Rocking Star: ಮಾಲ್ದೀವ್ಸ್ ನಲ್ಲಿ ರಾಕಿ ಭಾಯ್..! ನಿಮಗಿಷ್ಟವಾಗುತ್ತೆ ಈ ಫ್ಯಾಮಿಲಿ ಫೋಟೊ.!

ಕನ್ನಡದ  ಈ ಸುಪ್ರಸಿದ್ದ ನಟ ರಿಲ್ಯಾಕ್ಸ್ ಮೂಡಿಗೆ ಬಂದಿದ್ದಾರೆ. ಅಂದರೆ, ಫ್ಯಾಮಿಲಿ  ಜೊತೆ ಔಟಿಂಗ್  ಎಂಜಾಯ್ ಮಾಡ್ತಿದ್ದಾರೆ.  ಹೌದು.. ಯಶ್ (Yash) ಅಭಿಮಾನಿಗಳಿಗೆ ಗೊತ್ತಿರುವಂತೆಯೇ ರಾಕಿ ಭಾಯ್ ಫ್ಯಾಮಿಲಿ ಜೊತೆ ಮಾಲ್ಡಿವ್ಸ್ ನಲ್ಲಿದ್ದಾರೆ.

Last Updated : Jan 19, 2021, 11:44 AM IST
  • ಮಾಲ್ಡೀವ್ಸ್ ನಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿರುವ ಕನ್ನಡದ ರಾಕಿ ಭಾಯ್
  • ನೀಲಿ ಕಡಲ ತೀರದಲ್ಲಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡುತ್ತಿರುವ ಯಶ್
  • ಸುಂದರ ಮಾಲ್ಡೀವ್ಸ್ ನಲ್ಲಿ ಅಯರಾ, ಯಥರ್ವ ಜೊತೆ ಮೋಜು ಮಸ್ತಿ..
Rocking Star: ಮಾಲ್ದೀವ್ಸ್ ನಲ್ಲಿ ರಾಕಿ ಭಾಯ್..! ನಿಮಗಿಷ್ಟವಾಗುತ್ತೆ ಈ ಫ್ಯಾಮಿಲಿ ಫೋಟೊ.! title=
ಮಾಲ್ಡೀವ್ಸ್ ನಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿರುವ ಕನ್ನಡದ ರಾಕಿ ಭಾಯ್ (photo

ಬೆಂಗಳೂರು: ರಾಕಿ ಭಾಯ್ ಈಗ ಖುಷಿಯಲ್ಲಿದ್ದಾರೆ. ಕೆಜಿಎಫ್ 2 (KGF 2 ) ಚಿತ್ರದ ಟೀಸರ್ ಗೆ  ಸಿಕ್ಕ ಜನಸ್ಪಂದನೆ ನೋಡಿ ಅವರ ಖುಷಿ ನೂರ್ಮಡಿಯಾಗಿದೆ.  ಟೀಸರ್ ಈಗಾಗಲೇ ದಾಖಲೆ ಸೃಷ್ಟಿಸಿದೆ. ಇದರ ಜೊತೆಗೆ ಕೆಜಿಎಫ್ 2 ಹೇಗಿರಬಹುದು ಎಂಬ ಕುತೂಹಲ ಸಿಕ್ಕಾಪಟ್ಟೆ ಹೆಚ್ಚಾಗಿದೆ. 

