ಬೆಂಗಳೂರು: ಯಡಿಯೂರಪ್ಪ ಅವರೇ ಸಿ.ಎಂ ಆಗಿ ಮುಂದುವರೆಯುತ್ತಾರೆ ಎಂದು ಅಮಿತ್ ಶಾ ಹೇಳಿರುವುದು ಬರೀ ಬಾಯಿಮಾತು. ಆರ್.ಎಸ್.ಎಸ್ ನಾಯಕರು ಹೇಳುವ ಪ್ರಕಾರ ಏಪ್ರಿಲ್ ನಂತರ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸ್ತಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
ಇದನ್ನು ಓದಿ: 'ಬಿಜೆಪಿಯಲ್ಲಿ ಒಳಜಗಳ, ಭ್ರಷ್ಟಾಚಾರ, ತಾಂಡವದಿಂದ ಅಭಿವೃದ್ದಿ ಕೆಲಸಗಳು ದೂರವಾಗಿವೆ
'ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಮತ್ತು ನಾವು ಜೊತೆಗೂಡಿ ಗ್ರಾಮ ಪಂಚಾಯತಿ ಚುನಾವಣೆ ಎದುರಿಸಿದ್ದರಿಂದ ಶೇ.70 ಸ್ಥಾನ ಗೆದ್ದಿದ್ದೇವೆ. ಈ ಕಾರಣಕ್ಕಾಗಿ ನಿನ್ನೆ ನನ್ನನ್ನು ಭೇಟಿಯಾಗಿ ಧನ್ಯವಾದ ಹೇಳಿದರು. ಅವರ ಕಾಂಗ್ರೆಸ್ ಸೇರ್ಪಡೆ ವಿಚಾರ ಮಾತುಕತೆ ಹಂತದಲ್ಲಿದ್ದು ಮುಂದಿನ ಕೆಲವೇ ದಿನಗಳ ಒಳಗೆ ಅಂತಿಮಗೊಳ್ಳಲಿದೆ' ಎಂದರು.
ಯಡಿಯೂರಪ್ಪ ಅವರೇ ಸಿ.ಎಂ ಆಗಿ ಮುಂದುವರೆಯುತ್ತಾರೆ ಎಂದು @AmitShah ಹೇಳಿರುವುದು ಬರೀ ಬಾಯಿಮಾತು. ಆರ್.ಎಸ್.ಎಸ್ ನಾಯಕರು ಹೇಳುವ ಪ್ರಕಾರ ಏಪ್ರಿಲ್ ನಂತರ @BSYBJP ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸ್ತಾರಂತೆ. 2/4#Mysuru
— Siddaramaiah (@siddaramaiah) January 17, 2021
ಇದನ್ನು ಓದಿ: Siddaramaiah: 'ಬಿಜೆಪಿ ಸರ್ಕಾರ ಪಾಪದ ಕೂಸು, ಅನೈತಿಕವಾಗಿ ರಚನೆಯಾಗಿದೆ'
'ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಕುಲಶಾಸ್ತ್ರ ಅಧ್ಯಯನ ಮುಗಿದು ವರದಿ ಬರಲಿ. ಅದನ್ನು ಸಚಿವ ಸಂಪುಟ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಮನವಿಯನ್ನು ತಿರಸ್ಕರಿಸಿದರೆ ಹೋರಾಟ ಅನಿವಾರ್ಯ ಆಗಬಹುದು. ಈಗ ನಡೆಸುತ್ತಿರುವ ಹೋರಾಟಕ್ಕೆ ನನ್ನ ವಿರೋಧ ಖಂಡಿತಾ ಇಲ್ಲ. ಆದರೆ ಇದು ಹೋರಾಟ ಮಾಡುವ ಸಮಯವಲ್ಲ. ಸಮುದಾಯದ ಬಲಪ್ರದರ್ಶನ, ಹೋರಾಟ ಮಾಡಬೇಕಾದ ಸಂದರ್ಭಗಳು ಮುಂದೆ ಬರಲಿದೆ.ಕಾದು ನೋಡೋಣ. ಯಡಿಯೂರಪ್ಪ ಅವರೇ ಸಿ.ಎಂ ಆಗಿ ಮುಂದುವರೆಯುತ್ತಾರೆ ಎಂದು ಅಮಿತ್ ಶಾ ಹೇಳಿರುವುದು ಬರೀ ಬಾಯಿಮಾತು ಎಂದು ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