ನವದೆಹಲಿ: ಪಕ್ಷಕ್ಕೆ ಖಾಯಂ ಅಧ್ಯಕ್ಷರನ್ನು ನೇಮಿಸಲು ಹೆಣಗುತ್ತಿರುವ ಕಾಂಗ್ರೆಸ್, ಇದೀಗ ಶೀಘ್ರದಲ್ಲೇ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಹೇಳಿಕೊಂಡಿದೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್(Congress) ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಧಾನವನ್ನು ಪಕ್ಷ ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Party will soon start the procedure to elect a new party president. Electoral college of Congress, AICC members, Congress workers & members will choose who's best suited. 99.9% of people including me want Rahul Gandhi to be elected as party president: Randeep Surjewala, Congress pic.twitter.com/FHlybFgcKK
— ANI (@ANI) December 18, 2020
'99.9% ಕಾಂಗ್ರೆಸ್ ಸದಸ್ಯರು ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ಕಾಣಲು ಬಯಸುತ್ತಾರೆ'
ಕಾಂಗ್ರೆಸ್ ಚುನಾವಣಾ ಕಾಲೇಜು, ಎಐಸಿಸಿ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ತಮಗೆ ಸೂಕ್ತ ಎನಿಸಿದವರನ್ನು ಕಾಂಗ್ರೆಸ್‌ನ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಿದ್ದಾರೆ ಎಂದು ಸುರ್ಜೇವಾಲಾ ಹೇಳಿದ್ದಾರೆ.
ರೈತರ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರದಿಂದ ಮತ್ತೆ ಬರಲಿದೆ ಹಣ: ಯಾಕೆ? ಇಲ್ಲಿದೆ ಮಾಹಿತಿ
ಇದೇ ವೇಳೆ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಬಹುದು ಎಂಬ ಪ್ರಶ್ನೆಗೆ ಸೂಚ್ಯವಾಗಿ ಉತ್ತರಿಸಿರುವ ಸುರ್ಜೇವಾಲಾ, ನನ್ನನ್ನೂ ಒಳಗೊಂಡಂತೆ ಪಕ್ಷದ ಶೇ. 99.9ರಷ್ಟು ಜನ ರಾಹುಲ್ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಲಿ ಎಂದು ಬಯಸಿದ್ದಾರೆ ಎಂದು ಹೇಳಿದರು.
ರೈಲ್ವೆ ಪ್ರಯಾಣದಲ್ಲಿ ಇನ್ಮುಂದೆ ಇರಲ್ಲ ವೇಟಿಂಗ್ ಲಿಸ್ಟ್! ಯಾಕೆ ಗೊತ್ತಾ?
ಅದಾಗ್ಯೂ ಸಂಪೂರ್ಣ ಕಾಂಗ್ರೆಸ್ ಕುಟುಂಬ ನೂತನ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಿದ್ದು, ಅಧ್ಯಕ್ಷರು ಯಾರಾಗಲಿದ್ದಾರೆ ಎಂಬುದಕ್ಕೆ ಶೀಘ್ರವೇ ಉತ್ತರ ಸಿಗಲಿದೆ ಎಂದು ಸುರ್ಜೇವಾಲಾ ನುಡಿದಿದ್ದಾರೆ.
'ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ': ರೈತರಿಗೆ ಪ್ರಧಾನಿ ಮೋದಿ ಮನವಿ
ನಾಳೆ ಕಾಂಗ್ರೆಸ್ ಭಿನ್ನಮತೀಯ ನಾಯಕರನ್ನು ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಮಾಡಲಿದ್ದು, ಅದಕ್ಕೂ ಮೊದಲೇ ಸುರ್ಜೇವಾಲಾ ಪಕ್ಷಕ್ಕೆ ಖಾಯಂ ಅಧ್ಯಕ್ಷರ ನೇಮಕದ ಕುರಿತು ಮಾತನಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
PUBG Mobile India Relaunch:ರೀಲಾಂಚ್ ಕುರಿತು RTI ಗೆ ಉತ್ತರಿಸಿದ ಸರ್ಕಾರ ಹೇಳಿದ್ದೇನು?