ಈ ನಡುವೆಯೇ  ಕನ್ನಡದ  ಈ ಸುಪ್ರಸಿದ್ದ ನಟ ರಿಲ್ಯಾಕ್ಸ್ ಮೂಡಿಗೆ ಬಂದಿದ್ದಾರೆ. ಅಂದರೆ, ಫ್ಯಾಮಿಲಿ  ಜೊತೆ ಔಟಿಂಗ್  ಎಂಜಾಯ್ ಮಾಡ್ತಿದ್ದಾರೆ.  ಹೌದು.. ಯಶ್ (Yash) ಅಭಿಮಾನಿಗಳಿಗೆ ಗೊತ್ತಿರುವಂತೆಯೇ ರಾಕಿ ಭಾಯ್ ಫ್ಯಾಮಿಲಿ ಜೊತೆ ಮಾಲ್ಡಿವ್ಸ್ (Maldives )ನಲ್ಲಿದ್ದಾರೆ. ಮಾಲ್ಡಿವ್ಸ್ ನಿಂದಲೇ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.  ಎಲ್ಲರೂ ಇಷ್ಟ ಪಡುವ  ಈ ಫ್ಯಾಮಿಲಿ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ. 

ಇದನ್ನೂ ಓದಿ Rocking Star Yash: ಕಿರುತೆರೆಗೆ ಎಂಟ್ರಿ ಕೊಟ್ಟ ರಾಕಿಂಗ್‌ ಸ್ಟಾರ್ ಯಶ್‌ 'ತಾಯಿ ಪುಷ್ಪಾ'..!

ರಾಕಿ ಬಾಯ್ ಮುದ್ದಿನ ಮಗಳು ಆಯರಾ ಜೊತೆ  ಫೋಟೋ ಕ್ಲಿಕ್ಕಿಸಿದ್ದಾರೆ.  ಕ್ಯೂಟ್ ಆಗಿರುವ ಮಗ ಯಥರ್ವ ಜೊತೆ ಕಡಲ ತೀರದಲ್ಲಿ ಮಸ್ತಿ ಮಾಡುತ್ತಿದ್ದಾರೆ.  ಮನದನ್ನೆ ರಾಧಿಕಾ ಪಂಡಿತ್ ಕೂಡಾ ಜೊತೆಯಲ್ಲಿದ್ದು, ಪತಿ ಮತ್ತು ಮಕ್ಕಳ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಬಿಳಿ ಶರ್ಟ್ ಮತ್ತು ಆಕರ್ಷಕ ಗಾಗಲ್ಸ್ ಜೊತೆ ಮಿಂಚುತ್ತಿದ್ದಾರೆ ರಾಕಿ ಭಾಯ್. ರಾಧಿಕಾ ಪಂಡಿತ್ (Radhika Pandith) ಕೂಡಾ ಪತಿಗೆ ಸಾತ್ ಕೊಟ್ಟಿದ್ದಾರೆ. ಯಶ್ ಹಿಂದೆ ಒಂದು ವಿಮಾನ ನಿಂತಂತೆ ಕಾಣಿಸುತ್ತಿದೆ. 

ಕೆಜಿಎಫ್ 2  (KGF 2) ಬಿಡುಗಡೆಗೆ ಮುನ್ನ ಶೇರ್ ಆದ ಯಶ್ ಫ್ಯಾಮಿಲಿ ಫೋಟೋಗೆ ಅಭಿಮಾನಿಗಳು  (fans) ಭರ್ಜರಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಈ ಫ್ಯಾಮಿಲಿ ಫೋಟೋ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಹಾಕಿದೆ. 

ಇದನ್ನೂ ಓದಿ : ಯಶ್ ಹುಟ್ಟುಹಬ್ಬಕ್ಕೆ ಪುತ್ರಿ 'ಐರಾ' ಕ್ಯೂಟ್ ವಿಶ್

ಕೆಜಿಎಫ್ 2 ಸದ್ಯವೇ ಬಿಡುಗಡೆಯಾಗಲಿದೆ. ಟೀಸರ್ ಈಗಾಗಲೇ ಸಂಚಲನ ಸೃಷ್ಟಿಸಿದೆ. ಫಿಲ್ಮಿ (Film) ದುನಿಯಾದಲ್ಲಿ ಯಶ್ ಗೆ ಮೆಚ್ಚುಗೆ ಯ ಮಳೆ ಸುರಿಯುತ್ತಿದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News