CBSE Board Exam 2021: CBSE ಹೊಸ ನಿಯಮ, ಈ ಪರೀಕ್ಷೆಯಲ್ಲಿ ಯಾರಿಗೂ ಕೂಡ Fail ಮಾಡಲಾಗುವುದಿಲ್ಲ

CBSE Board Exam 2021: ಸಿಬಿಎಸ್‌ಇ (CBSE)ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟಗೊಂಡಿದೆ. ಸಿಬಿಎಸ್‌ಇ ಮಂಡಳಿಯ ಹೊಸ ನಿಯಮಗಳ ಪ್ರಕಾರ, ಈಗ ಯಾವುದೇ ವಿದ್ಯಾರ್ಥಿಯನ್ನು 10 ನೇ ತರಗತಿಯಲ್ಲಿ (CBSE Board Exams 2021) FAIL ಮಾಡಲಾಗುವುದಿಲ್ಲ. 

Written by - Nitin Tabib | Last Updated : Jan 30, 2021, 08:49 PM IST
  • ಇನ್ಮುಂದೆ 10ನೇ ತರಗತಿಯಲ್ಲಿ ಯಾವುದೇ ವಿದ್ಯಾರ್ಥಿ-ವಿದ್ಯಾರ್ಥಿಯರನ್ನು ಫೇಲ್ ಮಾಡಲಾಗುವುದಿಲ್ಲ.
  • CBSE ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ.
  • ನೂತನ ಶಿಕ್ಷಣ ನೀತಿಯ ಹಿನ್ನೆಲೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ.
CBSE Board Exam 2021: CBSE ಹೊಸ ನಿಯಮ, ಈ ಪರೀಕ್ಷೆಯಲ್ಲಿ ಯಾರಿಗೂ ಕೂಡ Fail ಮಾಡಲಾಗುವುದಿಲ್ಲ title=
CBSE Board Exam 2021 (File Photo)

ನವದೆಹಲಿ: CBSE Board Exam 2021 - ಸಿಬಿಎಸ್‌ಇ (CBSE)ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟಗೊಂಡಿದೆ. ಸಿಬಿಎಸ್‌ಇ ಮಂಡಳಿಯ ಹೊಸ ನಿಯಮಗಳ ಪ್ರಕಾರ, ಈಗ ಯಾವುದೇ ವಿದ್ಯಾರ್ಥಿಯನ್ನು 10 ನೇ ತರಗತಿಯಲ್ಲಿ (CBSE Board Exams 2021) FAIL ಮಾಡಲಾಗುವುದಿಲ್ಲ. ಕೆಲ ಅಂಕಗಳ ಕೊರತೆಯಿಂದಾಗಿ, ಪ್ರತಿ ವರ್ಷ ಹಲವು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ ಮತ್ತು ಅವರ ಇಡೀ ವರ್ಷ ವ್ಯರ್ಥವಾಗುತ್ತದೆ. ಹೊಸ ನಿಯಮದ ಪ್ರಕಾರ, ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಕೂಡ  11 ನೇ ತರಗತಿಗೆ ಬಡ್ತಿ ನೀಡಲಾಗುವುದು.

ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಡ್ಯೂಕೆಶನ್ (CBSE) ಶಾಲೆಗಳಲ್ಲಿ ಓದುತ್ತಿರುವ ವಿಧ್ಯಾರ್ಥಿಗಳಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಸ್ಕಿಲ್ ಇಂಡಿಯಾ (Skill India)ಗುರಿಯನ್ನು ಗಮನದಲ್ಲಿಟ್ಟುಕೊಂಡು ಸಿಬಿಎಸ್ಇ ಬೋರ್ಡ್ (CBSE Board) ನೂತನ ನಿಯಮಗಳನ್ನು ರೂಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಲವು ಲಾಭಗಳು ಸಿಗಲಿವೆ.

