PM Kisan nidhi status: ನಿಮ್ಮ ಖಾತೆಗೆ ಹಣ ಇನ್ನೂ ಬಂದಿಲ್ಲವೇ, ತಕ್ಷಣ ಹೀಗೆ ಮಾಡಿ

PM-Kisan Samman Nidhi ಯೋಜನೆಯಡಿ ಮೋದಿ ಸರ್ಕಾರ ಏಳನೇ ಕಂತಿನ ಹಣಕ್ಕೆ ಕಳುಹಿಸಲು ಪ್ರಾರಂಭಿಸಿದೆ.

Last Updated : Dec 15, 2020, 03:20 PM IST
  • ಪಿಎಂ ಕಿಸಾನ್ ಸಮ್ಮನ್ ನಿಧಿಗೆ ರೈತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ
  • ನಂತರ ಅರ್ಜಿಯನ್ನು ರಾಜ್ಯ ಸರ್ಕಾರ ಕಂದಾಯ ದಾಖಲೆ, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಮೂಲಕ ಪರಿಶೀಲಿಸುತ್ತದೆ
  • ರಾಜ್ಯ ಸರ್ಕಾರದ ಸಂಪೂರ್ಣ ತನಿಖೆಯ ನಂತರ ಎಫ್‌ಟಿಒ ಉತ್ಪತ್ತಿಯಾಗುತ್ತದೆ
PM Kisan nidhi status: ನಿಮ್ಮ ಖಾತೆಗೆ ಹಣ ಇನ್ನೂ ಬಂದಿಲ್ಲವೇ,  ತಕ್ಷಣ ಹೀಗೆ ಮಾಡಿ title=
File Image

ನವದೆಹಲಿ:  ರಬಿ ಬೆಳೆಗಳ ಬಿತ್ತನೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ರೈತರ ವೆಚ್ಚ ಗಣನೀಯವಾಗಿ ಹೆಚ್ಚಾಗುತ್ತದೆ. ರಸಗೊಬ್ಬರ, ಬೀಜಗಳು, ನೀರಾವರಿ ಸೇರಿದಂತೆ ಅನೇಕ ಚಟುವಟಿಕೆಗಳಿಗೆ ಹಣದ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಮೋದಿ ಸರ್ಕಾರವು ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ (PM-Kisan Samman Nidhi Scheme) ಅಡಿಯಲ್ಲಿ ನೀಡುತ್ತಿರುವ ಹಣದಿಂದ ರೈತರಿಗೆ ಸಾಕಷ್ಟು ಸಹಾಯ ಸಿಗುತ್ತಿದೆ. ಈ ಯೋಜನೆಯ ಮೂಲಕ ಸರ್ಕಾರವು ಮೂರು ಕಂತುಗಳಲ್ಲಿ ಒಟ್ಟು 6,000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಕಳುಹಿಸುತ್ತದೆ. ಈ ಯೋಜನೆಯಡಿ ಮೋದಿ ಸರ್ಕಾರ ಏಳನೇ ಕಂತಿನ ಹಣಕ್ಕೆ ಕಳುಹಿಸಲು ಪ್ರಾರಂಭಿಸಿದೆ.

ಖಾತೆಯ ಸ್ಥಿತಿಯನ್ನು ಪರಿಶೀಲಿಸಿ (Check account status):
ನಿಮ್ಮ ಖಾತೆಯನ್ನು ನೀವು ನಿರಂತರವಾಗಿ ಪರಿಶೀಲಿಸುತ್ತಿದ್ದು ಇಲ್ಲಿಯವರೆಗೆ ನಿಮ್ಮ ಖಾತೆಗೆ ಪಿಎಂ ಕಿಸಾನ್ (PM Kisan) ಯೋಜನೆಯ ಹಣ ಬಂದಿಲ್ಲದಿದ್ದರೆ, ನೀವು ಬ್ಯಾಂಕ್ ನೀಡಿರುವ ಖಾತೆಯ ಸ್ಟೇಟಸ್ ಅನ್ನು ಎಚ್ಚರಿಕೆಯಿಂದ ಓದಬೇಕು. ನಿಮ್ಮ ಖಾತೆಯಲ್ಲಿ ಎಫ್‌ಟಿಒ ರಚನೆಯಾಗಿದ್ದರೆ ಮತ್ತು ಪಾವತಿ ದೃಢೀಕರಣವು ಬಾಕಿ ಉಳಿದಿದ್ದರೆ ಇದರರ್ಥ ನೀವು ನೀಡಿದ ಮಾಹಿತಿಯನ್ನು ಸರ್ಕಾರ ದೃಢಪಡಿಸಿದೆ. ಹಣವನ್ನು ಶೀಘ್ರದಲ್ಲೇ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.

