7th pay commission : LTC Claim ಸರಳಗೊಳಿಸಿದ ಕೇಂದ್ರ ಸರ್ಕಾರ, ಏನೆಲ್ಲಾ ಬದಲಾವಣೆ ಆಗಿದೆ ಗೊತ್ತಾ?

ಕೇಂದ್ರ ಸರ್ಕಾರಿ ನೌಕರರರಿಗೊಂದು ಸಿಹಿ ಸುದ್ದಿಯಿದೆ. ಕೇಂದ್ರ ಸರ್ಕಾರವು ಆಫೀಸ್ ಮೆಮರಾಂಡಂನಲ್ಲಿ  ಮೂರು ಪ್ರಮುಖ ನಿರ್ಧಾರಗಳನ್ನು ಫೋಷಿಸಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರು ನಿರಾಳ ಹೊಂದುವಂತಾಗಿದೆ.

7th Pay Commission:  ಕೇಂದ್ರ ಸರ್ಕಾರಿ ನೌಕರರರಿಗೊಂದು ಸಿಹಿ ಸುದ್ದಿಯಿದೆ. ಅದೆಷ್ಟೋ ಜನ  Leave Travel Concessionನ ಲಾಭ ಪಡೆಯುವ ಉದ್ದೇಶದಿಂದ ವಿಮಾನ ಮತ್ತು ರೈಲಿನ ಟಿಕೆಟ್ ಗಳನ್ನು ಮುಂಗಡವಾಗಿ ಕಾಯ್ದಿರಿಸುತ್ತಾರೆ. ಕಳೆದ ವರ್ಷವೂ ಹೀಗೆ ಆಗತ್ತು. ಆದರೆ ಕರೋನಾ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್  ಕಾರಣದಿಂದ ವಿಮಾನ ಹಾರಾಟ ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಣ ಬೆಳೆಸುವುದು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಆಫೀಸ್ ಮೆಮರಾಂಡಂನಲ್ಲಿ  ಮೂರು ಪ್ರಮುಖ ನಿರ್ಧಾರಗಳನ್ನು ಫೋಷಿಸಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರು ನಿರಾಳ ಹೊಂದುವಂತಾಗಿದೆ.

1 /4

ಲಾಕ್ ಡೌನ್ ವೇಳೆ ವಿಮಾನಯಾನ ಕಂಪನಿಗಳು ಕನ್ಫರ್ಮ್ ಆದ ಟಿಕೆಟನ್ನು ಕೂಡಾ ರದ್ದುಪಡಿಸಿತ್ತು. ಟಿಕೆಟ್ ರದ್ದುಪಡಿಸಿದ ನಂತರ ಪ್ರಯಾಣಿಕರಿಗೆ ಟಿಕೆಟ್ ಹಣವನ್ನು ಪಾವತಿಸಲೂ ಇಲ್ಲ. ಇದರ ಬದಲಾಗಿ,  ಈ ಹಣವನ್ನು ಕ್ರೆಡಿಟ್ ಶೆಲ್ ಗೆ ವರ್ಗಾಯಿಸಲಾಗಿತ್ತು.ಅಂದರೆ, ಒಂದು ವರ್ಷದೊಳಗೆ ಪ್ರಯಾಣಿಕರು ಮತ್ತೆ ವಿಮಾನ ಪ್ರಯಾಣ ಮಾಡಬೇಕಾದರೆ ಈ ಮೊತ್ತವನ್ನು ಬಳಸಬಹುದು. ಇದು  ಕೇಂದ್ರ ಸರ್ಕಾರಿ ನೌಕರನ್ನು ಫಜೀತಿಗೆ ಸಿಲುಕಿಸಿತ್ತು. ಯಾಕೆಂದರೆ ಒಂದು ವೇಳೆ ಕೆಂದ್ರ ಸರ್ಕಾರಿ ನೌಕರರು,  ಪ್ರಯಾಣ ಬೆಳೆಸದಿದ್ದರೆ, LTC ಅಡ್ವಾನ್ಸ್ ಜೊತೆಗೆ ಬಡ್ಡಿಯನ್ನುಕೂಡಾ ಪಾವತಿಸಬೇಕಾಗುತ್ತದೆ.