ನೂತನ ನಿಯಮಗಳ ಅನುಸಾರ CBSE ವಿದ್ಯಾರ್ಥಿಗಳಿಗೆ ಇನ್ಮುಂದೆ 10 ನೇ ತರಗತಿಯ ಪರೀಕ್ಷೆಯಲ್ಲಿ ಫೇಲ್ ಮಾಡಲಾಗುವುದಿಲ್ಲ. ಹಲವು ವಿದ್ಯಾರ್ಥಿಗಳು ಗಣಿತ ಹಾಗೂ ಸೈನ್ಸ್ ವಿಷಯಗಳಲ್ಲಿ ಫೇಲ್ ಆಗುತ್ತಾರೆ. ಆದರೆ, ಒಂದು ವೇಳೆ ಅವರು ಕಂಪ್ಯೂಟರ್ ಅಥವಾ ಇತರ ಯಾವುದೇ ವಿಷಯದಲ್ಲಿ ಪರಿಣಿತಿ ಹೊಂದಿದ್ದರೆ. ಒಂದು ಅಥವಾ ಎರಡು ವಿಷಯಗಳಲ್ಲಿ ದೊರೆತ ಕಡಿಮೆ ಅಂಕಗಳ ಆಧಾರದ ಮೇಲೆ ಅವರನ್ನು ಫೇಲ್ ಮಾಡಲಾಗುವುದಿಲ್ಲ.

ಇದನ್ನು ಓದಿ- CBSE ಬೋರ್ಡ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಇದು ಬೆಸ್ಟ್ ಟ್ರಿಕ್

ವಿದ್ಯಾರ್ಥಿಗಳ ವರ್ಷ ಹಾಳಾಗುವುದಿಲ್ಲ
CBSE ವತಿಯಿಂದ ನಿರ್ಧರಿಸಲಾಗಿರುವ ಸ್ಕಿಲ್ ಬೇಸ್ಡ್ ಲರ್ನಿಂಗ್ ಪ್ರೊಗ್ರಾಮ್ ನಲ್ಲಿ ವಿದ್ಯಾರ್ಥಿಗಳು ಅಭಿರುಚಿ ಕೂಡ ಹೆಚ್ಚಾಗುತ್ತಿದೆ. 2020 ರ ಶೈಕ್ಷಣಿಕ ವರ್ಷದಲ್ಲಿ ಶೇ.20 ರಷ್ಟು ಜನರು ತಮ್ಮ ಸ್ಕಿಲ್ ಗೆ ತಕ್ಕಂತೆ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರೆ, 2021ರಲ್ಲಿ ಶೇ.30ರಷ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಸ್ಕಿಲ್ ಗೆ ತಕ್ಕಂತೆ ವಿಷಯಗಳನ್ನು ಆಯ್ಕೆ ಮಾಡಿದ್ದಾರೆ. ಒಂದು ವೇಳೆ ಯಾವುದೇ ವಿದ್ಯಾರ್ಥಿ ಓದಿನಲ್ಲಿ ಉತ್ತಮವಾಗಿಲ್ಲದಿದ್ದರೂ, ಅದರಿಂದ ವಿದ್ಯಾರ್ಥಿಗೆ ಯಾವುದೇ ಹಾನಿಯಾಗುವುದಿಲ್ಲ.

ಇದನ್ನು ಓದಿ- ಲಾಕ್‌ಡೌನ್‌ನಲ್ಲಿ ಬೇರೆಡೆ ಸಿಲುಕಿರುವ ವಿದ್ಯಾರ್ಥಿಗಳಿಗೆ ಪರಿಹಾರ ನೀಡಿದ CBSE

ನೂತನ ಶಿಕ್ಷಣ ನೀತಿಯ ಹಿನ್ನೆಲೆ ಹಲವು ಶಾಲೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗುವುದು. ಇತ್ತೀಚೆಗಷ್ಟೇ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖರಿಯಾಲ್ ನಿಶಾಂಕ್ CBSE ಪ್ರಮುಖರ ಜೊತೆಗೆ ಈ ಕುರಿತು ಚರ್ಚೆ ನಡೆಸಿದ್ದಾರೆ. ಈ ಚರ್ಚೆಯ ಸಂದರ್ಭದಲ್ಲಿ ಅವರು ನೂತನ ಶಿಕ್ಷಣ ನೀತಿ ಜಾರಿ ಕುರಿತು ಪ್ರಮುಖವಾಗಿ ಚರ್ಚಿಸಿದ್ದಾರೆ.

ಇದನ್ನು ಓದಿ- CBSE 12ನೇ ಮತ್ತು 10ನೇ ತರಗತಿಯ ಉಳಿದ ವಿಷಯಗಳ ಪರೀಕ್ಷೆಗಳಿಗಾಗಿ ವೇಳಾಪಟ್ಟಿ ಬಿಡುಗಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News