ಯಶ್ ಹುಟ್ಟುಹಬ್ಬಕ್ಕೆ ಪುತ್ರಿ 'ಐರಾ' ಕ್ಯೂಟ್ ವಿಶ್

ಈ ವರ್ಷ ಯಶ್ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಸಜ್ಜಾಗಿರುವ ಅಭಿಮಾನಿಗಳು, ಬೆಂಗಳೂರಿನ ನಾಯಂಡಹಳ್ಳಿ ಬಳಿಯ ನಂದಿ ಲಿಂಕ್‌ ಗ್ರೌಂಡ್‌ನಲ್ಲಿ ಸಕಲ ಸಿದ್ಧತೆ ನಡೆಸಿದ್ದಾರೆ.

Last Updated : Jan 8, 2020, 06:05 AM IST
ಯಶ್ ಹುಟ್ಟುಹಬ್ಬಕ್ಕೆ ಪುತ್ರಿ 'ಐರಾ' ಕ್ಯೂಟ್ ವಿಶ್ title=
File Image

ಬೆಂಗಳೂರು: ಇಂದು ಸ್ಯಾಂಡಲ್ ವುಡ್ ಕಡೆ ದೇಶವೇ ತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ಒಂದೆಡೆ 'ರಾಕಿ ಭಾಯ್‌' ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಪ್ಲಾನ್ ಮಾಡಿದ್ದಾರೆ. ಇನ್ನೊಂದೆಡೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಯಶ್ ಪತ್ನಿ ರಾಧಿಕಾ ಪಂಡಿತ್ ಮಗಳೊಂದಿಗೆ 'ಯಶ್' ಜನ್ಮದಿನಕ್ಕೆ ಒಂದು ಸರ್ಪ್ರೈಸ್ ನೀಡಿದ್ದಾರೆ.

ಈ ವರ್ಷದ 'ಯಶ್' ಜನ್ಮದಿನಕ್ಕೆ ಕೇಕ್ ತಯಾರಿಸಲು ಅಮ್ಮ ರಾಧಿಕಾಗೆ ಸಹಾಯ ಮಾಡ್ತಾ ಇದ್ದಾರೆ ನಮ್ಮ ಮುದ್ದು ಮುದ್ದು ಕ್ಯೂಟ್ ಬೇಬಿ 'ಐರಾ'. ಐರಾ ಬೇಬಿ ರಾಕಿಂಗ್ ಸ್ಟಾರ್ ಗೆ ವಿಶ್ ಮಾಡಿದ್ದು ಹೇಗೆ ಅನ್ನೋದನ್ನ ನೀವೇ ನೋಡಿ...

ಈ ವರ್ಷ ಯಶ್ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಸಜ್ಜಾಗಿರುವ ಅಭಿಮಾನಿಗಳು, ಬೆಂಗಳೂರಿನ ನಾಯಂಡಹಳ್ಳಿ ಬಳಿಯ ನಂದಿ ಲಿಂಕ್‌ ಗ್ರೌಂಡ್‌ನಲ್ಲಿ ಸಕಲ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ 5000 ಕೆಜಿ ತೂಕದ ಕೇಕ್‌ ರೆಡಿ ಮಾಡಿಸುತ್ತಿದ್ದಾರೆ. ಇದು ಭಾರತೀಯ ಚಿತ್ರರಂಗದ ಮಟ್ಟಿಗೆ ಒಂದು ದಾಖಲೆ ಎಂದೇ ಹೇಳಬಹುದಾಗಿದೆ. ಸದ್ಯ ಕೆಜಿಎಫ್‌-2 ಚಿತ್ರದ ಶೂಟಿಂಗ್‌ನಲ್ಲಿದ್ದ ಯಶ್‌ ಅಭಿಮಾನಿಗಳಿಗೆ ನಿರಾಸೆಯಾಗದಂತೆ ನೋಡಿಕೊಳ್ಳಲು ನಿನ್ನೆ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದಾರೆ.

ಮತ್ತೊಂದೆಡೆ ಈ ವರ್ಷವೂ ಯಶ್ ಜನ್ಮದಿನಕ್ಕೆ ಅಭಿಮಾನಿಗಳಿಗೆ ಗಿಫ್ಟ್ ನೀಡಿರುವ ಕೆಜಿಎಫ್ 2 ತಯಾರಕರು  ಹೊಸ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ.

Trending News