2 /4

ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಎಲ್‌ಟಿಸಿಗೆ ರದ್ದತಿ ಶುಲ್ಕವನ್ನು ಪಾವತಿಸಬೇಕಾದ ನೌಕರರಿಗೆ ರದ್ದತಿ ಶುಲ್ಕವನ್ನು ಮರುಪಾವತಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಿಮಾನಯಾನ ಟಿಕೆಟ್ ರದ್ದಾದಾಗ ನೌಕರರು ದೊಡ್ಡಮೊತ್ತವನ್ನು ಪಾವತಿಸಬೇಕಾಗಿತ್ತು. ಹಾಗಾಗಿ, ಈ ಶುಲ್ಕವನ್ನು ಮರುಪಾವತಿ ಮಾಡುವಂತೆ ನೌಕರರು ಬೇಡಿಕೆಯನ್ನು ಸಲ್ಲಿಸಿದ್ದರು. ಇದೀಗ ಸರ್ಕಾರ ಈ ಬೇಡಿಕೆಗೆ ಸಮ್ಮತಿ ಸೂಚಿಸಿದೆ.

3 /4

DoPTಪ್ರಕಾರ, ರಾಷ್ಟ್ರವ್ಯಾಪಿ ಲಾಕ್ ಡೌನ್ ವೇಳೆ, ದೇಶೀಯ ವಿಮಾನ  ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.  ಲಾಕ್ ಡೌನ್ ಅವಧಿಯಲ್ಲಿ ಎಲ್ಲಾ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಟಿಕೆಟ್‌ಗಳನ್ನು ರದ್ದುಗೊಳಿಸಿತ್ತು. ಕೆಲವು ವಿಮಾನಯಾನ ಸಂಸ್ಥೆಗಳು ಮೊದಲೇ ಕಾಯ್ದಿರಿಸಿದ ಟಿಕೆಟ್‌ಗಳಿಗೆ ರದ್ದತಿ ಶುಲ್ಕವನ್ನು ವಿಧಿಸಿವೆ. ಈ ಅವಧಿಯಲ್ಲಿ ಎಲ್‌ಟಿಸಿ ಸವಲತ್ತುಗಳಿಗಾಗಿ ಮುಂಚಿತವಾಗಿ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದ ಕೇಂದ್ರ ನೌಕರರು ರದ್ದತಿ ಶುಲ್ಕದಿಂದ ತೊಂದರೆ ಅನುಭವಿಸಬೇಕಾಯಿತು.

4 /4

DoPTಯ ಆಫೀಸ್ ಮೆಮರಾಂಡಂ ಪ್ರಕಾರ, ಕರೋನಾ ಲಾಕ್‌ಡೌನ್ ಅವಧಿಯಲ್ಲಿ ಬುಕ್ ಮಾಡಿದ LTC ಟಿಕೆಟ್‌ಗಳನ್ನು ಸಹ ಅನೇಕ ವಿಮಾನಯಾನ ಸಂಸ್ಥೆಗಳು ಮರುಪಾವತಿ ಮಾಡಿಲ್ಲ. ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಈ ಹಣವನ್ನು ತಮ್ಮ ಕ್ರೆಡಿಟ್ ಶೆಲ್ ಗಳಿಗೆ ವರ್ಗಾಯಿಸಿದೆ.  ಒಂದು ವರ್ಷದೊಳಗೆ ವಿಮಾನಯಾನ ಮಾಡುವ ವೇಳೆ  ಈ ಮೊತ್ತವನ್ನು ಬಳಸಬಹುದು ಎಂಬ ಆಯ್ಕೆಯನ್ನು ಕಂಪನಿಗಳು ನೀಡಿವೆ.  ಕೇಂದ್ರ ನೌಕರರು ಎಲ್‌ಟಿಸಿ ಅಡ್ವಾನ್ಸ್  ಅನ್ನು ಬಡ್ಡಿಯೊಂದಿಗೆ ಹಿಂದಿರುಗಿಸಬೇಕಾಗಿರುವುದರಿಂದ ನೌಕರರಿಗೆ ಕಷ್ಟ ಅನುಭವಿಸಬೇಕಾಯಿತು ಎಂದು ಮೆಮರಾಂಡಂನಲ್ಲಿ ಹೇಳಿದೆ.