Viral video: ಏಕಕಾಲಕ್ಕೆ ಈ ಮಹಿಳೆ 18 ಮಕ್ಕಳ ಗರ್ಭಿಣಿ! ವಿಡಿಯೋ ನೋಡಿ ಶಾಕ್‌ ಆಗ್ತೀರ

Viral video today: ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿದೆ, ಇನ್ನೂ ಈ ವಿಡಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ.

Written by - Zee Kannada News Desk | Last Updated : Sep 19, 2024, 12:13 PM IST
  • ಪ್ರತಿಯೊಬ್ಬ ಮಹಿಳೆಯು ಮಗುವಿಗೆ ಜನ್ಮ ನೀಡಬೇಕು ಮತ್ತು ಆ ಮಗು ತನ್ನ ತೊಡೆಯ ಮೇಲೆ ಆಡಬೇಕೆಂದು ಬಯಸುತ್ತಾಳೆ.
  • ಒಂದು ಕಥೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
  • ಮಹಿಳೆಯೊಬ್ಬರು 18 ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎನ್ನುವ ಸುದ್ದಿ ಈ ವೈರಲ್‌ ವಿಡಯೋದ ಮೂಲಕ ಹರಿದಾಡುತ್ತಿದೆ.
Viral video: ಏಕಕಾಲಕ್ಕೆ ಈ ಮಹಿಳೆ 18 ಮಕ್ಕಳ ಗರ್ಭಿಣಿ! ವಿಡಿಯೋ ನೋಡಿ ಶಾಕ್‌ ಆಗ್ತೀರ title=

Viral video today: ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿದೆ, ಇನ್ನೂ ಈ ವಿಡಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ.

ಯಾವುದೇ ಮಹಿಳೆಗೆ ತಾಯಿಯಾಗುವುದು ತುಂಬಾ ಆಹ್ಲಾದಕರ ಅನುಭವ. ಪ್ರತಿಯೊಬ್ಬ ಮಹಿಳೆಯು ಮಗುವಿಗೆ ಜನ್ಮ ನೀಡಬೇಕು ಮತ್ತು ಆ ಮಗು ತನ್ನ ತೊಡೆಯ ಮೇಲೆ ಆಡಬೇಕೆಂದು ಬಯಸುತ್ತಾಳೆ. ಆದರೆ ಪ್ರತಿ ಮಹಿಳೆಗೆ ಈ ಆಸೆ ಈಡೇರುವುದಿಲ್ಲ. ಅನೇಕ ಮಹಿಳೆಯರು ಮಕ್ಕಳಿಗಾಗಿ ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ. ಅನೇಕ ಚಿಕಿತ್ಸೆಗಳ ಮೊರೆ ಹೋಗುತ್ತಾರೆ. ಒಂದೆಡೆ ದೇವರನ್ನು ಪೂಜಿಸುತ್ತಲೇ ವಿಜ್ಞಾನವನ್ನು ನಂಬಿ ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರೂ ಕೆಲವು ಮಹಿಳೆಯರು ತಮ್ಮ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ.

ಇದನ್ನೂ ಓದಿ: Viral Video: ಮಾಡೆಲ್‌ ನಂತೆ ಮೇಕ್‌ ಓವರ್‌! ಅಂಬಾನಿ- ಅದಾನಿ ಅವರ ಶ್ವಾನವನ್ನೂ ಬೀಟ್‌ ಒಡೆಯುತ್ತೆ ಈ ನಾಯಿ..ವಿಡಿಯೋ ನೋಡಿ ಜೀವನದ ಮೇಲೆ ಜಿಗುಪ್ಸೆ ಬರೋದು ಗ್ಯಾರಂಟಿ

