BS Yediyurappa: ಸಿಎಂ ಬಿಎಸ್‌ವೈ ಭೇಟಿಯಾದ 40 ಜನ ಸ್ವಾಮೀಜಿಗಳ ದಂಡು..!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮಠಗಳಿಂದ ಎದುರಾಗಿದೆ ಕಂಟಕ

Last Updated : Feb 9, 2021, 06:16 PM IST
  • ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮಠಗಳಿಂದ ಎದುರಾಗಿದೆ ಕಂಟಕ
  • ಅಧಿಕಾರಕ್ಕೆ ಬಂದ ನಂತರ ಮಠಗಳಲ್ಲಿ ಬಹುತೇಕ ಅನುದಾನ ರೂಪದಲ್ಲಿ ಲಕ್ಷ-ಲಕ್ಷ ಹಣ ನೀಡದ್ದ ಬಿ.ಎಸ್. ಯಡಿಯೂರಪ್ಪ
  • ಮೀಸಲಾತಿ ಕಿಚ್ಚಿನ ಮಧ್ಯೆ 40ಕ್ಕೂ ಹೆಚ್ಚು ಸ್ವಾಮೀಜಿಗಳು ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿದ್ದಾರೆ
BS Yediyurappa: ಸಿಎಂ ಬಿಎಸ್‌ವೈ ಭೇಟಿಯಾದ 40 ಜನ ಸ್ವಾಮೀಜಿಗಳ ದಂಡು..! title=

ಬೆಂಗಳೂರು: ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಠಗಳಲ್ಲಿ ಬಹುತೇಕ ಅನುದಾನ ರೂಪದಲ್ಲಿ ಲಕ್ಷ-ಲಕ್ಷ ಹಣ ಕೊಟ್ಟಿದ್ದಾರೆ. ಇದೀಗ ಅದೇ ಮಠಗಳಿಂದ ಕಂಟಕ ಎದುರಾಗಿದೆ.

ಬಹುತೇಕ ಸಮುದಾಯಗಳ ಮೀಸಲಾತಿ ಹೋರಾಟದ ಕಿಚ್ಚು ರಾಜ್ಯದಲ್ಲಿ ಜೋರಾಗಿದೆ. ಅದರಂತೆ ಇಂದು ಸಿಎಂ ಬಿ.ಎಸ್​.ಯಡಿಯೂರಪ್ಪ(BS Yediyurappa) ಅವರನ್ನ 40ಕ್ಕೂ ಹೆಚ್ಚು ಸ್ವಾಮೀಜಿಗಳು ಭೇಟಿ ಮಾಡಿ ವಿವಿಧ ಬೇಡಿಕೆ ಈಡೇರಿಕೆ ಮನವಿ ಮಾಡಿದರು. ಹಾಗಾದ್ರೆ ಸ್ವಾಮೀಜಿಗಳ ತಂಡ ಏನೆಲ್ಲಾ ಬೇಡಿಕೆ ಇಟ್ಟಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

H Vishwanath: 'ನಾನು-ಹೊರಟ್ಟಿ ಮಂತ್ರಿಯಾಗಿದ್ದರೆ ಮೈತ್ರಿ ಸರ್ಕಾರ ಪತನವಾಗುತ್ತಿರಲಿಲ್ಲ'

ಮೀಸಲಾತಿ ಕಿಚ್ಚಿನ ಮಧ್ಯೆ 40ಕ್ಕೂ ಹೆಚ್ಚು ಸ್ವಾಮೀಜಿಗಳು(Swamiji) ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರನ್ನ ಭೇಟಿ ಮಾಡಿದರು. 

Valmiki Seer: ಸತ್ತರೇ ಇಲ್ಲೇ ಸಾಯ್ತೇನೆ ಎಂದು ಸಿಎಂ ಮುಂದೆಯೇ ಹೇಳಿದ ವಾಲ್ಮೀಕಿ ಶ್ರೀ..!

ವಿಜಯಪುರ ಜಿಲ್ಲೆ ಭಾಗದ ಸ್ವಾಮೀಜಿಗಳ ನಿಯೋಗ ಮೂರು ಟಿಟಿ ವಾಹನದಲ್ಲಿ ಬೆಂಗಳೂರಿಗೆ ಬಂದು, ಸಿಎಂ ನಿವಾಸ ಕಾವೇರಿಯಲ್ಲಿ ಬಿಎಸ್‌ವೈ ಅವರನ್ನ ಭೇಟಿ ಮಾಡಿದರು.

Siddaramaiah: ಬಾಲ್ಯದಲ್ಲಿ ಸಿದ್ದರಾಮಯ್ಯ '₹ 5' ಗೆ ಕುರಿ ಖರೀದಿಸಿ, ಎಷ್ಟು ಲಾಭ ಗಳಿಸಿದ್ರು ಗೊತ್ತಾ?

ವಿಜಯಪುರ ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು. ಅಲ್ಲದೇ ಇದೇ ವೇಳೆ ವೀರಶೈವ ಲಿಂಗಾಯತ(Veerashaiva Lingayat) ಸಮುದಾಯದ ಒಳಪಂಗಡಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕೆಂದು ಸಿಎಂಗೆ ಸ್ವಾಮೀಜಿಗಳಿಗೆ ಮನವಿ ಮಾಡಿದರು.

HD Devegowda: 'ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ್ರು ಸೋತಿದ್ದು ತೃಪ್ತಿ ತಂದಿದೆ'

ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳಿಗೆ ಮೀಸಲಾತಿ ಕೊಡಲು ಮನವಿ ಮಾಡಿದರು. 106 ಒಳಪಂಗಡಗಳು ಲಿಂಗಾಯತರಲ್ಲಿವೆ. 32 ಒಳಪಂಗಡಗಳು ಒಬಿಸಿ ಯಡಿ ಸೇರಿವೆ. ಉಳಿದ 74 ಒಳಪಂಗಡಗಳನ್ನ ಮೀಸಲಾತಿಗೆ ಸೇರಿಸಬೇಕೆಂದು‌ ಮನವಿ ಮಾಡಿದರು.

School: ಶಾಲಾ ಮಕ್ಕಳ ಬೇಸಿಗೆ ರಜೆ ಕುರಿತು ಮಹತ್ವದ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ

Trending News