ಕಂತು ಶೀಘ್ರದಲ್ಲೇ ಬರಲಿದೆ :
ಅದೇ ಸಮಯದಲ್ಲಿ, ನಿಮ್ಮ ಖಾತೆಯಲ್ಲಿ Rft ಗೆ ರಾಜ್ಯ ಸರ್ಕಾರವು ಸಹಿ ಹಾಕಿ ಎಂದು ಬಂದಿದ್ದರೆ ಇದರರ್ಥ ರಾಜ್ಯ ಸರ್ಕಾರವು ವರ್ಗಾವಣೆಯ ಕೋರಿಕೆಯನ್ನು ಬ್ಯಾಂಕಿಗೆ ಕಳುಹಿಸಿದೆ . ನಿಮ್ಮ ಖಾತೆಗೆ ಹಣವನ್ನು ಕಳುಹಿಸಲು ರಾಜ್ಯ ಸರ್ಕಾರ ಬ್ಯಾಂಕನ್ನು ಕೇಳಿದೆ ಎಂದರ್ಥ. ಅಂತಹ ಪರಿಸ್ಥಿತಿಯಲ್ಲಿ ನೀವು ಭಯಪಡುವ ಅಗತ್ಯವಿಲ್ಲ, ಶೀಘ್ರದಲ್ಲೇ ನಿಮ್ಮ ಖಾತೆಯಲ್ಲಿ 2,000 ರೂ.ಗಳ ಕಂತು ಬರುತ್ತದೆ.

PM Kisan Samman Nidhi Yojana: ನಿಮ್ಮ ಹಣ ಎಲ್ಲಿ ಸಿಲುಕಿದೆ ಎಂದು ತಿಳಿಯಿರಿ

ಖಾತೆಗೆ ಹಣವನ್ನು ಪಡೆಯುವ ಪ್ರಕ್ರಿಯೆ :
ಪಿಎಂ ಕಿಸಾನ್ ಸಮ್ಮನ್ ನಿಧಿಗೆ ರೈತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ನಂತರ ಅರ್ಜಿಯನ್ನು ರಾಜ್ಯ ಸರ್ಕಾರ ಕಂದಾಯ ದಾಖಲೆ, ಆಧಾರ್ (Aadhaar) ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಮೂಲಕ ಪರಿಶೀಲಿಸುತ್ತದೆ. ನಿಮ್ಮ ಖಾತೆಯನ್ನು ರಾಜ್ಯ ಸರ್ಕಾರ ಪರಿಶೀಲಿಸುವವರೆಗೆ, ಹಣ ಬರುವುದಿಲ್ಲ. ರಾಜ್ಯ ಸರ್ಕಾರದ ಸಂಪೂರ್ಣ ತನಿಖೆಯ ನಂತರ ಎಫ್‌ಟಿಒ ಉತ್ಪತ್ತಿಯಾಗುತ್ತದೆ. ಇದರ ನಂತರ, ಹಣವನ್ನು ನೇರವಾಗಿ ಖಾತೆಗೆ ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ಸಮ್ಮನ್ ನಿಧಿಯಡಿಯಲ್ಲಿ, ಇದುವರೆಗೆ 22,594.78 ಕೋಟಿ ರೂ.ಗಳನ್ನು ಆರು ಕಂತುಗಳಲ್ಲಿ 2.35 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.

2019 ರಲ್ಲಿ ಪ್ರಾರಂಭಿಸಲಾದ ಯೋಜನೆ:
ಬೆಳೆ ಬೆಳೆಯುವ ವೇಳೆ ಕೃಷಿಗಾಗಿ ರೈತನಿಗೆ (Farmers) ಹಣ ಬೇಕಾದಾಗಲೆಲ್ಲಾ ಸ್ವಲ್ಪ ಹಣವನ್ನು ಪಡೆಯುವ ರೀತಿಯಲ್ಲಿ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು ವಿನ್ಯಾಸಗೊಳಿಸಿದೆ. ಪ್ರಧಾನಿ ಮೋದಿ ಅವರು 2019 ರಲ್ಲಿ ಪ್ರಧಾನಿ ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು ಘೋಷಿಸಿದರು. ಇದರೊಂದಿಗೆ ಈ ಯೋಜನೆಯನ್ನು 2019 ರ ಡಿಸೆಂಬರ್‌ನಿಂದ ಜಾರಿಗೆ ತರಲಾಗಿದೆ. ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗುತ್ತದೆ. ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಯಡಿ ಅರ್ಹ ರೈತ ಕುಟುಂಬಗಳನ್ನು ಗುರುತಿಸಿ ಸರ್ಕಾರದ ಸೌಲಭ್ಯ ತಲುಪಿಸುತ್ತವೆ.

PM Kisan ಯೋಜನೆಯ ಲಾಭಾರ್ಥಿ ರೈತರಿಗೆ ಸಿಗಲಿದೆ 10 ಸಾವಿರ ರೂ.

ನಿಮ್ಮ ಖಾತೆಗೆ ಇನ್ನೂ ಕೂಡ ಸರ್ಕಾರದ ಈ ಹಣ ತಲುಪದಿದ್ದರೆ ತಕ್ಷಣವೇ ದೂರು ನೀಡಿ:
PM ಕಿಸಾನ್ ಲ್ಯಾಂಡ್‌ಲೈನ್ ಸಂಖ್ಯೆಗಳು: 011—23381092, 23382401 
PM ಕಿಸಾನ್ ಹೊಸ ಸಹಾಯವಾಣಿ: 011-24300606 
PM ಕಿಸಾನ್ ಮತ್ತೊಂದು ಸಹಾಯವಾಣಿ: 0120-6025109 
PM ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266 
PM ಕಿಸಾನ್ ಸಹಾಯವಾಣಿ ಸಂಖ್ಯೆ: 155261ಗೆ ಕರೆ ಮಾಡಿ ಅಥವಾ ಇ-ಮೇಲ್ ID: pmkisan-ict@gov.in ಗೆ ಮೇಲ್ ಮಾಡುವ ಮೂಲಕ ದೂರು ನೀಡಬಹುದು.

Trending News