Visit To Space Station: ಮೊಟ್ಟಮೊದಲ ಬಾರಿಗೆ ಮೂವರು ಖಾಸಗಿ ವ್ಯಕ್ತಿಗಳು ಮುಂದಿನ ವರ್ಷ International Space Station ಗೆ ಭೇಟಿ ನೀಡಲಿದ್ದಾರೆ.
Visit To Space Station: ಮೊಟ್ಟಮೊದಲ ಬಾರಿಗೆ ಮೂವರು ಖಾಸಗಿ ವ್ಯಕ್ತಿಗಳು ಮುಂದಿನ ವರ್ಷ International Space Station ಗೆ ಭೇಟಿ ನೀಡಲಿದ್ದಾರೆ. ಇದಕ್ಕಾಗಿ ಅವರು ಪ್ರತ್ಯೇಕ 400 ಕೋಟಿ ರೂ. ಹಣ ಪಾವತಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಮೊದಲ ಖಾಸಗಿ ಯಾತ್ರೆಯಾಗಿರಲಿದೆ. ಇದು ಈ ಹಿಂದೆ ಎಂದಿಗೂ ಸಂಭವಿಸಿಲ್ಲ.
ಇದನ್ನು ಓದಿ - Antarctica ಶ್ವೇತ ಹಿಮಚಾದರದ ಮೇಲೆ ದಿಗ್ಭ್ರಮೆಗೊಳಿಸುವ ವಿಚಿತ್ರ ಆಕೃತಿ.! NASA ಪಂಡಿತರಿಗೂ ಸಿಗುತ್ತಿಲ್ಲ ಉತ್ತರ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮೊದಲ ಖಾಸಗಿ ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿಗಳನ್ನು ಮಂಗಳವಾರ ಪರಿಚಯಿಸಲಾಗಿದೆ. ಸ್ಪೇಸ್ಎಕ್ಸ್ ರಾಕೆಟ್ (SpaceX rocket)ನೊಂದಿಗೆ ಹಾರಲು ಮೂವರು ಖಾಸಗಿ ಜನರನ್ನು ಸಹ ಆಯ್ಕೆ ಮಾಡಲಾಗಿದೆ, ಅಂದರೆ ಮುಂದಿನ ವರ್ಷ ಮೂವರ ಖಾಸಗಿ ಪ್ರಯಾಣಿಕರು ಬಾಹ್ಯಾಕಾಶ ಕೇಂದ್ರಕ್ಕೆ ಹೋಗುತ್ತಾರೆ.
ಈ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಭೂಮಿಯಿಂದ ಸುಮಾರು 420 ಕಿ.ಮೀ ದೂರದಲ್ಲಿದೆ. ಈ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡುವುದು ಹಲವರ ಕನಸಾಗಿದೆ ಆದರೆ. ಪ್ರಸ್ತುತ ಈ ಅವಕಾಶ ಕೇವಲ ಮೂರು ಜನರಿಗೆ ಮಾತ್ರ ಸಿಗುತ್ತಿದೆ. ಈ ಯಾತ್ರೆಗಾಗಿ ಜನರು ಭಾರಿ ಪ್ರಮಾಣದಲ್ಲಿ ಹಣ ನೀಡಲು ಸಿದ್ಧರಿದ್ದಾರೆ.
ಈ ಸ್ಪೇಸ್ ಯಾತ್ರೆಗೆ ಆಯ್ಕೆಯಾದ ಮೂವರು ಕೋಟ್ಯಾಧಿಪತಿಯಾಗಿದ್ದಾರೆ. ಈ ಯಾತ್ರೆಗಾಗಿ ಅವರು ಪ್ರತ್ಯೇಕ 400 ಕೋಟಿ ರೂ. ಶುಲ್ಕ ಪಾವತಿಸಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಲಿರುವ ಮೂವರು ವ್ಯಕ್ತಿಗಳ ಹೆಸರು 1. ಐಟಾನ್ ಸ್ಟಿಬೆ (Eytan Stibbe) 2. ಮಾರ್ಕ್ ಪೈಥಿ (Mark Pathy) ಹಾಗೂ 3. ಲ್ಯಾರಿ ಕಾನರ್ (Larry Connor) ಇದೆ. ಈ ಮೂವರು ಮುಂದಿನ ವರ್ಷ ಸ್ಪೇಸ್ ಸ್ಟೇಷನ್ ಯಾತ್ರಗೆ ತೆರಳಲಿದ್ದಾರೆ.
NASA ದ ಓರ್ವ ಮಾಜಿ ಬಾಹ್ಯಾಕಾಶ ಯಾತ್ರಿ ಈ ಮೂವರ ತಂಡದ ನೇತೃತ್ವ ವಹಿಸಲಿದ್ದಾರೆ. ಸದ್ಯ ಅವರು ಎಕ್ಸಿ ಓಂ ಸ್ಪೇಸ್ ಗಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಪ್ರಸ್ತಾವಿಸಲಾಗಿರುವ ಈ ಯಾತ್ರೆಯ ವ್ಯವಸ್ಥೆಯನ್ನು ಹ್ಯೂಸ್ಟನ್ ಕಂಪನಿ ಮಾಡಿದೆ.