ತಾಯಿಯಾಗುವ ಆಸೆಯನ್ನು ಈಡೇರಿಸಿಕೊಳ್ಳಲು ಆಸ್ಪತ್ರೆಗೆ ಹೋಗಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಅಂತಹ ಮಹಿಳೆಯರು ಭಾವಿಸುತ್ತಾರೆ. ಹೀಗೆ ಯಾವುದಾದರೊಂದು ರೂಪದಲ್ಲಿ ತಾಯಿಯಾಗುವ ತಮ್ಮ ಆಸೆಯನ್ನು ಈಡೇರಿಸಿಕೊಳ್ಳುತ್ತಾರೆ. ಗರ್ಭಿಣಿಯಾಗುವ ಸಮಯದಲ್ಲಂತೂ ಮಹೀಲೆಯರ ಆನಂದಕ್ಕೆ ಪರಿವೇ ಇರುವುದಿಲ್ಲ. ಆದರೆ ಕೆಲವು ಮಹಿಳೆಯರ ಗರ್ಭಾವಸ್ಥೆಯ ಸಂದರ್ಭದಲ್ಲಿ ಅವರ ಕನಸಿನಲ್ಲಿಯೂ ಊಹಿಸಲಾಗದ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಅಂತಹದ್ದೇ ಒಂದು ಕಥೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮಹಿಳೆಯೊಬ್ಬರು 18 ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎನ್ನುವ ಸುದ್ದಿ ಈ ವೈರಲ್‌ ವಿಡಯೋದ ಮೂಲಕ ಹರಿದಾಡುತ್ತಿದ್ದು, ಈ ವಿಡಯೋದ ಹಿಂದಿನ ಅಸಲಿ ಸತ್ಯವೇ ಬೇರೆಯದ್ದೆ ಇದೆ. 

ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿದೆ. ಇದನ್ನು ನೋಡಿದ ಜನರು ಈ ಹೆಣ್ಣು ಗರ್ಭ ಧರಿಸಿದ್ದಾಳೆ, ಇದರೊಂದಿಗೆ 18 ಮಕ್ಕಳಿಗೆ ಜನ್ಮ ನೀಡಲಿದ್ದಾಳೆ ಎನ್ನುವ ಸುದ್ದಿಯನ್ನು ಹಬ್ಬಿಸಿದ್ದರು. ಈ ವಿಡಿಯೋ ಪ್ರಕಾರ ಈ ಮಹಿಳೆ ಅಮೆರಿಕದ ಟೆಕ್ಸಾಸ್ ನಿವಾಸಿ. ವಿಡಿಯೋದಲ್ಲಿ ಪ್ರೆಗ್ನೆನ್ಸಿ ಬಗ್ಗೆ ಬಂದಿರುವ ಸುದ್ದಿ ಸಂಪೂರ್ಣ ಸುಳ್ಳು. ಅಷ್ಟಕ್ಕೂ ಗರ್ಭಿಣಿಯ ಹೊಟ್ಟೆಯಂತೆ ಗೋಚರವಾಗುವ ಈ ಹೆಂಗಸಿನ ಹೊಟ್ಟೆಯಲ್ಲಿರುವುದು ಮಗುವಲ್ಲ, ಹೊರತಾಗಿ ಗಡ್ಡೆ. 

ಇದನ್ನೂ ಓದಿ: Viral video: "ಕಾಲೆ ಇಲ್ಲ ನಿಂಗೆ ಚಪ್ಪಲಿ ಯಾಕ್ ಬೇಕೋ ತಮ್ಮ"..? ಮಹಿಳೆಯ ಚಪ್ಪಲಿ ಕದ್ದ ಕಳ್ಳ ಹಾವು ವಿಡಿಯೋ ನೋಡಿ, ಎದ್ದು ಬಿದ್ದು ನಗ್ತಿರ!

ಈ ವೀಡಿಯೋ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅವರು ಸಾವನ್ನಪ್ಪಿದ್ದಾರೆಂದು ಕೆಲವರು ಕಾಮೆಂಟ್‌ ಮಾಡುತ್ತಿದ್ದಾರೆ. ಅಲ್ಲದೆ ಮಹಿಳೆ ತನ್ನ ಪಕ್ಕದಲ್ಲಿ ಕುಳಿತಿರುವ ಪುರುಷನೊಂದಿಗೆ ತನ್ನ ಸ್ಥಿತಿಯನ್ನು ವಿವರಿಸುವ ಮತ್ತೊಂದು ವೀಡಿಯೊದಲ್ಲಿ, ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಕೆಲವೆ ದಿನಗಳ ನಂತರ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಲಕ್ಷಾಂತರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ವೀಡಿಯೊ ಕುರಿತು ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, 'ಮಹಿಳೆಗೆ ಉಸಿರಾಡಲು ಕಷ್ಟವಾಗುತ್ತದೆ. ಆದರೆ ಈ ವೀಡಿಯೊ ಎಷ್ಟು ನಿಜ ಎಂಬುದು ನಿಗೂಢವಾಗಿದ್ದರೂ, ಇದು ಗಂಭೀರ ಆರೋಗ್ಯ ಪರಿಸ್ಥಿತಿ  ಮತ್ತು ತಪ್ಪು ಮಾಹಿತಿಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ.ʼ ಎಂದಿದ್ದಾರೆ.

 
 
 
 

 
 
 
 
 
 
 
 
 
 
 

A post shared by Larus (@larus.world)

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News