ನವದೆಹಲಿ: Aashram-2 ಚಿತ್ರದಲ್ಲಿ ತನ್ನ ಮೋಹಕ ನಟನೆಗಾಗಿ ತ್ರೀಧಾ ಚೌಧರಿ ನಿರಂತರ ಸುದ್ದಿ ಮಾಡುತ್ತಲೇ ಇದ್ದಾಳೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ತ್ರೀಧಾ, ನಾನು ಬೋಲ್ಡ್ ದೃಶ್ಯಗಳಲ್ಲಿ ಪಾಲ್ಗೊಳ್ಳಲು ಹಿಂಜರಿಯುವುದಿಲ್ಲ. ಆದರೆ ಬ್ರಾಂಡ್ ಅನ್ನು ನೋಡಿದ ನಂತರವಷ್ಟೇ ಯಾರೊಬ್ಬರ ಜೊತೆಗೆ ಕೆಲಸ ಮಾಡಲು ಒಪ್ಪುತ್ತೇನೆ ಎಂದಿದ್ದರು. ಚಿತ್ರ ಅಥವಾ ಕಾರ್ಯಕ್ರಮದ ನಿರ್ದೇಶಕರು ಯಾರು ಎಂಬುದನ್ನು ಮೊದಲು ನೋಡುತ್ತೇನೆ ಎಂದು ತ್ರಿಧಾ ಹೇಳಿದ್ದರು. ಅಷ್ಟೇ ಅಲ್ಲ ಸಹನಟನ ನೇಚರ್ ಎಂದು ಎಂಬುದನ್ನು ಕೂಡ ನೋಡುತ್ತೇನೆ. ಎಲ್ಲವೂ ಕಥೆಯ ಭಾಗ ಎಂಬುದು ತಿಳಿದಿದೆ. ನಾನು ನನ್ನ ಕೆಲಸ ಮಾಡುತ್ತೇನೆ ಮತ್ತು ನಿರ್ಮಾಪಕರು ನನಗೆ ನನ್ನ ಕೆಲಸದ ಆಧಾರದ ಮೇಲೆ ಹಣ ನೀಡುತ್ತಾರೆ ಎಂದು ತ್ರಿಧಾ ಹೇಳಿದ್ದರು.
ಇದನ್ನು ಓದಿ- ಬಾಲಿವುಡ್ ಗೆ ಎಂಟ್ರಿ ಕೊಟ್ಟ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!
ಕೆಲ ಜನರು Aashram 2 ಚಿತ್ರದ ತಮ್ಮ ಬೋಲ್ಡ್ ದೃಶ್ಯಗಳನ್ನು ಮೆಚ್ಚಿಕೊಂಡಿದ್ದಾರೆ, ಕೆಲವರು ವಿರೋಧಿಸಿದ್ದಾರೆ. ಆದರೆ, ಎಲ್ಲರೂ ಒಮ್ಮೆಯಾದರು ಕ್ಯಾಮಾರಾ ಮುಂದೆ ಬರಬೇಕು ಎಂಬುದು ನನ್ನ ಆಗ್ರಹ ಹಾಗೂ ಪರ್ಫಾರ್ಮ್ ಮಾಡಬೇಕು. ಕೆಲಸ ಯಾವರೀತಿ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಆ ಬಳಿಕವಷ್ಟೇ ಟೀಕೆ ಅಥವಾ ಟಿಪ್ಪಣಿಗಳನ್ನು ಮಾಡಬೇಕು ಎಂದು ತ್ರೀಧಾ ಹೇಳಿದ್ದರು. ಆದರೆ, ಖ್ಯಾತ ಬಾಲಿವುಡ್(Bollywood) ನಟ ಬಾಬಿ ಡಿಯೋಲ್ ಜೊತೆಗೆ ಇಂಟಿಮೆಟ್ ಸೀನ್ ನಲ್ಲಿ ಪಾಲ್ಗೊಳ್ಳುವ ಮೊದಲು ತುಂಬಾ ಹೆದರಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ಆದರೆ ಬಾಬಿ ತಮ್ಮ ಜೊತೆಗೆ ಕೆಟ್ಟದಾಗಿ ವರ್ತಿಸುವುದಿಲ್ಲ ಎಂಬ ಭರವಸೆ ಕೂಡ ತಮಗಿತ್ತು ಎಂದು ತ್ರೀಧಾ ಹೇಳಿದ್ದಾರೆ.
ಇದನ್ನು ಓದಿ- ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಾಲಿವುಡ್ ನಟಿ ಆರ್ಯಾ ಬ್ಯಾನರ್ಜೀ
ಆದರೆ, ಯಾವುದೇ ಓರ್ವ ನಟನ ಜೊತೆಗೆ ಇಂಟಿಮೆಟ್ ಸೀನ್ ನಲ್ಲಿ ಪಾಲ್ಗೊಳ್ಳುವುದು ಇದೆ ಮೊದಲಲ್ಲ. ಈ ಮೊದಲು ಕೂಡ ತ್ರಿಧಾ ಹಲವು ನಟರ ಜೊತೆಗೆ ಭಾವನೆಗಳನ್ನು ಕೆಣಕುವ ದೃಶ್ಯಗಳಲ್ಲಿ ತ್ರೀಧಾ ಪಾಲ್ಗೊಂಡು ಲಿಪ್ ಲಾಕ್ ಮೂಡ ಮಾಡಿದ್ದಾರೆ.
ಇದನ್ನು ಓದಿ- Flashback 2020: ಇಹಲೋಕ ತ್ಯಜಿಸಿದ ಚಿತ್ರೋದ್ಯೋಮದ ಖ್ಯಾತನಾಮರು
ಆಶ್ರಮ ಚಿತ್ರಕ್ಕೂ ಮೊದಲು ತ್ರೀಧಾ, ವಿಕ್ರಂ ಭಟ್ ಅವರ ವೆಬ್ ಸಿರೀಸ್ 'ಸ್ಪಾಟ್ ಲೈಟ್' ನಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಚಿತ್ರದಲ್ಲಿ ತ್ರೀಧಾ ತಮ್ಮ ಸಹನಟ ಆರಿಫ್ ಜಕಾರಿಯಾ ಜೊತೆಗೆ ಲಿಪ್ ಲಾಕ್ ಮತ್ತು ಹಲವು ಭಾವನಾತ್ಮಕ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಬೋಲ್ಡ್ ಸೀನ್ ಗಳಲ್ಲಿ ಕಾಣಿಸಿಕೊಳ್ಳುವುದರಿಂದ ತಾವು ಹಿಂಜರಿಯುವುದಿಲ್ಲ ಎಂದು ತ್ರಿಧಾ ಈ ಮೊದಲು ಸಂದರ್ಶನವೊಂದರಲ್ಲಿ ಹೇಳಿದ್ದರು. ಏಕೆಂದರೆ ಪರದೆಯ ಮೇಲೆ ಕಾಣಿಸಿಕೊಳ್ಳುವ ರೀತಿ ಅವುಗಳನ್ನು ಚಿತ್ರೀಕರಿಸಲಾಗುವುದಿಲ್ಲ ಎಂದು ತ್ರೀಧಾ ಹೇಳಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದುಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.