ಬೆಂಗಳೂರು : ಇನ್ನು ಮುಂದೆ ರಾಜ್ಯದ ಎಲ್ಲಾ ದೇವಸ್ಥಾನ (Temple), ಮಠ, ಮಂದಿರಗಳಲ್ಲಿ ಬೃಹತ್ ಜಾತ್ರೆ, ಬ್ರಹ್ಮರಥೋತ್ಸವ, ವಿಶೇಷ ಉತ್ಸವ, ಅನ್ನ ದಾಸೋಹ, ಪ್ರಸಾದ ವಿತರಣೆ ಇತ್ಯಾದಿ ಪೂಜಾ ಕೈಂಕರ್ಯಗಳನ್ನು ನಡೆಸಬಹುದಾಗಿದೆ. ರಾಜ್ಯ ಸರ್ಕಾರ ಈ ಸಂಬಂಧ ಆದೇಶವನ್ನು ಹೊರಡಿಸಿದೆ. ಕರೋನಾ (Covid 19) ಹಿನ್ನೆಲೆಯಲ್ಲಿ ರಾಜ್ಯ ಸಕಾರ ಎಲ್ಲಾ ರೀತಿಯ ಧಾರ್ಮಿಕ ಆಚರಣೆಗಳನ್ನು (Religious Fair) ನಿಷೇಧಿಸಿತ್ತು. 2020ರ ಸೆಪ್ಟೆಂಬರ್ 1 ರಂದು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಷರತ್ತಿಗೆ ಒಳಪಟ್ಟು ದೈನಂದಿನ ಪೂಜಾ ವಿಧಿಗಳಿಗೆ ಅವಕಾಶ ನೀಡಲಾಗಿತ್ತು ಆದರೆ, ಸಿಕ್ಕಾಪಟ್ಟೆ ಜನರು ಸೇರುವ ಜಾತ್ರೆ, ಬ್ರಹ್ಮರಥೋತ್ಸವ ಮುಂತಾದ ಧಾರ್ಮಿಕ ಕಾರ್ಯಗಳಿಗೆ ನಿಷೇಧ ಹಾಗೇ ಮುಂದುವರಿದಿತ್ತು.
ಜಾತ್ರೆ ಪರ್ವಗಳಿಗೆ ಅವಕಾಶ ನೀಡುವಂತೆ ಹಿಂದೂ ನಾಯಕರ ಮನವಿ:
ಜಾತ್ರೆ, ಪರ್ವಗಳಿಗೆ ಅವಕಾಶ ನೀಡದೇ ಇರುವ ಸರ್ಕಾರದ (Karnataka government) ಧೋರಣೆ ಹಲವು ಹಿಂದೂ ಧಾರ್ಮಿಕ ನಾಯಕರ ಆಕ್ಷೇಪಕ್ಕೆ ಕಾರಣವಾಗಿತ್ತು. ಹಾಗಾಗಿ ನಾನಾ ಭಾಗದ ಹಿಂದೂ (hindu) ಧಾರ್ಮಿಕ ನಾಯಕರು, ಜಾತ್ರೆ ಹಬ್ಬಳಿಗೆ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ : Siddaramaiah: 'ಕುರುಬ ಸಮುದಾಯಕ್ಕೆ ಏಕಾಏಕಿ ಎಸ್‌ಟಿ ಮೀಸಲಾತಿ ಸಿಗಲ್ಲ'
ಪರಾಮರ್ಶೆ ನಡೆಸಿದ ಸರ್ಕಾರ :
ಮಠ, ಮಂದಿರಗಳಲ್ಲಿ ವಾರ್ಷಿಕ ಜಾತ್ರೆಗಳಿಗೆ ಅವಕಾಶ ನೀಡುವಂತೆ ಕೋರಿ ಮನವಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹಲವು ಇಲಾಖೆಗಳ ಜೊತೆ ಪರಾಮರ್ಶೆ ನಡೆಸಿತ್ತು. ಆರೋಗ್ಯ (Health) ಇಲಾಖೆಯ ಅಭಿಪ್ರಾಯವನ್ನೂ ಕೂಡಾ ಪರಿಗಣಿಸಿತ್ತು. ಬಳಿಕ ಧಾರ್ಮಿಕ ಉತ್ಸವಗಳಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಿಸಿತ್ತು.
ಜಾತ್ರೆ ನಡೆಸಬಹುದು, ಆದರೆ ಷರತ್ತು ಅನ್ವಯ..!
ಈಗ ರಾಜ್ಯದ ಎಲ್ಲಾ ಮಠ, ಮಂದಿರ, ದೇಗುಲಗಳಲ್ಲಿ (Temple) ವಾರ್ಷಿಕ ಉತ್ಸವಗಳನ್ನು ಆಯೋಜಿಸಬಹುದಾಗಿದೆ. ಆದರೆ ಈ ಸಂದರ್ಭದಲ್ಲಿ ಕರೋನಾ ಮಾರ್ಗಸೂಚಿ (Corona guidelines) ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇ ಬೇಕಾಗಿದೆ. ಈ ಷರತ್ತನ್ನು ಪಾಲಿಸುವುದಾದರೆ ಮಾತ್ರ ದೇವಾಲಯಗಳಲ್ಲಿ ಬೃಹತ್ ಜಾತ್ರೆ ಆಯೋಜಿಸಬಹುದಾಗಿದೆ.
ಇದನ್ನೂ ಓದಿ : BS Yediyurappa: ಸಿಎಂ ಬಿಎಸ್‌ವೈ ಭೇಟಿಯಾದ 40 ಜನ ಸ್ವಾಮೀಜಿಗಳ ದಂಡು..!
ಕರೋನಾ (Coronavirus) ಕಾರಣದಿಂದ ಕಳೆದ ವರ್ಷ ರಾಜ್ಯದ ಯಾವುದೇ ಮಠಮಂದಿರಗಳಲ್ಲಿ ವಾರ್ಷಿಕ ಜಾತ್ರೆ, ರಥೋತ್ಸವ, ವಿಶೇಷ ಉತ್ಸವ ನಡೆದಿರಲಿಲ್ಲ. ವೈಶಾಖ ಋತುವಿನಲ್ಲಿ ಸಾಮಾನ್ಯವಾಗಿ ರಾಜ್ಯದ ಎಲ್ಲಾ ಕಡೆ ಉತ್ಸವಗಳು ಆರಂಭವಾಗುತ್ತದೆ. ಈ ಸಲ ವಿಶೇಷ ಷರತ್ತಿನ ಮೇಲೆ ದೇವಸ್ಥಾನಗಳ ವಾರ್ಷಿಕ ಉತ್ಸವಗಳು ನಡೆಯಲಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.