿವಲಿಂಗಗಳನ್ನು ಹೊಂದಿದೆ. ರಾಣಿ ಅಹಲ್ಯಾಬಾಯಿ ಹೊಳ್ಕರ್ ಆಳ್ವಿಕೆಯಲ್ಲಿ ಇದು ಹೆಚ್ಚು ಧಾರ್ಮಿಕ ಮಹತ್ವವನ್ನು ಪಡೆದಿತ್ತು. ಮಹೇಶ್ವರ ಘಾಟ್‌ನಲ್ಲಿ ಚುಂಬನ ದೃಶ್ಯವನ್ನು ತೋರಿಸಿ, ಅಂತಹ ಮಹಾನ್ ಆಡಳಿತಗಾರ್ತಿಯ ಕರ್ಮಭೂಮಿ ಮತ್ತು ಹಿಂದೂ ನಂಬಿಕೆಯ ಸಂಕೇತವಾಗಿರುವ ಸ್ಥಾನವ ವಿರುದ್ಧ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

Trending News