ಬಾಲಿವುಡ್ ಗೆ ಎಂಟ್ರಿ ಕೊಟ್ಟ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..!

ಬಾಲಿವುಡ್ ನ ಖ್ಯಾತ ರ್ಯಾಪರ್ ಬಾದ್ ಷಾ ಹಾಡಿಗೆ ರಶ್ಮಿಕಾ ಹೆಜ್ಜೆ ಹಾಕಲು ರೆಡಿ

Last Updated : Dec 16, 2020, 04:50 PM IST
  • ಕನ್ನಡದ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ನಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ
  • ಯಾವುದೊ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿಲ್ಲ. ಬದಲಾಗಿ ಹಿಂದಿಯ ಆಲ್ಬಮ್ ಸಾಂಗ್ ಒಂದಕ್ಕೆ ಹೆಜ್ಜೆ ಹಾಕುತ್ತಿದ್ದಾರೆ
  • ಬಾಲಿವುಡ್ ನ ಖ್ಯಾತ ರ್ಯಾಪರ್ ಬಾದ್ ಷಾ ಹಾಡಿಗೆ ರಶ್ಮಿಕಾ ಹೆಜ್ಜೆ ಹಾಕಲು ರೆಡಿ
ಬಾಲಿವುಡ್ ಗೆ ಎಂಟ್ರಿ ಕೊಟ್ಟ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ..! title=

ಮುಂಬೈ: ಕನ್ನಡದ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ನಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಇವರು ಯಾವುದೊ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿಲ್ಲ. ಬದಲಾಗಿ ಹಿಂದಿಯ ಆಲ್ಬಮ್ ಸಾಂಗ್ ಒಂದಕ್ಕೆ ಹೆಜ್ಜೆ ಹಾಕುತ್ತಿದ್ದಾರೆ.

ಬಾಲಿವುಡ್ ನ ಖ್ಯಾತ ರ್ಯಾಪರ್ ಬಾದ್ ಷಾ ಹಾಡಿಗೆ ರಶ್ಮಿಕಾ(Rashmika Mandanna) ಹೆಜ್ಜೆ ಹಾಕಲು ರೆಡಿಯಾಗಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣಭಾರತದದ ಬೇರೆ ಚಿತ್ರರಂಗದಲ್ಲೂ ತನ್ನ ನಟನೆಯ ಮೂಲಕ ಮೋಡಿ ಮಾಡಿರುವ ಇವರು ಇದೀಗ ಮೊದಲ ಬಾರಿ ರ್ಯಪ್ ಸಾಂಗ್ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

No Objectionable Content On TV: ಆಕ್ಷೇಪಾರ್ಹ ಕಂಟೆಂಟ್ ಗೆ ಬಿತ್ತು ಬ್ರೇಕ್, ಜಾರಿಯಾಗಿದೆ ಈ ಆದೇಶ

ಇದೊಂದು ಬಿಗ್ ಬಜೆಟ್ ಆಲ್ಬಮ್ ಸಾಂಗ್ ಎನ್ನಲಾಗುತ್ತಿದ್ದು ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ನಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದ್ದು, ಇನ್ನು ಹಾಡಿನ ಚಿತ್ರೀಕರಣ ಚಂಡೀಗಢದಲ್ಲಿ ಆರಂಭಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಕುರಿತಾಗಿ ಆಲ್ಬಮ್ ಸಾಂಗ್ ತಂಡ ಈವರೆಗೂ ಯಾವುದೆ ಅಧಿಕೃತ ಮಾಹಿತಿನ್ನು ನೀಡಿಲ್ಲ.

Top 25 Global Instagram Influencer ಪಟ್ಟಿ ಸೇರಿದ ವಿರಾಟ್ - ಅನುಷ್ಕಾ

ಬಹುಭಾಷಾ ನಟಿ ರಾಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ ತನ್ನ ಸಿನಿ ಜರ್ನಿಯನ್ನು ಆರಂಭಿಸಿದ್ದು, ನಂತರ ತೆಲುಗಿನ ಗೀತಾ ಗೋವಿಂದಂ ಒಳಗೊಂಡಂತೆ ಭೀಷ್ಮ ಇತ್ಯಾದಿ ಸಿನಿಮಾ ಗಳ ಮೂಲಕ ದಕ್ಷಿಣ ಭಾರತದ ಸಿನಿರಸಿಕರ ಮನಗೆದ್ದಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ನಟಿ ಕಂಗನಾ...! ಈ ಭೇಟಿ ಮಹತ್ವವೇನು ಗೊತ್ತೇ ?

 

Trending News